Advertisement

ಬೇಸಗೆ ಡಯೆಟ್‌ ಹೀಗಿರಲಿ…

10:14 AM Apr 29, 2019 | Team Udayavani |

ಹವಾಮಾನದ ಬದಲಾವಣೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕಾಲಕ್ಕೆ ತಕ್ಕಂತ ಆಹಾರ ಪದ್ಧತಿ ಅನುಸರಿಸುವುದು ಬಹು ಮುಖ್ಯ. ಅದರಲ್ಲೂ ಬೇಸಗೆಯಲ್ಲಿ ನಾವು ಸೇವಿಸುವ ಆಹಾರ ಹೆಚ್ಚಿನ ಪೋಷಕಾಂಶಗಳಿಂದ ಕೂಡಿದ್ದರೇ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ, ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಬೇಸಗೆಯಲ್ಲಿ ಆಹಾರ ಕ್ರಮದಲ್ಲಿ ಪಾಲಿಸಬೇಕಾದ ನಿಯಮಗಳು ಹೀಗಿವೆ.

Advertisement

ಅಧಿಕ ಪ್ರಮಾಣದಲ್ಲಿ ನೀರು ಕುಡಿಯಿರಿ
ಬೇಸಗೆಯ ಮೊದಲ ಕಾಡುವ ಸಮಸ್ಯೆ ಎಂದರೆ ದೇಹದಲ್ಲಿನ ನೀರಿನಂಶ ಕಡಿಮೆಯಾಗುವುದು. ಹೀಗಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್‌ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ದೇಹದ ತೂಕ ಇಳಿಕೆಗೆ ಸಹಕಾರಿ.

ಹಣ್ಣುಗಳಿಗೆ ಪ್ರಾಮುಖ್ಯ ನೀಡಿ
ಸೇವಿ ಸುವ ಆಹಾರ ಅದಷ್ಟು ತಾಜಾ ಹಣ್ಣುಗಳಿಂದ ಕೂಡಿರಲಿ. ಇದು ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯ ಮಾಡುವ ರೋಗನಿರೋಧಕ ಅಂಶ ಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಹಣ್ಣುಗಳಲ್ಲಿ ಫೈಬರ್‌ ಅಂಶ ಹೇರಳವಾಗಿರುವುದರಿಂದ ದೇಹದ ತೂಕ ಇಳಿಸಲು ಇದು ಸಹಾಯ ಮಾಡು ತ್ತದೆ.

ತರಕಾರಿಗಳನ್ನು ಯಥೇಚ್ಚವಾಗಿ ಬಳಸಿ
ಬಾಯಿ ಚಪಲಕ್ಕಾಗಿ ಚಳಿಗಾಲದಲ್ಲಿ ನಾವು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುತ್ತೇವೆ. ಬೇಸಗೆಯಲ್ಲಿ ಫೈಬರ್‌ಯುಕ್ತ ಆಹಾರವನ್ನು ಸೇವಿಸುವದಿಂದ ಇದನ್ನು ಸರಿದೂಗಿಸಿಕೊಳ್ಳಬಹುದು. ಹಿ ಆಹಾರದಲ್ಲಿ ಬೀಟ್‌ರೋಟ್‌, ಕ್ಯಾರೆಟ್‌, ಅವಕಾಡೊ, ಬೊಕೊಲಿ, ಬ್ರಸ್ಸೆಲ್‌ ಮೊಗ್ಗುಗಳು, ಕಿಡ್ನಿ ಬೀನ್ಸ್‌, ಗಜ್ಜರಿ, ಓಟ್ಸ್‌ ಮುಂತಾದವುಗಳಿರಲಿ. ಇದು ದೇಹದಲ್ಲಿ ಕ್ಯಾಲೋರಿ ಉಳಿಸಲು ಮತ್ತು ತೂಕ ಇಳಿಸಿಕೊಳ್ಳಲು ಸಹಕರಿಸುತ್ತವೆ. ಜೀರ್ಣ ಕ್ರಿಯೆ ಉತ್ತಮಗೊಳಿಸಲೂ ಇದು ಸಹ ಕಾರಿ. ವಿಶೇಷವಾಗಿ ಧಗೆಯ ಉಷ್ಣಾಂಶದ ದಿನಗಳಲ್ಲಿ ದೇಹದಲ್ಲಿನ ವಿಷದ ಜೀವಾಣುಗಳನ್ನು ತೆಗೆದುಹಾಕುವಲ್ಲಿ ಇವು ಸಹಾಯ ಮಾಡುತ್ತವೆ.

ತಾಜಾ ಪಾನೀಯಗಳಿರಲಿ
ಬೇಸ ಗೆ ಎಂದರೆ ಶುದ್ಧೀಕರಸಿವ ಸಮಯ. ಹೈಡ್ರೇಟಿಂಗ್‌ ಪಾನೀಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯ ಅಭ್ಯಾಸ ಮಾಡಿಕೊಳ್ಳಬೇಕು. ಏಳನೀರು, ಕಬ್ಬಿನ ರಸ, ಮಜ್ಜಿಗೆ ಮೊದಲಾದ ತಾಜಾ ಪಾನೀಯಗಳು ಡಯೆಟ್‌ನಲ್ಲಿ ರಲಿ. ಚಳಿಗಾಲಿದಲ್ಲಿ ಅತಿಯಾದ ಆಹಾರ ಸೇವಿಸುವುದರಿಂದ ಡಿಟಾಕ್ಸ್‌ಗಾಗಿ ಸಲಾಡ್‌ಗಳನ್ನು ಸೇವಿಸುವ ಸಮಯ ಬೇಸಗೆ ಕಾಲ. ಅನಗತ್ಯ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಆಹಾರದಲ್ಲಿ ಕಾಬೋಹೈಡ್ರೇಟ್‌ ಕಡಿಮೆ ಪ್ರಮಾಣದಲ್ಲಿರುವ ಆಹಾರಗಳನ್ನು ಬಳಸಿಕೊಳ್ಳಬೇಕು.

Advertisement

- ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next