Advertisement

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

03:34 PM Apr 27, 2024 | Team Udayavani |

ಬಿಸಿಲನಾಡು ಎಂಬ ಪ್ರತೀತಿ ನಮ್ಮ ನಾಡಿಗಿದೆ. ಬರಗಾಲದ ನಾಡು, ಬಯಲು ಸೀಮೆ ಇತರ ಹೆಸರುಗಳಂತೂ ವಿಜಯಪುರಕ್ಕೆ ಭೌಗೋಳಿಕವಾಗಿ ನೇಮಿಸಲ್ಪಟ್ಟಿವೆ. ಹಾಗೆ 1627ರಲ್ಲಿ  ವಿಜಯಪುರ ಬಿಸಿಲಿನ ತಾಪಮಾನವನ್ನು ಕಂಡು ಮಹಮ್ಮದ್‌ ಆದಿಲ್‌ ಷಾಹಿ ತಂಪಾದ ಒಂದು ಅರಮನೆಯ ಆವಶ್ಯಕತೆ ಇದೆ ಎಂದು ಅದರ ನಿರ್ಮಾಣಕ್ಕೆ ಅಡಿಪಾಯ ಹಾಕಿ 1656ರಲ್ಲಿ ಪೂರ್ಣಗೊಳಿಸಿದರು.

Advertisement

ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಿಂದ ಸಿಂದಗಿ ಮಾರ್ಗವಾಗಿ 17ಕೀ. ಮೀ. ದೂರದ ಕುಮಟಗಿಯ ಅನಂತರ ಎಡಭಾಗದ  ರಸ್ತೆಯ ಪಕ್ಕದಲ್ಲಿ ವಿಜಯಪುರದ ಬೇಸಗೆ ಅರಮನೆ ನಮಗೆ ದೊರಕುತ್ತದೆ. ಅರಮನೆ ಎಂದ ತತ್‌ಕ್ಷಣ ಎಲ್ಲರ ತಲೆಯಲ್ಲಿ ಭವ್ಯವಾದ ಹಾಗೂ ಗಾತ್ರದಲ್ಲಿ ದೊಡ್ಡದಾದ ಪರಿಭಾವನೆ ಬರುವುದು ಸಹಜ.

ಆದರೆ ಇಲ್ಲಿ ಇದಕ್ಕೆ ತದ್ವಿರುದ್ಧವಾಗಿ ಪುಟ್ಟದಾದ ಕೇವಲ ನಿವಾಸದ ಅರಮನೆ ಇದೆ. ಹೆಸರೇ ಸೂಚಿಸುವಂತೆ ಬೇಸಗೆ ಅರಮನೆ ಬೇಸಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಿದ ಚಿಕ್ಕದಾದ ಅರಮನೆ.   ಹಂಪಿಯ ಕಮಲ್‌ ಮಹಲ್‌ಗೆ ಇದನ್ನು  ಹೋಲಿಕೆ ಮಾಡಿಕೊಳ್ಳಬಹುದು. ಅಲ್ಲಿ ರಾಣಿಯರು ಬೇಸಗೆಯ ಬೇಗೆಯನ್ನು  ತಡೆದುಕೊಳ್ಳಲು ವಾಸಿಸುತ್ತಿದ್ದರು.

ಅದ್ದೂರಿ ಸಿನೆಮಾದ ಮುಸ್ಸಂಜೆ ವೇಳೆಯಲಿ ಎಂಬ ಹಾಡಿನ ಶೂಟಿಂಗ್‌ ಇಲ್ಲೆ ನಡೆದಿದ್ದು, ಹಾಡಿನ ಆರಂಭದ 30 ಸೆಕೆಂಡುಗಳ ಸಮಯದ ಹಾಡು ಈ ಸ್ಥಳದಲ್ಲೇ ಶೂಟ್‌ ಆಗಿದೆ. ಇದೇ ತರ ಅನೇಕ ಸಿನೆಮಾ ಶೂಟಿಂಗ್‌ ಆದ ಬಳಿಕ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

Advertisement

ಅರಮನೆಯ ವೈಶಿಷ್ಟ್ಯ

ಅರಮನೆಯಿಂದ ಹೊರಗಿನವರು ಅಥವಾ ದೂರದ ಶತ್ರುವರ್ಗವನ್ನು ನೋಡಲು ಒಂದು ದೊಡ್ಡಗಾತ್ರದ ವೀಕ್ಷಣಾಗೋಪುರವಿದ್ದು ಅರಮನೆಯನ್ನು ಕೇಂದ್ರವಾಗಿರಿಸಿಕೊಂಡು ಸುತ್ತಲೂ ಚೌಕಾಕಾರದ ನೀರಿನ ಕೊಳ ನಿರ್ಮಾಣ ಮಾಡಿದ್ದಾರೆ. ಭದ್ರತಾ ದೃಷ್ಟಿಯಿಂದ ಹಾಗೂ ಅರಮನೆಯನ್ನು ತಂಪಿಡುವ ಸಲುವಾಗಿ ಸುತ್ತುವರೆದ ಕಟ್ಟೆಯನ್ನು ಎರಡು ಅಡಿ ಆಳ ಹಾಗೂ 2 ಅಡಿ ಅಗಲವಾಗಿಸಲಾಗಿದೆ. ಕಟ್ಟೆಯ ನೀರನ್ನು ಹತ್ತಿರದ ಕುಮಟಗಿ ಕೆರೆಯಿಂದ ಸರಬರಾಜು ಮಾಡಲಾಗುತ್ತಿತ್ತು.

ಕೊಳದಲ್ಲಿರುವ ನೀರು ಅರಮನೆಯ ಮೇಲಿನ ಮಹಡಿಗೂ ತಲುಪಿಸುವ ಹಾಗೂ ತಲುಪಿದ ನೀರು ತಿರುಗಿ ತಂಪು ಹವೆಯಲ್ಲಿ ಕೋಣೆಯನ್ನು ಎಸಿ ಮಾದರಿಯಲ್ಲಿಡುವ  ತಂತ್ರಜ್ಞಾನದ ವ್ಯವಸ್ಥೆಯನ್ನು ಅಂದಿನ ಷಾಹಿ ಸುಲ್ತಾನರು ಅರಿತಿದ್ದರು. ಪೂರ್ಣ ಅರಮನೆಯನ್ನು ತಂಪಿಡುವ ಸಲುವಾಗಿ ಅರಮನೆಯ ಸುತ್ತೆಲ್ಲಾ ನೀರು ಚಿಲುಮೆಯ ರೀತಿಯಲ್ಲಿ ಬೀಳುತ್ತಿದ್ದವು ಎನ್ನುವುದಕ್ಕೆ ಇಂದಿಗೂ ಇಲ್ಲಿ ಕುರುಹುಗಳಿವೆ.

ಸುಮಾರು ಮುನ್ನೂರು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಬೇಸಗೆ ಅರಮನೆ ಇಂದಿಗೂ ತನ್ನ ಛಾಪನ್ನು ಕಳೆದುಕೊಳ್ಳದೆ ಸಿಡಿಲು, ಮಳೆ ಚಳಿಯನ್ನು ತಡೆದುಕೊಂಡು ಗಟ್ಟಿಯಾಗಿ ನಿಂತುಕೊಂಡಿರುವುದು ಅಂದಿನ ಷಾಹಿ ಸುಲ್ತಾನರ ತಂತ್ರಜ್ಞಾನದ ಕೈಚಳಕಕ್ಕೆ ಸಾಕ್ಷಿ.

-ಮಲ್ಲಮ್ಮ

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next