Advertisement

ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಮಳೆಯಿಂದ ಹೆಚ್ಚಿದ ನೀರಿನ ಸೆಲೆೆ

04:10 AM May 26, 2018 | Team Udayavani |

ಬೆಳ್ತಂಗಡಿ: ತಾಲೂಕಿನಲ್ಲಿ ಸುಮಾರು ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮೇ ಕೊನೆಯ ವಾರದಲ್ಲಿ ಮಳೆಯಾಗುತ್ತದೆ ಎಂದು ತಿಳಿಸಲಾಗಿತ್ತು, ಆದರೆ ವಾರಕ್ಕೂ ಮೊದಲೇ ಮಳೆ ಬರುತ್ತಿರುವುದರಿಂದ ತಾಲೂಕಿನ ವಿವಿಧೆಡೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಖ್ಯವಾಗಿ ರಾತ್ರಿ ಮಳೆ ಆಗಮಿಸುತ್ತಿದ್ದು, ಜನರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ.

Advertisement

ಮರ ಬಿದ್ದು ಹಾನಿ
ಸಂತೆಕಟ್ಟೆ ಕುತ್ಯಾರು ದೇವಸ್ಥಾನದ ಬಳಿ ಗುರುವಾರ ರಾತ್ರಿ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಪ್ರಶಾಂತ್‌ಅವರ ಮನೆಗೆ ಹಾನಿ ಉಂಟಾಗಿದೆ.

ಉತ್ತಮ ಮಳೆ
ತಾಲೂಕಿನ ಚಾರ್ಮಾಡಿ, ಕಕ್ಕಿಂಜೆ, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಆಳದಂಗಡಪಿ, ಕೊಯ್ಯುರು,ಬೆಳಾಲು, ಕನ್ಯಾಡಿ, ಗೇರುಕಟ್ಟೆ, ಕಣಿಯೂರು ಮೊದಲಾದೆಡೆ ಉತ್ತಮ ಮಳೆಯಾಗುತ್ತಿದೆ.

ಕೃಷಿಕರಿಗೂ ಖುಷಿ
ನೀರು ಕಡಿಮೆಯಾಗುತ್ತಿದ್ದ ಸಂದರ್ಭ ಮಳೆ ಸುರಿದಿರುವುದರಿಂದ ಕೃಷಿಕರೂ ಖುಷಿ ಪಡುವಂತಾಗಿದೆ. ಇಲ್ಲವಾದಲ್ಲಿ ನೀರು ಕಡಿಮೆಯಾಗಿ ಅಡಿಕೆ ಮೊದಲಾದ ಬೆಳೆಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿತ್ತು. ನಿರಂತರ ಮಳೆ ಸುರಿಯುತ್ತಿ ರುವುದರಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ.

ಕಾಮಗಾರಿ ಸ್ಥಗಿತ
ಉಜಿರೆಯ ನಿಡಿಗಲ್‌ ಬಳಿ ಫೆಬ್ರವರಿಯಿಂದ ಸೇತುವೆಗೆ ಪಿಲ್ಲರ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಆಂದಾಜಿನಂತೆ ಕಾಮಗಾರಿ ಸಾಗುತ್ತಿದ್ದು, ಮಳೆ ಕಾರಣದಿಂದ 10 ದಿನಕ್ಕೂ ಮೊದಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಭಿಯಂತರು ತಿಳಿಸಿದ್ದಾರೆ. ಪಿಲ್ಲರ್‌ ನಿರ್ಮಾಣಕ್ಕೆ ಬೃಹತ್‌ ಹೊಂಡಗಳನ್ನು ತೋಡಲಾಗಿದ್ದು, ಈ ಹೊಂಡಗಳಲ್ಲಿ ನೀರು ನಿಲ್ಲುತ್ತಿದೆ. ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ನಡೆಸಲು ಪ್ರಯಾಸ ಪಡುವಂತಾಗಿದೆ.

Advertisement

10 ದಿನ ಮೊಟಕು
ಸೇತುವೆ ಕಾಮಗಾರಿ ನಿರೀಕ್ಷೆಯಂತೆ ಉತ್ತಮವಾಗಿ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿ ಬಳಿಕ 6 ತಿಂಗಳ ವಿರಾಮ ನೀಡಿ ಮತ್ತೆ ಕಾಮಗಾರಿ ನಡೆಸಲಾಗುತ್ತದೆ. ಮಳೆ ನಿರೀಕ್ಷೆಗಿಂತಲೂ ಮೊದಲೇ ಸುರಿಯುತ್ತಿರುವುದರಿಂದ ಕಾಮಗಾರಿ ಅವಧಿಯಲ್ಲಿ 10 ದಿನಗಳ ಕಾಲ ಮೊಟಕುಗೊಳಿಸಲಾಗುತ್ತಿದೆ. ಈಗ ಬೀಳುತ್ತಿರುವ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿಲ್ಲ.
– ಯಶವಂತ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರು

Advertisement

Udayavani is now on Telegram. Click here to join our channel and stay updated with the latest news.

Next