Advertisement

1984ರ ನಂತರ ಅತಿಹೆಚ್ಚು ಮತ ಪಡೆದ ರಾಜಕೀಯ ಪಕ್ಷ ಬಿಜೆಪಿ

06:31 PM May 24, 2019 | Sriram |

ರಾಷ್ಟ್ರ ರಾಜಕಾರಣದಲ್ಲಿ 1984ರ ನಂತರ ಮೊದಲ ಬಾರಿಗೆ ಅತಿ ಹೆಚ್ಚು ಮತಗಳನ್ನು ಪಡೆದ ಕೀರ್ತಿಗೆ ಬಿಜೆಪಿ ಪಾತ್ರವಾಗಿದೆ.

Advertisement

2019ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಪ್ರಸ್ತುತ ಫ‌ಲಿತಾಂಶವನ್ನು ನೋಡಿದರೆ -, 1977 ಮತ್ತು 1980ರ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದು ಸಾಧಿಸಿದ್ದ ಏಕಚಕ್ರಾಧಿಪತಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಸಿಖ್‌ ಅಂಗರಕ್ಷಕರ ಗುಂಡಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಲಿಯಾದ ಕೆಲವೇ ತಿಂಗಳಲ್ಲಿ ನಡೆದ 1984ರ ಲೋಕಸಭೆ ಚುನಾವಣೆಯಲ್ಲಿ, ಕಾಂಗ್ರೆಸ್‌ 415 ಕ್ಷೇತ್ರಗಳಲ್ಲಿ ಗೆದ್ದು,ಶೇ.48.1 ಮತಗಳನ್ನು ಪಡೆದಿತ್ತು.

ಇನ್ನು 1980ರಲ್ಲಿ 353 ಸಂಸತ್‌ ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ಗೆ ಶೇ.42.7 ಮತಗಳು ದಕ್ಕಿದ್ದವು. ಇದು ದೇಶಾದ್ಯಂತ ರಾಜಕೀಯ ಪಕ್ಷವೊಂದು ಪಡೆದ ಅತಿ ಹೆಚ್ಚು ಮತವಾಗಿತ್ತು. 1977ರಲ್ಲಿ 295 ಸೀಟು ಗೆದ್ದಿದ್ದ ಜನತಾ ಪಕ್ಷಕ್ಕೆ ಶೇ.41.3 ಮತಗಳು ಹಂಚಿಕೆಯಾಗಿದ್ದವು.

ಇದು ಕಾಂಗ್ರೆಸೇತರ ಪಕ್ಷ ಲೋಕಸಭೆಯಲ್ಲಿ ಅತಿಹೆಚ್ಚು ಮತಪಡೆದ ಕೀರ್ತಿ ಗಳಿಸಿದಂತಾಗಿತ್ತು. ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಬಿಜೆಪಿಗೆ 2014ರಲ್ಲಿ ಹಂಚಿಕೆಯಾಗಿದ್ದ ಮತಗಳ ಸಂಖ್ಯೆ ಶೇ.31.

Advertisement
Advertisement

Udayavani is now on Telegram. Click here to join our channel and stay updated with the latest news.

Next