ವಿಜಯಪುರ: ಅತೀವೃಷ್ಟಿಯಿಂದ ಹಾನಿಗೀಡಾದ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಗುರುವಾರ ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿ, ತುರ್ತು ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅತಿವೃಷ್ಟಿಯಿಂದ ಹಾನಿಯಾದ ಮನೆಗಳು, ಬೆಳೆ ಹಾನಿ, ಅಸಮರ್ಪಕ ವಿದ್ಯುತ್‌ಸರಬರಾಜು, ಅಪಾಯದಲ್ಲಿ ಇರುವ ವಿದ್ಯುತ್ ಕಂಬಗಳ ನಿರ್ವಹಣೆ ಸೇರಿದಂತೆ ಹಾನಿ ಕುರಿತು ಸ್ಥಾನಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಿಕೋಟಾ ತಾಲೂಕಿನ ಹೊನವಾಡ, ಬಾಬಾನಗರ, ಬಬಲೇಶ್ವರ ತಾಲೂಕಿನ ಕಾಖಂಡಕಿ ಹಾಗೂ ಸಾರವಾಡ ಗ್ರಾಮಗಳಿಗೆ ಭೇಟಿ ನೀಡಿದ ಅವರು ಬಾಧಿ ತರ ಸಮಸ್ಯೆ ಆಲಿಸಿದರು. ತಿಕೋಟ ತಹಶೀಲ್ದಾರ್ ಸಂತೋಷಮ್ಯಾಗೇರಿ, ಕೃಷಿ ಇಲಾಖೆ ಉಪನಿರ್ದೇಶಕ ಬಿ.ಎಸ್. ದೊಡಮನಿ, ಹೆಸ್ಕಾಂ ಎಇಇ ಮಿಲಿಂದ್ ಜೀರ್ ಹಾಗೂ ತಿಕೋಟಾ ತಾಲೂಕು ಅತಿವೃಷ್ಟಿ ನೋಡಲ್ ಅಧಿಕಾರಿ ಎಲ್.ಎಸ್. ಲೋಣಿ ಮತ್ತಿತರ ಸ್ಥಳದಲ್ಲಿದ್ದ ಅಧಿಕಾರಿಗೆ ಖಡಕ್ ಸೂಚನೆ ನೀಡಿದರು. ಹೊನವಾಡ ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ ಸುನೀಲಗೌಡ ಪಾಟೀಲ, ಮಳೆಯಿಂದ ಬಿದ್ದಿರುವ ಎಲ್ಲ ಮನೆಗಳ ಸಮೀಕ್ಷೆ ಜೊತೆಗೆ ಬಾಧಿ ತ ಕಡು ಬಡವರ ಪಟ್ಟಿಪ್ರತ್ಯೇಕವಾಗಿ ರೂಪಿಸಬೇಕು. ಬಡವರಿಗೆ ನೆರವು ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸಲು ಇದರಿಂದಸಹಕಾರಿಯಾಗಲಿದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ವೇಳೆ ಮುಖಂಡರಾದ ಎಂ.ಎಸ್. ರುದ್ರಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಭೀಮು ನಾಟಿಕಾರ, ರಾಮಗೊಂಡ ಬಿರಾದಾರ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಪರಸನ್ನವರ, ರುದ್ರಗೌಡ ಬಿರಾದಾರ, ಶಾಂತಪ್ಪ ಬಿದರಿ, ಮುತ್ತು ಹಿರೇಮಠ, ಸಿದ್ದಣ್ಣ ಬೆಳಗಾವಿ, ವಿಜಯಕುಮಾರ ಹಿರೇಮಠ, ಚಂದು ಯಚ್ಚಿ, ಅರವಿಂದ ಮಸಳಿ ಇದ್ದರು.