Advertisement

ಲುಂಬಿನಿ ಗಾರ್ಡನ್ಸ್‌ನಲ್ಲಿ ಬೇಸಿಗೆ ಸಂಭ್ರಮ

11:56 AM May 11, 2018 | |

ಬೆಂಗಳೂರು: ಹೆಬ್ಟಾಳ-ಕೆ.ಆರ್‌.ಪುರ ವರ್ತುಲ ರಸ್ತೆಯಲ್ಲಿರುವ ನಾಗಾವರ ಕೆರೆಯ ಲುಂಬಿನಿ ಗಾರ್ಡನ್ಸ್‌ ನಗರದ ನಾಗರಿಕರಿಗೆ ಬೇಸಿಗೆಯ ಮೋಜು, ಮಸ್ತಿ, ಸಂಭ್ರಮದ ಅವಕಾಶ ಕಲ್ಪಿಸಿದೆ. ಸಮುದ್ರ ತೀರದಲ್ಲಿ ನಲಿಯುವಂತ ಅನುಭವ ಒದಗಿಸಲು ವೇವ್‌ ಪೂಲ್‌, ಕೆರೆ ತಟದಲ್ಲಿ ಸಮಯ ಕಳೆಯುವ ಉದ್ಯಾನವನ ಹಾಗೂ ಪರಿಸರ ಸ್ನೇಹಿ ಬೋಟಿಂಗ್‌ ಪಾರ್ಕ್‌ನಲ್ಲಿ ಅನಿಯಮಿತ ವಿನೋದ, ಮನರಂಜನೆ ಸಿಗಲಿದೆ.

Advertisement

ಇತೀ¤ಚೆಗೆ ಆರಂಭಿಸಿದ ನೀರಿನ ಮೇಲೆ ತೆಲುವ ರೆಸ್ಟೋರೆಂಟ್‌ ಎಂಬ ಹೊಸ ಪರಿಕಲ್ಪನೆಯ ಸ್ಥಳದಲ್ಲಿ ಸಂಭ್ರಮಾಚರಣೆಗಳು, ಪಾರ್ಟಿಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಟುಂಬ ಸಮೇತರಾಗಿ ಉತ್ಸಾಹದಿಂದ ನಲಿಯುವ ಅವಕಾಶ ಕಲ್ಪಿಸಲಾಗಿದೆ. ಫುಡ್‌ಕೋರ್ಟ್‌ ಹಾಗೂ ರೆಸ್ಟೋರೆಂಟ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ದೇಶೀಯ, ವಿದೇಶಿ ಸೇರಿ ನಾನಾ ವಿಧದ ಆಹಾರ ಪದಾರ್ಥಗಳು ಗ್ರಾಹಕರ ಮನಸ್ಸಿಗೆ ಮುದ ನೀಡಲಿವೆ.

ಲುಂಬಿನಿ ಗಾರ್ಡನ್ಸ್‌ ವಿಶೇಷ ಆಕರ್ಷಣೆಗಳು: ವೇವ್‌ ಪೂಲ್‌, ಕಿಡ್ಸ್‌ ಪೂಲ್‌, ಪೆಡಲ್‌ ಬೋಟ್‌, ಪ್ಲೆಷರ್‌ ಬೋಟ್‌, ಕಾಫಿ ಬೋಟ್ಸ್‌, ಸ್ಟಾರ್‌ ವಾರ್, ಕೊಲಂಬಸ್‌, ಕ್ಯಾಟರ್‌ಪಿಲ್ಲರ್‌ ರೈಡ್‌, ಬ್ರೇಕ್‌ ಡ್ಯಾನ್ಸ್‌, ಕಿಡ್ಡಿ ರೈಡ್ಸ್‌, ಕಿಡ್ಸ್‌ ಟ್ರೈನ್‌, ಬೌನ್ಸಿಸ್‌, ಕಿಡ್ಸ್‌ ವಾಟರ್‌ ಬೋಟ್‌, ಡ್ಯಾಷಿಂಗ್‌ ಕಾರ್, ಮೆರ್ರಿ ಗೋರೌಂಡ್‌, ಟ್ರಾಂಪೊಲೈನ್‌ ಬಂಗಿ, ಫನ್‌ ಆಟಗಳು, ಸ್ಪಾನಿಷ್‌ ಬುಲ್‌ ರೈಡ್‌ ಹಾಗೂ ಮಕ್ಕಳ ಪ್ಲೇ ಏರಿಯಾ ಒಳಗೊಂಡಿವೆ. ಹೆಚ್ಚಿನ ಮಾಹಿತಿಗೆ ಮೊ. 9341031409 ಅಥವಾ 9742770999 ಸಂಪರ್ಕಿಸಬಹುದು ಎಂದು ಲುಂಬಿನಿ ಗಾರ್ಡನ್ಸ್‌ ಪ್ರಕಟಣೆಯಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next