Advertisement
ಸೂರ್ಯ ಸ್ನಾನ ಮಾಡುವ ವಿಧಾನ ತೆಳುವಾದ ಬಟ್ಟೆಯನ್ನು ಧರಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಶರೀರವು ಬಿಸಿಲಿಗೆ ಒಡ್ಡುವಂತಿರಬೇಕು.
ಸೂರ್ಯನ ಬಿಸಿಲಿಗೆ ನಿಲ್ಲುವ ಮುನ್ನ 2-4 ಲೋಟ ನೀರನ್ನು ಕುಡಿದಿರಬೇಕು.
ಅಗತ್ಯವಿದ್ದಲ್ಲಿ ತಲೆಯನ್ನು ಬಟ್ಟೆಯಿಂದ ಕಟ್ಟಿಕೊಳ್ಳುವುದು.
ಸೂರ್ಯನ ಸ್ನಾನದ ಅನಂತರ, ನೆರಳಿನಲ್ಲಿ ನಡೆಯುವುದು ಅಥವಾ ನೀರಿನಿಂದ ಸ್ನಾನ ಮಾಡುವುದು ಉತ್ತಮ.
ಶರೀರಕ್ಕೆ ಎಣ್ಣೆಯಿಂದ ಲೇಪನ ಮಾಡಿಕೊಂಡು ಸೂರ್ಯನ ಬಿಸಿಲಿಗೆ ನಿಂತರೆ ಉತ್ತಮ. ಸೂರ್ಯ ಸ್ನಾನದ ತತ್‌ಕ್ಷಣ ಸ್ನಾನಮಾಡುವುದಾಗಲಿ, ಆಹಾರ ಸೇವನೆಯಾಗಲಿ ಮಾಡಬಾರದು. ಪಾನೀಯ ಸ್ವೀಕರಿಸಬಹುದು.
ಮುಂಜಾನೆ: ಸೂರ್ಯೋದಯದಿಂದ 2 ಗಂಟೆ
ಸಾಯಂಕಾಲ: ಸೂರ್ಯಾಸ್ತಮಾನಕ್ಕಿಂತ 2 ಗಂಟೆ ಮುನ್ನ
15 ನಿಮಿಷದಿಂದ 30 ನಿಮಿಷಗಳ ವರೆಗೆ ಸೂರ್ಯನ ಬಿಸಿಲಿಗೆ ಶರೀರವನ್ನು ಒಡ್ಡಬಹುದು. ಮುಂಜಾಗ್ರತೆ
ಬರೀ ಹೊಟ್ಟೆಯಲ್ಲಿ ಅಥವಾ ಹದವಾಗಿ ಆಹಾರ ಸೇವಿಸಬೇಕು.
ಸೂರ್ಯನ ಬಿಸಿಲಿನ ಅಲರ್ಜಿ ಇದ್ದಲ್ಲಿ ಜಾಗರೂಕತೆ ವಹಿಸಬೇಕು.
ಪ್ರಥಮ ಬಾರಿಗೆ ಸೂರ್ಯ ಸ್ನಾನ ಮಾಡುವವರು 10 ನಿಮಿಷಕ್ಕೆ ಮಿತಿಗೊಳಿಸಬಹುದು.
ವಯಸ್ಸಾದವರು, ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಜಾಗರೂಕತೆ ವಹಿಸಬೇಕು.
Related Articles
ಪ್ರತೀದಿನ ಸೂರ್ಯ ಸ್ನಾನ ಹಲವಾರು ರೀತಿಯ ಕ್ಯಾನ್ಸರನ್ನು ಮುಖ್ಯವಾಗಿ ಕರುಳಿನ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್, ಸ್ತನದ ಕ್ಯಾನ್ಸರ್ ಹಾಗೂ ಮಲ್ಟಿಪಲ್ ಸ್ಕ್ಲಿರೋಸಿಸ್, ರಕ್ತದೊತ್ತಡ, ಮಧುಮೇಹಗಳನ್ನು ತಡೆಯಲು ಸಹಕಾರಿ.
ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಲಭ್ಯವಿರುವುದು. ಇದು ಮಾನಸಿಕ ಖನ್ನತೆ ಹಾಗೂ ಕಾಲ್ಸಿಯಂ ಹೀರುವಿಕೆಗೆ ಸಹಕಾರಿ. ಹಾಗಾಗಿ ಮೂಳೆ ಸವೆತವನ್ನು ತಡೆಯಲು ಸೂರ್ಯನ ಬೆಳಕು ಸೂಕ್ತ. ಇದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತ ಕಣಗಳು
ಉತ್ಪತ್ತಿಯಾಗಲು ನೆರವಾಗುತ್ತದೆ. ಈ ಬಿಳಿ ರಕ್ತ ಕಣಗಳು ಹಲವು ಬಗೆಯ ಸೋಂಕುಗಳ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಸೂರ್ಯನ ಬೆಳಕಿನ ಪರಿಣಾಮದಿಂದ ನೈಟ್ರಿಕ್ ಆಕ್ಸೆ„ಡ್, ಮೆಲಟೋನಿನ್, ಸೆರಟೋ ನಿನ್ನಂತಹ ರಾಸಾಯನಿಕ ಪದಾರ್ಥಗಳು ಹೇರಳವಾಗಿ ದೊರೆತು ದೇಹದ ಪ್ರತಿರಕ್ಷಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ.
ಸೂರ್ಯ ಸ್ನಾನ ವಿವಿಧ ಬಗೆಯ ಚರ್ಮದ ಕಾಯಿಲೆ (ಎಕ್ಸಿಮ, ಸೋರಿಯಾಸಿಸ್) ಗಳ ನಿವಾರಣೆಗೆ ಕೂಡ ಸಹಕಾರಿ.
ಸಂಧಿವಾತ, ನಿದ್ರಾಹೀನತೆ, ಮಾನಸಿಕ ಖನ್ನತೆ, ಸಂಧಿನೋವು, ಮಾನಸಿಕ ಒತ್ತಡ ಹೀಗೆ ಇನ್ನೂ ಹಲವಾರು ಕಾಯಿಲೆಗಳಿಗೆ ಸೂರ್ಯ ಸ್ನಾನ ರಾಮಬಾಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸೂರ್ಯ ಸ್ನಾನವು ಯಾವುದೇ ವೆಚ್ಚವಿಲ್ಲದೆ, ಪರಿಕರಗಳ ನೆರ ವಿಲ್ಲದೆ, ಸುಲಭವಾಗಿ, ಸರಳವಾಗಿ ಅನುಸರಿಸಬಹುದಾದ ಮನೆಮದ್ದು ಎಂದೇ ಹೇಳಬಹುದು.
Advertisement
ಡಾ| ಹರ್ಷಿಣಿ,ಉಜಿರೆ