Advertisement

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!

09:45 PM May 07, 2024 | Team Udayavani |

ನವದೆಹಲಿ: ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರ 3ನೇ ಬಾಹ್ಯಾಕಾಶಯಾನ ಇನ್ನೇನು 90 ನಿಮಿಷಗಳಿದ್ದಾಗ ರದ್ದಾಗಿದೆ.

Advertisement

ಬೋಯಿಂಗ್‌ ಸ್ಟಾರ್‌ಲೈನರ್‌ ಖಾಸಗಿ ನೌಕೆ ಮೂಲಕ ಹೊರಟಿದ್ದ ನಾಸಾದ ಬ್ಯಾರಿ ವಿಲ್ಮೋರ್‌ ಮತ್ತು ಸುನೀತಾ ತಮ್ಮ ನೌಕೆಯಿಂದ ಸುರಕ್ಷಿತವಾಗಿ ಕೆಳಕ್ಕಿಳಿದಿದ್ದಾರೆ. ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ, ಗಗನಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಫ್ಲೋರಿಡಾದಿಂದ ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 8.04 ಗಂಟೆಗೆ ನೌಕೆ ಬಾಹ್ಯಾಕಾಶಕ್ಕೆ ಜಿಗಿಯಬೇಕಿತ್ತು. ಆದರೆ ನೌಕೆಯ ಆಮ್ಲಜನಕ ಬಿಡುಗಡೆ ವಾಲ್ಶ್ ನಲ್ಲಿ ದೋಷ ಪತ್ತೆಯಾಗಿದೆ. ಇದನ್ನು ಪರಿಗಣಿಸಿ ಯಾನ ಮುಂದೂಡಲಾಗಿದೆ. ಈ ನೂತನ ಖಾಸಗಿ ನೌಕೆಯ ಮೂಲಕ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಮೊದಲ ಮಹಿಳಾ ಯಾತ್ರಿ ಎಂಬ ದಾಖಲೆ ನಿರ್ಮಿಸಲು ಸುನೀತಾ ಸಜ್ಜಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next