Advertisement
ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ ರಸ್ತೆ, ಗಡಗಿ ಚನ್ನಪ್ಪ ವೃತ್ತ, ಮೋತಿ ವೃತ್ತ, ಸಂಗಮ್ ವೃತ್ತ ಸೇರಿ ಪ್ರಮುಖ ವೃತ್ತ, ರಸ್ತೆಗಳು ವಾಹನ ಸಂಚಾರ ವಿಲ್ಲದೇ ಖಾಲಿಖಾಲಿಯಾಗಿದ್ದು, ವಾಣಿಜ್ಯ ಮಳಿಗೆಗಳು ಸಹ ಸಂಪೂರ್ಣ ಬಂದ್ ಮಾಡಿ ಲಾಕ್ ಡೌನ್ ಗೆ ಸಹಕಾರ ನೀಡಲಾಗಿದೆ.
Related Articles
Advertisement
ಇನ್ನು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 5 ಡಿವೈಎಸ್ ಪಿ, 23 ಸಿಪಿಐ, ,66 ಪಿಎಸ್ಐ, 255 ಎಎಸ್ಐ, 701 ಹೆಡ್ ಕಾನಿಸ್ಟೇಬಲ್, 1198 ಪೊಲೀಸ್ ಪೇದೆ, 6 ಡಿಎಆರ್ ತುಕಡಿ, 250 ಗೃಹರಕ್ಷಕ ಸಿಬ್ಬಂದಿ ಸೇರಿ ಒಟ್ಟಿ 2000 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಸ್ ಪಿ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ.