Advertisement

ಜಿಲ್ಲೆಯಲ್ಲಿ 4ನೇ ಭಾನುವಾರ ಸ್ತಬ್ಧ

08:33 AM Jul 27, 2020 | Suhan S |

ದೇವನಹಳ್ಳಿ: ಕೋವಿಡ್ ಸೋಂಕು ಹರಡುವಿಕ ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರ ಸಂಪೂರ್ಣ ಲಾಕ್‌ಡೌನ್‌ಗೆ, 4ನೇ ಭಾನು ವಾರವೂ ಜಿಲ್ಲೆ ಮತ್ತು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ, ತರಕಾರಿ ಅಂಗಡಿ ಮತ್ತಿತರರ ಅಂಗಡಿ ತೆರೆಯಲಾಗಿತ್ತು. ಬೆಳಗ್ಗೆ ವೇಳೆಯಲ್ಲಂತೂ ಜನ ಮನೆ ಗಳಿಂದ ಹೊರಬಂದು, ಬೈಕ್‌ಗಳಲ್ಲಿ ಓಡಾಡುತ್ತಿದ್ದ ದೃಶ್ಯಗಳು ಕಂಡುಬಂತು. ಬೆಳಗ್ಗೆಯಿಂದ ಮಧ್ಯಾಹ್ನ 12ರವರೆಗೆ ಲಾಕ್‌ಡೌನ್‌ ನಿರಾಸದಾಯಕವಾಗಿತ್ತು. ಬೆಳಗ್ಗೆ 9 ಗಂಟೆಯಿಂದಲೇ ಪೊಲೀಸರು ವಾಹನ ಗಳಲ್ಲಿ ಅಂಗಡಿ ಮುಚ್ಚುವಂತೆ ಸೂಚಿಸುತ್ತಿದ್ದರು. ಕೆಲವರಂತೂ ಮಾಸ್ಕ್ ಇಲ್ಲದೇ, ಓಡಾಡುತ್ತಿದ್ದ ದೃಶ್ಯಗಳು ಕಂಡುಬಂತು. 12ರ ನಂತರ ಜನರಿಲ್ಲದೇ ಸ್ತಬ್ಧವಾಗಿತ್ತು. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮೀಣ ಪ್ರದೇಶ, ನಗರ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

ರಾಷ್ಟ್ರೀಯ-ರಾಜ್ಯ ಹೆದ್ದಾರಿ ಜೀರೋ ಟ್ರಾಫಿಕ್‌ನಂತೆ ಇದ್ದವು. ಗೂಡ್ಸ್‌ ವಾಹನ ಮಾತ್ರ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ನಗರದ ಎಲ್ಲಾ ರಸ್ತೆಗಳನ್ನು ಪೊಲೀಸರು ಬ್ಯಾರಿಕೇಡ್‌ ಹಾಕುವುದರ ಮೂಲಕ ಏಕ ಸಂಚಾರಕ್ಕೆ ಅನುವು ಮಾಡಿದ್ದರು. ಉಳಿದಂತೆ ಆಸ್ಪತ್ರೆ, ಔಷಧ, ಹಾಲು, ತರಕಾರಿ ಹಣ್ಣು ಸೇರಿ ಇತರೆ ಅಂಗಡಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇದ್ದವು. ಪೊಲೀಸರು ಮುಖ್ಯ ಸ್ಥಳಗಳಲ್ಲಿ ಠಿಕಾಣಿ ಹೂಡಿ, ಬರುವ ಸಾರ್ವಜನಿಕರಿಗೆ ಏಕೆ ಓಡಾಡುತ್ತಿದ್ದೀರಾ, ಪದೇ ಪದೇ ಬರ ಬೇಡಿ, ಮನೆಯಲ್ಲಿದ್ದು, ನಿಮ್ಮ ಆರೋಗ್ಯ ಕಾಪಾಡಿ ಕೊಳ್ಳಿ, ತುರ್ತು ಇದ್ದರೆ ಮಾತ್ರ ಹೊರ ಬನ್ನಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next