Advertisement

ರಾಹುಲ್‌-ಅಥಿಯಾ ಮದುವೆ ಖಚಿತ ! ಮಕ್ಕಳಿಗೆ ಬಿಡುವು ಸಿಕ್ಕಿದಾಗ ಮದುವೆ: ಸುನಿಲ್‌ ಸ್ಪಷ್ಟನೆ

11:44 PM Aug 24, 2022 | Team Udayavani |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಉಪನಾಯಕ ಕೆ.ಎಲ್‌.ರಾಹುಲ್‌, ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮದುವೆಯಾಗುವ ಸುದ್ದಿ ಇನ್ನು ವದಂತಿಯಲ್ಲ. ಅದು ಸತ್ಯ ಎಂದು ಸ್ವತಃ ಸುನೀಲ್‌ ಶೆಟ್ಟಿಯೇ ಖಚಿತಪಡಿಸಿದ್ದಾರೆ.

Advertisement

ಇತ್ತೀಚೆಗೆ ಅವರು ನೀಡಿದ ಸಂದರ್ಶನ ವೊಂದರಲ್ಲಿ ಇಬ್ಬರು ಮದುವೆಯಾಗುವುದು ಖಚಿತ. ಆದರೆ ರಾಹುಲ್‌ ಸತತವಾಗಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಏಷ್ಯಾಕಪ್‌, ಅದಾದ ಅನಂತರ ವಿಶ್ವಕಪ್‌, ಆಮೇಲೆ ದಕ್ಷಿಣ ಆಫ್ರಿಕಾ ಪ್ರವಾಸ, ಅನಂತರ ಆಸ್ಟ್ರೇಲಿಯ… ಹೀಗೆ ನಿರಂತರ ಪ್ರವಾಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಮಕ್ಕಳಿಗೆ ಯಾವಾಗ ಬಿಡುವು ಸಿಗುತ್ತದೋ ಆಗ ಮದುವೆಯಾಗಲಿದೆ. ಒಂದೆರಡು ದಿನಗಳ ಬಿಡುವು ವೇಳೆ ಮದುವೆ ಸಾಧ್ಯವಿಲ್ಲ ಎಂದು ಸುನಿಲ್‌ ಹೇಳಿದರು.

ಇತ್ತೀಚೆಗೆ ರಾಹುಲ್‌-ಅಥಿಯಾ ಸತತವಾಗಿ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬಯಿಯ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ.

ರಾಹುಲ್‌ ಕ್ರೀಡಾ ಹರ್ನಿಯ ಚಿಕಿತ್ಸೆಗೆ ಜರ್ಮನಿಗೆ ತೆರಳಿದ್ದಾಗ ಅಥಿಯಾ ಜತೆಗೂಡಿದ್ದರು. ಇಬ್ಬರೂ ಒಟ್ಟಾಗಿರುವ ಹಲವು ಚಿತ್ರಗಳು ಪ್ರಕಟವಾಗಿವೆ. ಆದ್ದರಿಂದ ಇನ್ನು ಮುಂದೆ ವದಂತಿ ಹಬ್ಬಿಸುವವರಿಗೆ ಒಂದು ವಿಷಯ ಇಲ್ಲವಾಗಿದೆ. ಆದರೆ ಅವರಿಗೆ ಇನ್ನೂ ಸಾಕಷ್ಟು ಅವಕಾಶವಿದ್ದೇ ಇದೆ!ಯಾವಾಗ, ಎಲ್ಲಿ, ಹೇಗೆ ನಡೆಯುತ್ತದೆ ಎಂದೆಲ್ಲ ಊಹೆ ಮಾಡಬಹುದು!

Advertisement
Advertisement

Udayavani is now on Telegram. Click here to join our channel and stay updated with the latest news.

Next