Advertisement
ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಬಿ.ಜೆ.ಪಿ.ಯ ಸುನಿಲ್ ನಾಯ್ಕ ಈ ಬಾರಿ ಕ್ಷೇತ್ರವನ್ನು ಬಿಜೆಪಿಗೆ ಮತ್ತೆ ಒಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಭಟ್ಕಳದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ಅಭಿಮಾನಿಗಳು ಹೆಚ್ಚಿದ್ದು ಸುನಿಲ್ ನಾಯ್ಕಗೆ ಹೆಚ್ಚಿನ ಮತ ಬರಲು ಕಾರಣವಾಯಿತಲ್ಲದೇ ಕರಾವಳಿಯಲ್ಲಿಯೇ ಮೋದಿ ಅಲೆಯಲ್ಲಿ ಕಮಲ ಅರಳಿದ್ದು ಭಟ್ಕಳದಲ್ಲಿ ಕೂಡಾ ಕಮಲಕ್ಕೆ ಮೋದಿಯೇ ನೀರೆರೆದಿದ್ದು ಎನ್ನಲು ಅಡ್ಡಿಯಿಲ್ಲ.
Related Articles
Advertisement
ಭಟ್ಕಳ ಮತಕ್ಷೇತ್ರವಾದ ನಂತರ ಗೆದ್ದ ಆತ್ಯಂತ ಕಿರಿಯ ಶಾಸಕ (39) ಹಾಗೂ ಭಟ್ಕಳ ಮತಕ್ಷೇತ್ರದಲ್ಲಿ ಇಲ್ಲಿಯ ತನಕ ಅತ್ಯಂತ ಹೆಚ್ಚು ಮತಗಳನ್ನು ಪಡೆದು (83172) ಆಯ್ಕೆಯಾದ ಹೆಗ್ಗಳಿಕೆಗೆ ಸುನಿಲ್ ನಾಯ್ಕ ಭಾಜನರಾಗಿದ್ದಾರೆ.
ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಆರಿಸಿ ಬಂದಿರುವ ನೂತನ ಶಾಸಕ ಸುನಿಲ್ ನಾಯ್ಕ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಸಾವಿರಾರು ಜನರು ಇಲ್ಲಿನ ಶಂಶುದ್ದೀನ್ ಸರ್ಕಲ್‌ನಲ್ಲಿ ಸ್ವಾಗತಿಸಿದರು.
ಸುನಿಲ್ ನಾಯ್ಕ ಹಾಗೂ ಅನಂತಕುಮಾರ್ ಹೆಗಡೆ ಅವರು ಶಂಶುದ್ಧೀನ್ ಸರ್ಕಲ್‌ನಲ್ಲಿ ಬಂದಿಳಿಯುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ಮುತ್ತಿಗೆ ಹಾಕಿ ಜೈಕಾರ ಕೂಗಿದರು. ನಿರಂತರ ಜೈಕಾರ ಕೂಗುತ್ತಲೇ ಸ್ವಾಗತಿಸಿ ತೆರೆದ ಜೀಪನ್ನು ಏರಿದ ಇವರು ಜೀಪಿನಲ್ಲಿ ಮೆರವಣಿಗೆ ಮೂಲಕ ಚೆನ್ನಪಟ್ಟಣ ಮಾರುತಿ ದೇವಸ್ಥಾನದ ತನಕ ಮೆರವಣಿಗೆ ಸಾಗಿದರು.
ಜನತೆ ಈ ಬಾರಿ ನನಗೆ ಅಶೀರ್ವಾದ ಮಾಡಿದ್ದಾರೆ. ಆತ್ಯಂತ ಹೆಚ್ಚು ಮತಗಳನ್ನು ನೀಡಿ ಅಯ್ಕೆ ಮಾಡಿದ ಮತದಾರರನ್ನು ಆಭಿನಂದಿಸುತ್ತೇನೆ. ಭಟ್ಕಳದ ಆಭಿವೃದ್ಧಿಗೆ ಜನತೆ ಇಟ್ಟ ವಿಶ್ವಾಸಕ್ಕೆ ಸರಿಯಾಗಿ ಕೆಲಸ ಮಾಡುತ್ತೇನೆ.ಸುನಿಲ್ ನಾಯ್ಕ, ನೂತನ ಶಾಸಕ ಜನತೆಯ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ಕ್ಷೇತ್ರದ ಜನತೆ ನನ್ನ ಅಭಿವೃದ್ಧಿಯನ್ನು ನೋಡಿ ಮತದಾನ ಮಾಡಿದ್ದರೂ ಕೂಡಾ ನನಗೆ ಸೋಲಾಗಿರುವುದಕ್ಕೆ ಬೇಸರವಿಲ್ಲ. ನಾನು ಈ ಹಿಂದಿನಂತೆಯೇ ನನ್ನ ಜನಪರ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಜನರೊಂದಿಗೆ ಸದಾ ನಾನು ಇರುತ್ತೇನೆ ಎನ್ನುವ ಭರವಸೆಯನ್ನು ಜನತೆಗೆ ನೀಡುತ್ತೇನೆ.
ಮಂಕಾಳ ವೈದ್ಯ , ಪರಾಜಿತ ಅಭ್ಯರ್ಥಿ ಮತ ಮಾಹಿತಿ
ಬೆಳಗ್ಗೆ ಕುಮಟಾದ ಡಾ| ಎ.ವಿ.ಬಾಳಿಗಾ ಕಾಲೇಜಿನಲ್ಲಿಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಪ್ರಥಮ ಸುತ್ತಿನಲ್ಲಿಯೇ ಮುನ್ನಡೆಯನ್ನು ಸಾಧಿಸಿದ ಬಿ.ಜೆ.ಪಿ.ಯ ಸುನಿಲ್ ನಾಯ್ಕ ಕೊನೆಯ ತನಕವೂ ಅದೇ ಮುನ್ನಡೆಯನ್ನು ಕಾಯ್ದುಕೊಂಡು ಹೋಗಿದ್ದು 82,738 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಸುತ್ತಿನಲ್ಲಿಯೂ ತಮ್ಮ ಗೆಲುವಿನ ಅಂತರವನ್ನು ಅವರು ಕಾಯ್ದುಕೊಂಡಿದ್ದು, ಕಾರ್ಯಕರ್ತರಲ್ಲಿ ಹಾಗೂ ಬಿಜೆಪಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಗೆಲುವಿಗೆ ಕಾರಣವೇನು? ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಬಿಜೆಪಿಯ ಸುನಿಲ್ ನಾಯ್ಕ ಈ ಬಾರಿ ಕ್ಷೇತ್ರವನ್ನು ಬಿಜೆಪಿಗೆ ಮತ್ತೆ ಒಲಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಭಟ್ಕಳದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ಅಭಿಮಾನಿಗಳು ಹೆಚ್ಚಿದ್ದು ಸುನಿಲ್ ನಾಯ್ಕಗೆ ಹೆಚ್ಚಿನ ಮತ ಬರಲು ಕಾರಣವಾಯಿತಲ್ಲದೇ ಕರಾವಳಿಯಲ್ಲಿಯೇ ಮೋದಿ ಅಲೆಯಲ್ಲಿ ಕಮಲ ಅರಳಿದ್ದು ಭಟ್ಕಳದಲ್ಲಿ ಕೂಡಾ ಕಮಲಕ್ಕೆ ಮೋದಿಯೇ ನೀರೆರೆದಿದ್ದು ಎನ್ನಲು ಅಡ್ಡಿಯಿಲ್ಲ. ಸೋಲಿಗೆ ಕಾರಣವೇನು?
ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದರೂ, ಶಾಸಕರಾಗಿ ಐದು ವರ್ಷಗಳ ಕಾಲ ಯಾವುದೇ ವಿರೋಧವಿಲ್ಲದೇ ಮನೆಗೆ ಬಂದವರಿಗೆ ಸಹಾಯ ಮಾಡುತ್ತಾ ಎಲ್ಲರನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಿದ್ದ ಶಾಸಕ ಮಂಕಾಳ ವೈದ್ಯ ಅವರು ನಂಬಿದವರೇ ಕೈಕೊಟ್ಟಿರುವುದು, ಮೋದಿ ಅಲೆಯಲ್ಲಿ ಅಭಿವೃದ್ಧಿ, ಸಹಾಯ ಯಾವುದೂ ಕೆಲಸಕ್ಕೆ ಬಾರದಿರುವುದು ಮತ್ತು ರಾಜ್ಯದಲ್ಲಿ ಸಿದ್ಧರಾಮಯ್ಯ ಹಿಂದೂ ವಿರೋಧಿ ಅಳ್ವಿಕೆ ವಿರೋಧಿ ಅಲೆ ಇರುವುದು ಇವರ ಸೋಲಿಗೆ
ಕಾರಣ ಎನ್ನಬಹುದು.