Advertisement

ಮೆಸ್ಸಿ ದಾಖಲೆ ಮುರಿದ ಸುನೀಲ್‌ ಚೆಟ್ರಿ : 117 ಪಂದ್ಯ, 74 ಗೋಲು

12:36 AM Jun 09, 2021 | Team Udayavani |

ಹೊಸದಿಲ್ಲಿ: ಭಾರತೀಯ ಫುಟ್‌ಬಾಲ್‌ ತಂಡದ ನಾಯಕ ಸುನೀಲ್‌ ಚೆಟ್ರಿ ತಮ್ಮ ವರ್ಣರಂಜಿತ ಬಾಳ್ವೆಯಲ್ಲಿ ಹೊಸತೊಂದು ಎತ್ತರಕ್ಕೆ ಏರಿದ್ದಾರೆ. ಅಂತಾರಾಷ್ಟ್ರೀಯ ಗೋಲು ಗಳಿಕೆಯಲ್ಲಿ ಆರ್ಜೆಂಟೀನಾದ ಸ್ಟಾರ್‌ ಫುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ಹಾಗೂ ಯುಎಇಯ ಫಾರ್ವರ್ಡ್‌ ಆಟಗಾರ ಅಲಿ ಮಾಬ್‌ಕೌತ್‌ ಅವರ ಗೋಲು ದಾಖಲೆಯನ್ನು ಮುರಿದು ಟಾಪ್‌-10 ಯಾದಿಯನ್ನು ಅಲಂಕರಿಸಿದ್ದಾರೆ.

Advertisement

ಬಾಂಗ್ಲಾದೇಶ ವಿರುದ್ಧ ಸೋಮವಾರ ದೋಹಾದಲ್ಲಿ ನಡೆದ ವಿಶ್ವಕಪ್‌, ಏಶ್ಯನ್‌ ಕಪ್‌ ಅರ್ಹತಾ ಫುಟ್‌ಬಾಲ್‌ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿದ ಚೆಟ್ರಿ ಜಾಗತಿಕ ಫುಟ್‌ಬಾಲ್‌ನಲ್ಲಿ ಸುದ್ದಿಯಾದರು. ಇದು 117 ಪಂದ್ಯಗಳಲ್ಲಿ ಚೆಟ್ರಿ ಸಿಡಿಸಿದ 74ನೇ ಗೋಲು. ಅಂದರೆ ಆರ್ಜೆಂಟೀನಾ ನಾಯಕ ಮೆಸ್ಸಿಗಿಂತ ಎರಡು ಗೋಲು ಹೆಚ್ಚು. ಮೆಸ್ಸಿ 143 ಪಂದ್ಯಗಳಿಂದ 72 ಗೋಲು ದಾಖಲಿಸಿದ್ದಾರೆ. 89 ಪಂದ್ಯಗಳನ್ನಾಡಿರುವ ಅಲಿ ಮಾಬೌಕೌತ್‌ ಖಾತೆಯಲ್ಲಿ 73 ಗೋಲುಗಳಿವೆ.

ಚೆಟ್ರಿ ಈಗ ಸಾರ್ವಕಾಲಿಕ ಟಾಪ್‌-10 ಅಂತಾರಾಷ್ಟ್ರೀಯ ಗೋಲು ಸಾಧಕರ ಯಾದಿಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಫುಟ್ಬಾಲಿಗನೋರ್ವ ಈ ಯಾದಿಯನ್ನು ಅಲಂಕರಿಸಿದ್ದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next