Advertisement

ಈ ಲಂಕಾ ಆಟಗಾರನನ್ನು ಯಾಕೆ ಐಪಿಎಲ್ ತಂಡಗಳು ಖರೀದಿ ಮಾಡಿಲ್ಲ..?: ಗಾವಸ್ಕರ್ ಅಚ್ಚರಿ

03:15 PM Feb 28, 2022 | Team Udayavani |

ಧರ್ಮಶಾಲಾ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಅಂತ್ಯವಾಗಿದೆ. ಸರಣಿಯನ್ನು ರೋಹಿತ್ ಶರ್ಮಾ ಪಡೆ 3-0 ಅಂತರದಿಂದ ಗೆದ್ದುಬೀಗಿದೆ.

Advertisement

ಮೂರನೇ ಪಂದ್ಯದ ವೇಳೆ ಕಮೆಂಟರಿ ಪ್ಯಾನೆಲ್ ನಲ್ಲಿದ್ದ ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಅವರು ಲಂಕಾ ನಾಯಕ ದಾಸುನ್ ಶನಕರನ್ನು ಹಾಡಿ ಹೊಗಳಿದ್ದಾರೆ.

“ಯಾವುದೇ ಐಪಿಎಲ್ ಫ್ರಾಂಚೈಸಿಗಳು ಶನಕ ಅವರನ್ನು ಆಯ್ಕೆ ಮಾಡದಿರುವುದು ನನಗೆ ನಿಜವಾಗಿಯೂ ಆಶ್ಚರ್ಯವಾಗಿದೆ. ಬಹುಶಃ ಹರಾಜಿಗಿಂತ ಮೊದಲು ಶನಕ ಪ್ರದರ್ಶನ ಉತ್ತಮವಾಗಿರಲ್ಲ. ಇದೂ ಕಾರಣವಾಗಿರಬಹುದು. ಆದರೆ ನಿನ್ನೆ ಮತ್ತು ಇಂದು ಅವರ ಬ್ಯಾಟಿಂಗ್ ಪ್ರದರ್ಶನಗಳನ್ನು ನೋಡಿದ ಬಳಿಕ ಬದಲಿ ಆಟಗಾರನ ಅಗತ್ಯವಿದ್ದಲ್ಲಿ ಅವರು ಪ್ರತಿ ಫ್ರಾಂಚೈಸಿಯ ರಾಡಾರ್‌ನಲ್ಲಿರುತ್ತಾರೆ” ಎಂದು ಗಾವಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ:ತಲೆಗೆ ಬಡಿದ ಬೌನ್ಸರ್‌:ವಿಶ್ವಕಪ್ ಅಭಿಯಾನ ಮುಂದುವರಿಸಲು ಮಂಧಾನಾ ಫಿಟ್

ದಾಸುನ್ ಶನಕ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ 47 ಮತ್ತು 74 ರನ್ ಗಳಿಸಿ ಅಜೇಯರಾಗಿ ಉಳಿದರು.

Advertisement

ಸಿರಾಜ್ – ಆವೇಶ್ ಖಾನ್ ರಂತಹ ಬೌಲರ್ ಗಳನ್ನು ಮಾತ್ರವಲ್ಲದೆ, ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ರಂತಹ ವಿಶ್ವದರ್ಜೆಯ ಬೌಲರ್ ಗಳನ್ನೂ ಶನಕ ಯಶಸ್ವಿಯಾಗಿ ಎದುರಿಸಿದರು ಎಂದು ಗಾವಸ್ಕರ್ ಹೇಳಿದ್ದಾರೆ.

ಭಾರತ ಮತ್ತು ಲಂಕಾ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ರಂದು ನಡೆಯಲಿದೆ. ಇದು ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಎರಡನೇ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next