ಬೆಂಗಳೂರು: ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶಂಖನಾದ ಅರವಿಂದ್ (70) ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಶಂಕನಾದ ಚಿತ್ರದ ಮೇರು ಅಭಿನಯದಿಂದಾಗಿ ಶಂಕನಾದ ಅರವಿಂದ್ ಎಂದೇ ಖ್ಯಾತರಾದ ಅವರು ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿರಿಯ ಚಿತ್ರನಟರೊಬ್ಬರನ್ನು ಕನ್ನಡ ಚಲನಚಿತ್ರರಂಗ ಕಳೆದುಕೊಂಡಾಂತಾಗಿದೆ.
ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟ ಪುನಿತ್ ರಾಜ್ ಕುಮಾರ್ ಅವರೊಂದಿಗಿನ ಹಾಡೊಂದು ಇಂದಿಗೂ ಕನ್ನಡ ಚಿತ್ರರಸಿಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಇದನ್ನೂ ಓದಿ:ಕಾಗ್ನಿಜೆಂಟ್ ನಿವ್ವಳ ಆದಾಯ ಶೇಕಡಾ 37.6 ರಷ್ಟು ಹೆಚ್ಚಳ
ಅಲ್ಲದೆ ಕನ್ನಡದ ಕಿರುತೆರೆಯಲ್ಲೂ ಅರವಿಂದ್ ಹೆಸರು ಮಾಡಿದ್ದರು. ಅಂತಹ ಮೇರು ಕಲಾವಿದ ಕೋವಿಡ್‍ಗೆ ಬಲಿಯಾಗಿರುವುದು ತುಂಬಾ ನೋವಿನ ಸಂಗತಿ. ಶಂಕನಾದ ಅರವಿಂದ್ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದು ಪುರಾಣಿಕ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.