Advertisement
ಈ ಹಿಂದೆ ಗ್ರಾ.ಪಂ.ಗಳು ಸ್ಥಳೀಯವಾಗಿ ಟೆಂಡರ್ ಕರೆದು ಟ್ಯಾಂಕರ್‌ಗಳನ್ನು ನಿಗದಿಪಡಿಸಿ ಸರಬರಾಜು ಮಾಡಿದ ನೀರಿನ ಬಾಬ್ತು ಬಿಲ್‌ಗಳನ್ನು ತರಿಸಿ ತಾ.ಪಂ.ಗೆ ನೀಡುತ್ತಿದ್ದವು. ತಾ.ಪಂ. ಇಒ ಅವುಗಳನ್ನು ಪರಿಶೀಲಿಸಿ ತಹಶೀಲ್ದಾರ್‌ಗೆ ನೀಡುತ್ತಿದ್ದರು. ಕಂದಾಯ ಇಲಾಖೆಯಿಂದ ಆಯಾ ಟೆಂಡರ್‌ದಾರರಿಗೆ ಚೆಕ್ ಮೂಲಕ ಬಿಲ್ ಪಾವತಿಸಲಾಗುತ್ತಿತ್ತು.
ಈಗಿನ ಬದಲಾವಣೆಯಂತೆ ತಹಶೀಲ್ದಾರ್, ತಾ.ಪಂ. ಇಒ, ನೀರಾವರಿಗೆ ಸಂಬಂಧಿಸಿದ ಎಂಜಿ ನಿಯರ್ ಇರುವ ತ್ರಿಸದಸ್ಯರ ಸಮಿತಿ ರಚಿಸಲಾಗಿದೆ. ಇದಕ್ಕೆ ಮೇಲುಸ್ತುವಾರಿ ಸಹಾಯಕ ಕಮಿಷನರ್ ಅವರದು. ಈ ಸಮಿತಿ ತಾಲೂಕಿನಲ್ಲಿ ಕುಡಿಯುವ ನೀರು ಬೇಕಿರುವ ಗ್ರಾಮಗಳ ಪಟ್ಟಿ ತಯಾರಿಸಬೇಕು. ನೀರು ಸರಬರಾಜು ಮಾಡಲು ಬಿಡ್ ಆಹ್ವಾನಿಸಬೇಕು. ಇ ಟೆಂಡರ್ ಮೂಲಕ ಕಡಿಮೆ ಬಿಡ್ ಸಲ್ಲಿಸಿದವರಿಗೆ ಗುತ್ತಿಗೆ ನೀಡಲಾಗುತ್ತದೆ. ಬಿಲ್ ಸಲ್ಲಿಕೆ, ಹಣ ಸಂದಾಯ ಆನ್‌ಲೈನ್ ಮೂಲಕವೇ. ಹೊಸ ಲೆಕ್ಕ
ಈ ಮೊದಲು ಲೀ.ಗೆ 25 ಪೈಸೆ, 50 ಪೈಸೆ ಎಂದೆಲ್ಲ ಲೆಕ್ಕಾಚಾರದಲ್ಲಿ ಹಣ ಪಾವತಿಸಲಾಗುತ್ತಿತ್ತು. ಶುದ್ಧ ಕುಡಿಯುವ ನೀರು ಕೂಡ ಇದೇ ದರದಲ್ಲಿ ಕಂಪೆನಿಗಳಿಂದ ದೊರೆಯುತ್ತದೆ. ಹೊಳೆ, ಬಾವಿಯಿಂದ ತುಂಬಿಸಿ, ಶುಚಿಯಾಗಿಲ್ಲದ ಟ್ಯಾಂಕರಿನಲ್ಲಿ ಪೂರೈಸಿ ದಾಗಲೂ ಇದೇ ದರ ಸರಿಯಲ್ಲ ಎಂದು ಸರಕಾರ ತೀರ್ಮಾನಿಸಿದ್ದು, ಟ್ಯಾಂಕರ್‌ಗೆ 500 ರೂ. ನಿಗದಿಪಡಿಸಿದೆ.
Related Articles
ಕಳೆದ ಅವಧಿಯಲ್ಲಿ ಲೀ.ಗೆ 39 ಪೈಸೆ ನಿಗದಿ ಮಾಡಿ ಪಿಡಿಒಗಳು ಟೆಂಡರ್ ಕರೆದು ಒಪ್ಪಂದಕ್ಕೆ ಸಹಿ ಹಾಕಿದ್ದರು. ಜಿಲ್ಲಾಧಿಕಾರಿಗಳು ಕೊನೆಕ್ಷಣದಲ್ಲಿ ಮೊತ್ತ ವನ್ನು ಕಡಿಮೆ ಮಾಡಿದ್ದರಿಂದ ಪಿಡಿಒಗಳ ಮೇಲೆ ಗುತ್ತಿಗೆ ವಹಿಸಿಕೊಂಡವರು ಕಾನೂನು ಸಮರ ಸಾರುವುದಾಗಿ ಹೇಳು ತ್ತಿದ್ದಾರೆ. ಕುಂದಾಪುರ ತಾಲೂಕಿನಲ್ಲಿ 37 ಪಂ.ಗಳಿಗೆ 1.58 ಕೋ.ರೂ.ಗಳನ್ನು ನೀರು ಸರಬರಾಜಿಗೆ ನೀಡಲಾಗಿದೆ.
Advertisement
ತರಬೇತಿಮುಂದಿನ ದಿನಗಳಲ್ಲಿ ಟ್ಯಾಂಕರ್ ಚಾಲಕರಿಗೂ ಆ್ಯಪ್ ಬಳಕೆ ಕುರಿತು ತರಬೇತಿ ನಡೆಯಲಿದೆ.
2 ಕಿ.ಮೀ. ಮಿತಿ ಗುಂಪು ಮನೆಗಳಿಗೆ 2 ಕಿ.ಮೀ. ಒಳಗಿನಿಂದಲೇ ನೀರು ಮೂಲ ಗುರುತಿಸಿ ಸರಬರಾಜು ಮಾಡಬೇಕೆಂದು ಮಿತಿ ವಿಧಿಸಲಾಗಿದೆ. ಸರಕಾರಿ ಮೂಲ ಇಲ್ಲದಿದ್ದರೆ ಖಾಸಗಿ ಬಾವಿ ವಶಪಡಿಸಿ ನೀರು ನೀಡಲು ಉದ್ದೇಶಿಸಲಾಗಿದೆ. ಅಥವಾ ಹೊಸದಾಗಿ ಕೊಳವೆಬಾವಿ ಕೊರೆಸಲು ಸೂಚಿಸಲಾಗಿದೆ. ಸಮಸ್ಯೆ ಇರುವ ಪ್ರದೇಶಕ್ಕೆ ಮಾತ್ರ ನೀರು ವಿತರಿಸಲು ಸೂಚನೆ ಇದೆ. ಷರತ್ತುಗಳು
ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಿರಬೇಕು.
ನೀರು ತುಂಬಿ ವಿತರಿಸುವ ಸ್ಥಳ 2 ಕಿ.ಮೀ.ಗಿಂತ ದೂರ ಇರಬಾರದು.
ನೀರು ತುಂಬಿಸುವಾಗ, ವಿತರಿಸುವಾಗ ಫೋಟೊ, ವೀಡಿಯೊ ಚಿತ್ರೀಕರಿಸಿ ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕು.
ಜಿಪಿಎಸ್ ಮೂಲಕ ನೀರು ಸಾಗಾಟದ ವಿವರಗಳು ಆ್ಯಪ್‌ನಲ್ಲಿ ದಾಖಲಾಗುತ್ತವೆ. ಸುಳ್ಳು ಲೆಕ್ಕ ಕೊಡಲು ಸಾಧ್ಯವಾಗುವುದಿಲ್ಲ.
ಟ್ಯಾಂಕರ್ ಚಾಲಕ, ಟ್ಯಾಂಕರ್ ಮಾಲಕರ ಮೊಬೈಲ್ ನಂಬರ್ ನೋಂದಾಯಿಸಬೇಕು. ಹೊಸ ಪದ್ಧತಿಯಂತೆ ನಿರ್ವಹಣೆ ಮಾಡಲು ಒಂದು ಹಂತದ ತರ ಬೇತಿ ನೀಡಲಾಗಿದೆ. ಲೀಟರ್ ಲೆಕ್ಕದಲ್ಲಿ ಹಣ ನೀಡ ಲಾಗುವುದಿಲ್ಲ, ಬದಲಾಗಿ ಟ್ಯಾಂಕರ್‌ಗೆ ಇಷ್ಟು ಎಂದು ನೀಡ ಲಾಗುತ್ತದೆ. ಸ್ಥಳೀಯ ಹಂತದಲ್ಲಿ ಕೇಳಿ ಬರುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ - ಲಕ್ಷ್ಮೀ ಮಚ್ಚಿನ