Advertisement
Related Articles
Advertisement
ತಾಯಿ ಕಂಡಿದ್ದ ಕನಸನ್ನು ಕೈಚೆಲ್ಲಿ, ಖನ್ನತೆಗೆ ಜಾರಿದ್ದ ಸುನೀಲ್‌ರ ಭುಜವನ್ನು ಅಂದು ನೇವರಿಸಿದ್ದು ಸ್ನೇಹಿತರು. ಅವರ ಒತ್ತಾಯದ ಮೇರೆಗೆ ಸುನೀಲ್ ಪುನಃ ಜಿಮ್ ಮೆಟ್ಟಿಲೇರಿದರು. ತಾಯಿಯ ಕನಸನ್ನು ಚಾಲೆಂಜ್ ಆಗಿ ಸ್ವೀಕರಿಸಿಬಿಟ್ಟರು. ನೋಡ್ತಾ ನೋಡ್ತಾ ಫಿಟ್ ಆದ ಸುನೀಲ್, 2004ರಲ್ಲಿ ವೃತ್ತಿಪರ ದೇಹದಾಡ್ಯì ಸ್ಪರ್ಧೆಯಲ್ಲಿ ಟಾಪ್-10 ರ್‍ಯಾಂಕ್ ಒಳಗೆ ಮಿಂಚಿಯೇಬಿಟ್ಟರು. ಬಳಿಕ ಸರ್ವೀಸಸ್ ಬೆಳ್ಳಿ ಪದಕ, ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕಗಳು ಕೊರಳಿಗೆ ಬಿದ್ದವು. ಮಿಸ್ಟರ್ ಬೆಂಗಳೂರು ಚಾಂಪಿಯನ್ ಪಟ್ಟ ಸೇರಿ ಹತ್ತಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದವು. ಬ್ಯಾಂಕ್ ಉದ್ಯೋಗಿ ನಿಶ್ಚಿತಾರನ್ನು ವರಿಸಿರುವ ಸುನೀಲ್ ಈಗ ಕತ್ರಿಗುಪ್ಪೆವಾಸಿ.2008ರಲ್ಲಿ ಬೆಂಗಳೂರಿನ ಎಂಇಜಿಗೆ (ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ದೇಹದಾಡ್ಯì ಪಟುವಾಗಿ ಕ್ರೀಡಾ ಕೋಟಾದಡಿ ಭಾರತೀಯ ಸೈನ್ಯಕ್ಕೂ ಸೇರಿಬಿಟ್ಟರು. ಅಲ್ಲೂ ಮಿಸ್ಟರ್ ಏಷ್ಯಾ ದೇಹದಾಡ್ಯì ಸ್ಪರ್ಧೆಗೆ ಆಯ್ಕೆಯಾದರೂ, ಅನಾರೋಗ್ಯದ ಕಾರಣದಿಂದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 2012ರಲ್ಲಿ ಜಿಮ್ ಶುರು
ನಾಲ್ಕು ವರುಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಸುನೀಲ್, ಬೆಂಗಳೂರಿನ ಬೃಂದಾವನ ನಗರದಲ್ಲಿ “ಲೆಜೆಂಡ್ಸ್ ಜಿಮ್’ ಆರಂಭಿಸಿದರು. ಇಲ್ಲಿ ದಿನಕ್ಕೆ 120ಕ್ಕೂ ಹೆಚ್ಚು ಮಂದಿ ತರಬೇತಿ ಪಡೆಯುತ್ತಿದ್ದಾರೆ. ಕಾರ್ಡಿಯೊ, ಫಿಟೆ°ಸ್ ಟ್ರೆçನಿಂಗ್, ವೇಟ್ ಗೈನ್, ವೇಟ್ ಲಾಸ್ ಸೇರಿದಂತೆ ವಯಸ್ಸಿಗೆ ತಕ್ಕಂತೆ ವ್ಯಾಯಾಮ ಮಾಡಿಸುವುದರಲ್ಲಿ ಸುನೀಲ್ ನಿಪುಣರು. ಎಲ್ಲ ವಯೋಮಾನದವರಿಗೂ ತರಬೇತಿ ಕೊಡುತ್ತಾರೆ. ಕಡಿಮೆ ಖರ್ಚಿನಲ್ಲಿ ಸುನೀಲ್ ಹಲವಾರು ದೇಹದಾಡ್ಯì ಪಟುಗಳನ್ನು ರೂಪಿಸಿದ್ದಾರೆ. ಇವರು “ಲೆಜೆಂಡ್ಸ್ ಜಿಮ್’ ಹುಡುಗರನ್ನು ವಾರಕ್ಕೆ ಒಂದು ಸಲ (ಶನಿವಾರ) ಔಟಿಂಗ್ ಕರಕೊಂಡು ಹೋಗಿ ವ್ಯಾಯಾಮ ಮಾಡಿಸುತ್ತಾರೆ. ಅಷ್ಟೇ ಅಲ್ಲ… ತಿಂಗಳಿಗೊಮ್ಮೆ, ಟ್ರೆಕ್ಕಿಂಗ್‌ಗೂ ಕರೆದೊಯ್ಯುತ್ತಾರೆ. ದೇಹದಾರ್ಡ್ಯ ಪಟುವಾಗುವ ಕನಸು ಕಾಣುತ್ತಿರುವವರು, ವೈಯಕ್ತಿಕ ತರಬೇತಿ ಪಡೆಯಲು ಇಚ್ಛಿಸುವವರು ಅಥವಾ ಫಿಟೆ°ಸ್ ಹೊಂದುವ ಆಸಕ್ತಿ ಇರುವವರು ಸುನೀಲ್ ಕುಮಾರ್ (ಮೊ. 9980204060) ಅವರನ್ನು ಸಂಪರ್ಕಿಸಬಹುದು. ಹೇಮಂತ್ ಸಂಪಾಜೆ