Advertisement

ಇಂದು ಮಹಿಳಾ ಕ್ರಿಕೆಟ್‌ ಕೋಚ್‌ ಆಯ್ಕೆ

06:05 AM Aug 10, 2018 | |

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಮುಂಬೈನಲ್ಲಿ ಶುಕ್ರವಾರ ಸಂದರ್ಶನ ನಡೆಸಲಿದೆ.

Advertisement

ರಾಜ್ಯದ ಕ್ರಿಕೆಟ್‌ ದಿಗ್ಗಜ ಸುನೀಲ್‌ ಜೋಶಿ ಸೇರಿದಂತೆ ಒಟ್ಟು 20 ಆಕಾಂಕ್ಷಿಗಳು ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಜೋಶಿ ಜತೆಗೆ ಮಾಜಿ ಕ್ರಿಕೆಟಿಗರಾದ ರಮೇಶ್‌ ಪೊವಾರ್‌, ಅಜಯ್‌ ರಾತ್ರಾ,  ವಿಜಯ್‌ ಯಾದವ್‌, ಮಾಜಿ ಮಹಿಳಾ ಆಟಗಾರ್ತಿಯರಾದ ಮಮತಾ ಮೆಬಿನ್‌, ಸುಮನ್‌ ಶರ್ಮ ಪೈಪೋಟಿಯಲ್ಲಿದ್ದಾರೆ. ವಿದೇಶಿಗರ ಪೈಕಿ ನ್ಯೂಜಿಲೆಂಡ್‌ನ‌ ಮಾಜಿ ಆಟಗಾರ್ತಿ ಮರಿಯಾ ಫಾಹೆ ಹೆಸರಿದೆ. ಮೂಲಗಳ ಪ್ರಕಾರ ಜೋಶಿ ಹಾಗೂ ಪೊವಾರ್‌ ನಡುವೆ ನೇರ ಸ್ಪರ್ಧೆಯಿದೆ ಎನ್ನಲಾಗಿದೆ. ಎಡಗೈ ಸ್ಪಿನ್ನರ್‌ ಜೋಶಿ ಒಟ್ಟು 15 ಟೆಸ್ಟ್‌, 69 ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ 160 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಆಡಿದ್ದಾರೆ. ಪೋವಾರ್‌ 2 ಟೆಸ್ಟ್‌, 31 ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪ್ರತಿನಿಧಿಸಿದ್ದರು. ಬಿಸಿಸಿಐ ಆಡಳಿತಾಧಿಕಾರಿ ಸದಸ್ಯೆ ಡಯಾನ ಎಡುಲ್ಜಿ, ಬಿಸಿಸಿಐ ಕ್ರಿಕೆಟ್‌ ಅಪರೇಷನ್‌ ಜಿಎಂ ಆಗಿರುವ ಸಾಬಾ ಕರೀಂ ಮತ್ತು ಹಂಗಾಮಿ ಕಾರ್ಯದರ್ಶಿ ಅಮಿತಾಬ್‌ ಚೌಧರಿ ಸಂದರ್ಶನ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next