ಮುಂಬಯಿ: ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ 8ನೇ ವಾರ್ಷಿಕೋತ್ಸವ ಸಂಭ್ರಮವು ಜ. 26ರಂದು ಅಪರಾಹ್ನ 2.20 ರಿಂದ ರಾತ್ರಿ 8.30ರ ವರೆಗೆ ಮಲಾಡ್ ಪಶ್ಚಿಮದ ನ್ಯೂ ಲಿಂಕ್‌ರೋಡ್‌ನ ಹೊಟೇಲ್ ಸಾಯಿಪ್ಯಾಲೇಸ್ ಗ್ರಾÂಂಡ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ್ ಸುಂದರ್ ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿದ ಸಮಾರಂಭವನ್ನು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ| ಕರುಣಾಕರ ನಾಯಕ್, ಎಂಎಸ್‌ಆರ್‌ಎಸ್ ಕಾಲೇಜು ಶಿರ್ವ ಇದರ ಪುರಾತತ್ವ ಅಧ್ಯಯನ ವಿಭಾಗದ ಪ್ರೊ| ಮುರುಗೇಶ್ ಹಾಗೂ ಭಂಡಾರ್‌ಕಾರ್ ಕಾಲೇಜಿನ ಉಪನ್ಯಾಸಕಿ ಡಾ| ರೇಖಾ ಬನ್ನಾಡಿ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಜಗದೀಶ್ ಶೆಟ್ಟಿ ನಂದಳಿಕೆ, ಕೋಶಾಧಿಕಾರಿ ಸಿಎ ರವಿರಾಜ್ ಶೆಟ್ಟಿ ಬೆಳ್ಮಣ್, ಉಪ ಕಾರ್ಯಾಧ್ಯಕ್ಷರುಗಳಾದ ಖಾಂದೇಶ್ ಭಾಸ್ಕರ್ ಶೆಟ್ಟಿ, ಪಣಿಯೂರು ಅಶೋಕ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ ಮುಲುಂಡ್, ಕಾಪು ಮೋಹನ್ ಶೆಟ್ಟಿ, ಸಂಚಾಲಕ ಸೂಡ ವಾಲ್ಟರ್ ಮಥಾಯಸ್, ಜತೆ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಶಿರ್ವ, ಜತೆ ಕೋಶಾಧಿಕಾರಿ ಸೂಡ ಸಚ್ಚಿದಾನಂದ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶಬುನಾ ಶೆಟ್ಟಿ, ಸಲಹೆಗಾರರುಗಳಾದ ನಿತ್ಯಾನಂದ ಹೆಗ್ಡೆ, ಸತೀಶ್ ಶೆಟ್ಟಿ ಪನಿನ್ಸುಲಾ, ಡಾ| ಶ್ರೀಧರ ಶೆಟ್ಟಿ, ಶರತ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ, ಎಸ್. ಎಂ. ಭಟ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲದೆ 30 ಮಂದಿ ಆಡಳಿತ ಮಂಡಳಿಯ ಸದಸ್ಯರ ತಂಡದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪನ್ವೇಲ್ ಸುರೇಶ್ ಶೆಟ್ಟಿ ಮತ್ತು ಬಳಗದವರಿಂದ ಸುಗಮ ಸಂಗೀತ ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಂಡಿತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು