Advertisement
ಹೌದು, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಜೊತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿದ್ದರೂ, ಚಿತ್ರದಲ್ಲಿ ಅವರ ಪಾತ್ರವೇನು, ಗೆಟಪ್ ಹೇಗಿರಲಿದೆ ಎಂಬ ಯಾವ ಮಾಹಿತಿಯೂ ಹೊರಬಿದ್ದಿರಲಿಲ್ಲ. ಇಲ್ಲಿಯವರೆಗೆ ಸುನೀಲ್ ಶೆಟ್ಟಿ ಅವರ ಗೆಟಪ್ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಇದೀಗ ಪೈಲ್ವಾನ್ ಪ್ರಮೋಶನ್ ಭಾಗವಾಗಿ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರ ಫಸ್ಟ್‌ಲುಕ್ ಅನ್ನು ಬಿಡುಗಡೆಗೊಳಿಸಿದೆ. ಇನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುನೀಲ್ ಶೆಟ್ಟಿ ಅವರ ಹೊಸಲುಕ್ ಫೋಟೋವನ್ನು ಶೇರ್ ಮಾಡಿದ್ದು, ಚಿತ್ರತಂಡದ ಪರವಾಗಿ ಸುನೀಲ್ ಸ್ವಾಗತ ಕೋರಿದ್ದಾರೆ. Advertisement
ಕಿಚ್ಚನಿಗೆ ಸುನೀಲ್ ಶೆಟ್ಟಿ ಸಾಥ್
12:22 PM May 26, 2019 | Vishnu Das |