ಮುಂಬೈ: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸೋಮವಾರ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ರೋಚಕ ಜಯ ಸಾಧಿಸಿದ್ದನ್ನು ವೀಕ್ಷಿಸುವ ಮೂಲಕ ಅವರು ದೀಪಾವಳಿ ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಜನತೆಗೆ ದೀಪಾವಳಿಯ ಶುಭ ಹಾರೈಸಿದ್ದಾರೆ.
ರವಿವಾರ ಮೆಲ್ಬರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ಥಾನ ವಿರುದ್ಧ ನಾಲ್ಕು ವಿಕೆಟ್ ಅಂತರದ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನಲ್ಲಿ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿತು.
‘ಹ್ಯಾಪಿ ದೀಪಾವಳಿ. ಎಲ್ಲರೂ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂದುಕೊಂಡಿದ್ದೇನೆ. ನಾನು ನಿನ್ನೆಯ ಪಂದ್ಯದ ಅಂತಿಮ ಮೂರು ಓವರ್ ಗಳನ್ನು ಮತ್ತೆ ನೋಡಿ ಹಬ್ಬವನ್ನು ಆಚರಿಸಿದೆ. ಅದ್ಭುತ ಪಂದ್ಯ’ ಎಂದು ಬರೆದುಕೊಂಡಿದ್ದಾರೆ.
Related Articles
ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕೊನೆಯ ಮೂರು ಓವರ್‌ಗಳನ್ನು ಉಲ್ಲೇಖಿಸಿ ಸುಂದರ್ ಅವರ ದೀಪಾವಳಿ ಟ್ವೀಟ್ ಗೆ ಪಾಕಿಸ್ತಾನದ ಬಳಕೆದಾರರೊಬ್ಬರು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಮೊದಲ ಮೂರು ಓವರ್ ಗಳನ್ನು ವೀಕ್ಷಿಸುವಂತೆ ಕುಟುಕಿದರು. ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಗೂಗಲ್ ಸಿಇಓ ಸುಂದರ್ ಪಿಚ್ಚೈ ‘ ಅದನ್ನೂ ನೋಡಿದ್ದೇನೆ, ಭುವನೇಶ್ವರ್ ಮತ್ತು ಅರ್ಶದೀಪ್ ರ ಅದ್ಭುತ ಬೌಲಿಂಗ್’ ಎಂದು ತಿರುಗೇಟು ನೀಡಿದ್ದಾರೆ.