Advertisement

ಪವಾಡ; ಬೆನ್ನಿಗೆ ಉಗ್ರರ ಗುಂಡು ಹೊಕ್ಕರೂ ಹೆಣ್ಣು ಮಗುವಿಗೆ ಜನ್ಮ!

10:37 AM Feb 11, 2018 | |

ಸಂಜ್ವಾನ್‌: ಜಮ್ಮು ಕಾಶ್ಮೀರದ ಹೊರವಲಯದ ಸಂಜ್ವಾನ್‌ನಲ್ಲಿರುವ ಸೇನಾ ಸಿಬ್ಬಂದಿ ವಸತಿ ನಿಲಯದ ಮೇಲೆ  ಶನಿವಾರ ಜೈಶ್‌ ಎ ಮೊಹಮ್ಮದ್‌ ಉಗ್ರರು ನಡೆಸಿದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಂಬು ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

Advertisement

ಬೆನ್ನಿನ ಕೆಳ ಭಾಗಕ್ಕೆ ಗುಂಡು ಹೊಕ್ಕಿ  ವಪಾಡ ಸದೃಶವಾಗಿ ಪಾರಾಗಿದ್ದ 35 ವಾರಗಳ ತುಂಬು ಗರ್ಭಿಣಿಯನ್ನು ದಾಳಿ ನಡೆದ ಕೂಡಲೆ ಸೇನಾ ಪಡೆಗಳು ಹೆಲಿಕ್ಯಾಪ್ಟರ್‌ ಬಳಸಿ ಸೇನಾ ಆಸ್ಪತ್ರೆಗೆ ದಾಖಲಿಸಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಗಿದ್ದು, ಹೆಣ್ಣು ಮಗು 2.5 ಕೆ.ಜಿ ತೂಕವಿದ್ದು ಆರೋಗ್ಯವಾಗಿದೆ ಎಂದು ವರದಿಯಾಗಿದೆ. ತಾಯಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 

ಕ್ಯಾಂಪ್‌ನಲ್ಲಿ ಇನ್ನೂ ಕೆಲ ಉಗ್ರರು ಅಡಗಿರುವ ಸಾಧ್ಯತೆ ಹಿನ್ನಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. 

ಐವರು ಯೋಧರು ಹುತಾತ್ಮ 

ಉಗ್ರರ ದಾಳಿಯಲ್ಲಿ ಸೇರಿ 5 ಯೋಧರು ಇಬ್ಬರು ಜ್ಯೂನಿಯರ್‌ ಕಮಿಷನ್ಡ್‌  ಆಫೀಸರ್‌ (ಜೆಸಿಒ) ಹುತಾತ್ಮರಾಗಿದ್ದು,  ಇತರ 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸೇನಾ ಮೇಜರ್‌ ಹಾಗೂ ಸೇನಾ ಸಿಬ್ಬಂದಿ ಪುತ್ರಿಯೂ ಸೇರಿದ್ದಾರೆ. ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next