Advertisement

ಜಿ.ಪಂ‌ ಕಟ್ಟಡದ ಸೋಲಾರ್ ಪ್ಲ್ಯಾಂಟ್ ವೀಕ್ಷಿಸಿದ ಸಚಿವ ಸುನೀಲ್ ಕುಮಾರ್

02:35 PM Dec 17, 2021 | Team Udayavani |

ಬೆಳಗಾವಿ: ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಅಳವಡಿಸಿರುವ ಸೋಲಾರ್ ಪ್ಲ್ಯಾಂಟ್ ಹಾಗೂ ಹೆಸ್ಕಾಂ ವಿಭಾಗೀಯ ಕಚೇರಿಯಲ್ಲಿರುವ ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರವನ್ನು ಇಂಧನ ಸಚಿವ ವಿ.ಸುನೀಲ್ ಕುಮಾರ್ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

Advertisement

ವಿಧಾನಮಂಡಲ ಚಳಿಗಾಲ ಅಧಿವೇಶನದ ಕಲಾಪಕ್ಕೆ ತೆರಳುವ ಮುನ್ನ ಶುಕ್ರವಾರ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ 45 ಕಿಲೋ ವ್ಯಾಟ್ ವಿದ್ಯುತ್ ಭಾರದ 30 ಕೆಡಬ್ಲ್ಯೂಪಿ ಸಾಮರ್ಥ್ಯದ ಸೌರ ವಿದ್ಯುತ್ ಅಳವಡಿಸಲಾಗಿದೆ. ಇದರಿಂದ ತಿಂಗಳಿಗೆ 12 ಸಾವಿರ ರೂ.ವರೆಗೆ ಉಳಿತಾಯ ಆಗುತ್ತಿದೆ. ಫ್ಯಾನ್, ಎಸಿ ಸೇರಿದಂತೆ ಎಲ್ಲವೂ ಬೆಳಗ್ಗೆಯಿಂದ‌ ಸಂಜೆವರೆಗೆ ಕಚೇರಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಪಂ‌ ಸಿಇಒ ದರ್ಶನ್ ಎಚ್.ವಿ. ತಿಳಿಸಿದರು.‌

ಬೆಳಗಾವಿಯಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ 358 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಅಳವಡಿಸಲಾಗಿದೆ. ಬೆಳಗಾವಿ ವಿಭಾಗದ 233 ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ಪ್ಲ್ಯಾಂಟ್ ಅಳವಡಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಇಂಧನ ಸಚಿವ ಸುನೀಲ್ ಕುಮಾರ್ ಮಾತನಾಡಿ, ಇನ್ನುಳಿದ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಸೋಲಾರ್ ಅಳವಡಿಸುವಂತೆ ಸಲಹೆ ನೀಡಿದರು.

Advertisement

ನಂತರ ಹೆಸ್ಕಾಂ ವಿಭಾಗೀಯ ಕಚೇರಿಗೆ ಭೇಟಿ ನೀಡಿದ ಇಂಧನ ಸಚಿವ ಸುನೀಲ್ ಕುಮಾರ್ ಅವರು ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಹೆಸ್ಕಾಂ ಜನಸ್ನೇಹಿ ವಿದ್ಯುತ್ ಕೇಂದ್ರ ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ತಿಳಿದುಕೊಂಡರು.

ವಿದ್ಯುತ್ ಗ್ರಾಹಕರ ದೂರು ಕೇಂದ್ರಕ್ಕೆ ತೆರಳಿದ ಇಂಧನ ಸಚಿವರಿಗೆ ಸಿಬ್ಬಂದಿ ಮಾಹಿತಿ ನೀಡಿದರು. ಬೆಳಗಾವಿ ವಿಭಾಗದಲ್ಲಿ ಮಾತ್ರ ಇರುವ ಈ ವ್ಯವಸ್ಥೆಯಿಂದ ಆನ್ ಲೈನ್‌ ಮೂಲಕ‌ ದೂರು ಬಂದರೆ ಕೂಡಲೇ ಆ ಪ್ರದೇಶದ ಲೈನ್ ಮೆನ್ ಗೆ ಆರ್ ಆರ್ ನಂಬರ್ ಮೊಬೈಲ್‌ನಲ್ಲಿ ಮೆಸೆಜ್ ಕಳುಹಿಸಿ ಅಪ್ ಡೆಟ್ ಮಾಡಲಾಗುತ್ತದೆ. ಇದು ಲೈನ್ ಮನ್ ವರೆಗೂ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಕೂಡಲೇ ಸಂಬಂಧಿಸಿದ ದೂರುದಾರರ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಕಡೆಗೂ ಇದನ್ನು ವಿಸ್ತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next