ಹೊಸದಿಲ್ಲಿ : ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್‌ಗೆ ನೆರವಾಗಲು ಅವಕಾಶ ಕೋರಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಶಶಿ ತರೂರ್ ಅವರ ವಕೀಲ, “ಈ ಪ್ರಕರಣದಲ್ಲಿ ಆಸಕ್ತಿ ತೋರುವ ಕಾನೂನು ಅರ್ಹತೆ ಸ್ವಾಮಿ ಅವರಿಗೆ ಏನಿದೆ?’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರವಾಗಿ ಸ್ವಾಮಿ ಅವರು, “ಇವತ್ತು ದಿಲ್ಲಿ ಪೊಲೀಸ್ ಮತ್ತು ಆರೋಪಿ ತರೂರ್ ಅವರು ಈ ಪ್ರಕರಣದಲ್ಲಿನ ನನ್ನ ಪಾತ್ರ ಕಾನೂನು ಸಮ್ಮತವಾದುದಲ್ಲ ವಾದಿಸಿದ್ದಾರೆ. ಸಿಆರ್‌ಪಿಸಿ ಸೆ.302ರ ಪ್ರಕಾರ ನನಗಿರುವ ಕಾನೂನು ಅರ್ಹತೆಯ ಆಧಾರದಲ್ಲಿ ನಾನು ವಾದಿಸಿದ್ದೇನೆ. ಇಲ್ಲಿ ನನ್ನ ಪಾತ್ರದ ಸಿಂಧುತ್ವ ಅಪ್ರಸ್ತುತ. ಈ ಪ್ರಕರಣದ ವಿಚಾರಣೆ ನ್ಯಾಯೋಚಿತವಾಗಿ ನಡೆಯಬೇಕು ಮತ್ತು ದಿಲ್ಲಿ ಪೊಲೀಸರು ಇದರಲ್ಲಿ ಯಾವುದೇ ರೀತಿಯ ಗೋಸ್‌ಬರಿ ಮಾಡದಂತೆ ನೋಡಿಕೊಳ್ಳಬೇಕು ಎಂಬುದೇ ನನ್ನ ಉದ್ದೇಶ ಮತ್ತು ಆಶಯವಾಗಿದೆ’ ಎಂದು ಹೇಳಿದರು.
ಸ್ವಾಮಿ ಅವರ ಅರ್ಜಿ ಮತ್ತು ದಾಖಲೆ ಪತ್ರಗಳ ಕಾನೂನು ಸಿಂಧುತ್ವವನ್ನು ಪರಿಗಣಿಸಲು ನ್ಯಾಯಾಲಯ ಜು.26ರ ತೇದಿಯನ್ನು ನಿಗದಿಸಿತು.
ಇದಕ್ಕೆ ಮೊದಲು ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಇಂದು ಶನಿವಾರ ಹಾಜರಾದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಜಾಮೀನು ಕೋರಿಕೆ ಅರ್ಜಿ ಸಲ್ಲಿಸಿದರು.
ಆಗ ನ್ಯಾಯಾಧೀಶರು, ತರೂರ್‌ಗೆ ಈಗಾಗಲೇ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಮತ್ತೆ ಔಪಚಾರಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು.