Advertisement

ಅಜ್ಜನ ಮನೆಯಲ್ಲಿ ಬೇಸಿಗೆ ಶಿಬಿರ

03:45 AM May 28, 2017 | Harsha Rao |

ಬೇಸಿಗೆಯ ರಜೆಯಲ್ಲಿ ರೆಸಾರ್ಟ್‌-ಹೋಮ್‌ಸ್ಟೇಗಳ ಪ್ರದಕ್ಷಿಣೆ ಹಾಕುತ್ತ ಊರೂರಿಗೆ ಪ್ರವಾಸಕ್ಕೆ ಹೋಗಲಿ ಬಿಡಲಿ, ಆದರೆ ಮಕ್ಕಳಿಗೆ ಅವರ  ಅಜ್ಜನಮನೆಯ ಎರಡು ವಾರದ ವಾಸ ಮಾತ್ರ ತಪ್ಪಿಸುವ ಹಾಗೆಯೇ ಇಲ್ಲ. ಕಾಡು-ಮೇಡು, ತೋಟ-ಗ¨ªೆಗಳ ನಡುವೆ ಇರುವ ತವರಿಗೆ ಹೋಗುವುದೆಂದರೆ ನನಗೂ ಖುಷಿಯೇ. ತವರಿಗೆ ಹೊರಡುವುದೆಂದರೆ ಬಟ್ಟೆಯ ರಾಶಿಯನ್ನೆಲ್ಲ ನನ್ನೆದುರು ಸುರುವಿಕೊಂಡು ಯಾವ್ಯಾವ ಬಟ್ಟೆಗಳನ್ನು ತೆಗೆದುಕೊಳ್ಳಲಿ ಎಂಬ ಯಕ್ಷಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೆಣಗಿ, ಉಳಿಯುವುದು ಎರಡೇ ವಾರವಾದರೂ ಒಂದು ವರ್ಷಕ್ಕಾಗುವಷ್ಟು ಬಟ್ಟೆಯನ್ನು ಬ್ಯಾಗಿನಲ್ಲಿ ಹಿಡಿದುಕೊಳ್ಳುತ್ತೇನೆ. ಅರ್ಧಕ್ಕರ್ಧ ಬಟ್ಟೆಗಳ ಗಳಿಗೆಯನ್ನು ಸಹ ಮುರಿಯುವುದಿಲ್ಲವೆಂದು ನನಗೆ ಗೊತ್ತು. ನಾಲ್ಕಾರು ಹಿಡಿಂಬೆ ಗಾತ್ರದ ಬ್ಯಾಗುಗಳ ನಡುವೆ ವಸ್ತ್ರದ ಬಗ್ಗೆ ನಾನು ವ್ಯಸ್ತಳಾಗಿರುವಾಗ ನನ್ನ ಮಗರಾಯ ಫೋನಿನಲ್ಲಿ ಮಾತನಾಡುವುದು ಕಿವಿಗೆ ಬಿತ್ತು. 

Advertisement

“”ಅಜ್ಜಾ , ನಾವು ನಾಳೆಯೇ ಅಜ್ಜನಮನೆಗೆ ಬರುತ್ತಿದ್ದೇವೆ. ಅಲ್ಲಿ ನನಗೆ ಫ್ರೆಂಡ್ಸ್‌ ಯಾರೂ ಇರಲ್ಲ, ತುಂಬಾ ಬೇಸರ ಬರುತ್ತದೆ.  ನಿಮ್ಮ ಮನೆಯಲ್ಲಿ ಕಾಟೂìನು ಬರುತ್ತದೆಯಲ್ಲವೇ? ಕಾಟೂìನ್‌ ಬರಲ್ಲ ಅಂತಾದರೆ ಬೇಗ ರಿಚಾರ್ಜ್‌ ಮಾಡಿÕಡು. ನನಗೆ ಛೋಟಾ ಭೀಮ್‌ ಎಂದರೆ ತುಂಬಾ ಇಷ್ಟ. ಒಂದು ವೀಡಿಯೋ ಗೇಮ್‌ ಕೂಡ ಕೊಡಿಸುವ ಮಾತಿದೆ ನಿಂದು” ಅಂತ ಅಜ್ಜನ ಬಳಿ ಮುಕ್ಕಾಲುವಾಶಿ ಧಮಕಿಯ ಧಾಟಿಯಲ್ಲಿಯೇ ಮಾತನಾಡುತ್ತಿದ್ದ. 

ಬಟ್ಟೆ ತುಂಬುತ್ತಿದ್ದ ನಾನು, “”ಟೀವಿ ನೋಡಲು ಹೋಗುವುದಾದರೆ ಅಜ್ಜನಮನೆಯವರೆಗೆ ಯಾಕೆ ಹೋಗಬೇಕು, ಇಲ್ಲಿಯೇ ನೋಡಿದರಾಗದೆ?” ಎಂದು ಕುಳಿತಲ್ಲಿಂದಲೇ ಕೂಗುಹಾಕಿ ಮುಂದಿನ ತಯಾರಿಯತ್ತ ಹೊರಟೆ, ನನಗೆ ಗೊತ್ತು ನಾನೆಷ್ಟೇ ಹೇಳಿದರೂ ಮಕ್ಕಳು ಅಜ್ಜನ ದುಂಬಾಲು ಬೀಳುವುದನ್ನು ಬಿಡುವುದಿಲ್ಲ ಎಂದು.

ಬಟ್ಟೆಬರೆ ತುಂಬಿಕೊಂಡರಷ್ಟೇ ಆಗಲಿಲ್ಲ ನನಗೆ, ಬೇಸಿಗೆ ರಜೆ-ದೀಪಾವಳಿ ರಜೆ ಎಂಬ ಯಾವ ಭೇದವಿಲ್ಲದೆ ಕೆಲಸದÇÉೇ ಮುಳುಗಿರುವ ನಮ್ಮನೆಯ ಕರ್ಮಯೋಗಿಗೆ ಎರಡು ವಾರಕ್ಕಾಗುವಷ್ಟು ಪುಳಿಯೋಗರೆ ಗೊಜ್ಜು, ಪುದೀನ ಗೊಜ್ಜು, ಚಟ್ನಿಪುಡಿಗಳನ್ನೆಲ್ಲ ಮಾಡಿ ಜಾರಿನಲ್ಲಿ ತುಂಬಿಡಬೇಕು. ಅಕ್ಕಿ – ಬೇಳೆ ಕಾಳಿನ ಡಬ್ಬಿಗಳನ್ನು ಬರಿಗಣ್ಣಿಗೆ ಕಾಣುವಂತೆ ಸ್ಟೋವ್‌ ಪಕ್ಕವೇ ಜೋಡಿಸಿಡಬೇಕು. 

ಎÇÉಾ ತಯಾರಿಯನ್ನು ತರಾತುರಿಯಲ್ಲಿಯೇ ಮುಗಿಸಿ ಮಕ್ಕಳೊಂದಿಗೆ ಬಸ್ಸನ್ನೇರಿದ್ದೂ ಆಯ್ತು, ಅಜ್ಜನಮನೆ ತಲುಪಿದ್ದೂ ಆಯ್ತು. ತಪಸ್ಸಿಗೊಲಿದ ಭೋಳೆಶಂಕರ ಕೇಳಿದ್ದನ್ನೆಲ್ಲ ದಯಪಾಲಿಸಲು ಕಾತರನಾಗಿರುವಂತಹ ಹಂತವನ್ನು ಅದಾಗಲೇ ಅಜ್ಜ-ಅಜ್ಜಿ ತಲುಪಿಯಾಗಿತ್ತು, ಮೊಮ್ಮಕ್ಕಳನ್ನು ನೋಡುತ್ತಲೇ ಖುಷಿಯಿಂದ ಕರಗಿ ನೀರಾಗಿ ಹರಿದು ನದಿಯಾಗಿಬಿಟ್ಟರು. ಮೊಮ್ಮಕ್ಕಳೂ ಅಷ್ಟೇ ಅಜ್ಜ-ಅಜ್ಜಿಯರನ್ನು ಬಿಗಿದಪ್ಪಿ ತಮ್ಮ ಪ್ರೀತಿಯನ್ನು ತೋಡಿಕೊಂಡರು.

Advertisement

ಮೊದಲೆರಡು ದಿನಗಳನ್ನು ಅಜ್ಜ-ಅಜ್ಜಿಯರ ಜೊತೆ ಹುಸಿಮುನಿಸು, ಓಲೈಕೆ, ತಮ್ಮ ಕಥೆವ್ಯಥೆಗಳನ್ನೆಲ್ಲ ಹೇಳಿಕೊಳ್ಳುವುದರÇÉೇ ಕಳೆದರು ಮಕ್ಕಳೆಂಬ ನನ್ನ ಅಮೂಲ್ಯ ರತ್ನಗಳು. 

ಮಾರನೆಯ ದಿನ ಮಾಯಕ್ಕ ಬೆಳ್ಳಂಬೆಳಗ್ಗೆ ಮನೆಗೆ ಬರುವುದಕ್ಕೂ, ನನ್ನ ಮಕ್ಕಳಿಬ್ಬರೂ ಟಿ.ವಿ.ಯಲ್ಲಿ ಕಾಟೂìನು ಕುಣಿಯುತ್ತಿಲ್ಲ, ಆಡಲಿಕ್ಕೂ ಯಾರಿಲ್ಲ , ಬೇಜಾರು ಎಂದು ರಂಪ ತೆಗೆಯುವುದಕ್ಕೂ ಹದಾ ಆಯ್ತು. ಈ ಸಂದರ್ಭದಲ್ಲಿ ಮಾಯಕ್ಕನನ್ನು ಕಂಡೊಡನೆಯೇ ನನ್ನ ದಿನಭವಿಷ್ಯ ಸರಿಯಿಲ್ಲವೆಂದು ಆಗಲೇ ಖಾತ್ರಿಯಾಗಿಹೋಯ್ತು. ಅಪ್ಪಿತಪ್ಪಿ ಮಾಯಕ್ಕನ ಬಾಯಿಗೆ ಬಿದ್ದರೆ… ಬಿದ್ದವರಿಗೇ ಗೊತ್ತು ಅಲ್ಲಿಂದ ಎದ್ದುಬರುವುದು ಎಷ್ಟು ಕಷ್ಟ ಎಂದು.

ತಗೊಳ್ಳಿ ಶುರುವಾಗೇ ಹೋಯ್ತು, “”ಮಕ್ಕಳು ದೊಡ್ಡಾಗ್ತಾ ಇ¨ªಾಂಗೆ ಈ ಬೇಜಾರ ಹೇಳುವ ರೋಗ ಶುರುವಾಗ್ತದೆ. ಈಗಿನ ಕಾಲದ ಮಕ್ಕಳಲೊªà… ಅವ್ರಿಗೆ ಏನು ಬೇಕು, ತಿನ್ಲಿಕ್ಕೆ ಕಡುº ಕಜ್ಜಾಯ ಬೇಡ, ಆಡ್ಲಿಕ್ಕೆ ಮಣ್ಣು ಮಶಿ ಬೇಡ. ಸೂûಾ¾ತಿಸೂಕ್ಷ್ಮ ಆಗಿºಟ್ಟಿದಾರೆ. ತೀರ್ಥ ಕುಡದ್ರೆ ಥಂಡಿ, ಆರತಿ ತಗೊಂಡ್ರೆ ಉಷ್ಣ. ಹೀಟರ್‌ ನೀರು ಮೀಯುವವರಿಗೆ ಸೌದೆ ಕತ್ತಿಸಿ ಹಂಡ್ಯಾದಲ್ಲಿ ಕಾಯಿಸಿದ ಬಿಸ್ನೀರು ಮಿಂದು ಗೊತ್ತಿಲ್ಲ, ಹಳ್ಳದ ತಣ್ಣೀರು ಮಿಂದೂ ಗೊತ್ತಿಲ್ಲ. ಯಾವಾಗ ನೋಡಿದ್ರೂ ಟೀವಿ ಮುಂದಿರ್ತಾರೆ” 

ಯಾವ ಮಾಸ್ತರೂÅ ವರ್ಗವಾಗಿ ಬರಲಿಚ್ಛಿಸದ ನಮ್ಮೂರ ಶಾಲೆಗೆ ಬಾಯರ್ರಾಗಿ ಮಾಯಕ್ಕ ಬಂದು ಹದಿನಾಲ್ಕು ವರ್ಷವಾಯ್ತು, ಅಂತಹ ಮಾಯಕ್ಕನಿಗೆ ನಾವು ಎದುರಾಡುವುದುಂಟೆ? ಮಾಯಕ್ಕ ಮಾತನಾಡಲು ಅವಕಾಶವನ್ನೂ ಕೊಡುವವಳಲ್ಲ. ಮಾಯಕ್ಕನ ಮೊದಲನೆಯ ಎಸೆತಕ್ಕೇ ತತ್ತರಿಸಿ ಯಾರೂ ಮಾಡದ ತಪ್ಪನ್ನು ನಾವು ಮಾಡಿದ್ದೇವೆ ಎಂಬ ಪಾಪಪ್ರಜ್ಞೆಯಲ್ಲಿ ನಿಂತ ಮಕ್ಕಳ ಪರವಾಗಿ ವಕಾಲತ್ತು ವಹಿಸಿ ಒಂದು ಕೈ ನೋಡೇಬಿಡುವಾ ಅಂತ ನಾನು, “”ಮಾಯಕ್ಕ ಹಾಗಲ್ಲ, ನಾವು ಚಿಕ್ಕವರಿ¨ªಾಗ ಒಂದೊಂದು ಮನೆಯಲ್ಲೂ ಏಳೆಂಟು ಮಕ್ಕಳಿರುತ್ತಿದ್ದರು. ಎÇÉಾ ಸೇರಿ ಕುಣಿಯುವುದಕ್ಕೆ, ಊರೂರು ಅಲೆಯುತ್ತಿದ್ದಿದ್ದಕ್ಕೆ ನಮಗೆ ಬೇಸರ ಬರುತ್ತಿರಲಿಲ್ಲ. ಈಗ ಹುಡುಕಿದರೂ ಮಕ್ಕಳು ಆಟಕೆ ಸಿಗುವುದಿಲ್ಲ. ಯಾರೂ ಜೊತೆಗಿಲ್ಲ ಆಡಲು ಅಂತಲೇ ಈಗ ಟೀವಿ ಹಿಂದೆ ಬಿದ್ದಿ¨ªಾರೆ” ಎಂದೆ. 

ಮಾಯಕ್ಕ, “”ತಂಗೀ ಎÇÉಾ ಸಬೂಬು ನನಗೆ ಗೊತ್ತಿದ್ದಿದ್ದೇ. ಬೇಜಾರು ಬರುವ ರೋಗ ಮಕ್ಕಳು ಬೆಳೆಯುತ್ತಿ¨ªಾಗ  ಬರುವುದೇ ಹೌದಾದರೂ, ಆ ರೋಗಕ್ಕೆ ಮದ್ದಿದೆ ಎಂದರೆ ಮದ್ದುಂಟು, ಮದ್ದಿಲ್ಲ ಎಂದರೆ ಮದ್ದಿಲ್ಲ. ಎÇÉಾ ಅವರವರಿಟ್ಟುಕೊಂಡಾಂಗೆ ಅಷ್ಟೇ. ನನ್ನ ಒಂದು ಮಾತು ನೆನಪಿಟ್ಕ, ನಮ್ಮ ಡಾರ್ವಿನ್‌ ಹೇಳಾªಂಗೆ ಆಗ್ತದೆ ಅಂತಾದ್ರೆ ಮುಂದೊಂದಿನ ಟೀವಿ, ಮೊಬೈಲು ಅತಿಯಾಗಿ ನೋಡಿ ನೋಡಿ ಗುಡ್ಡೆ ಕಿತ್ತು ಬರುವ ಹಾಗಿರುವ ಕಣ್ಣಿನ, ಮೆಸೇಜು ಟೈಪ್‌ ಮಾಡಿ, ವೀಡಿಯೋ ಗೇಮ್‌ ಆಡಿ ಸವೆದು ಸಣಕಲಾದ ರಾಕ್ಷಸ ರೂಪದ ಉದ್ದುದ್ದ ಬೆರಳಿನ ಮಕ್ಕಳು ಹುಟ್ಟುವುದರಲ್ಲಿ ಸಂದೇಹವೇ ಇಲ್ಲ” 

ಈ ಮಾಯಕ್ಕ ಶಾಪ ಹಾಕ್ತಿ¨ªಾಳ್ಳೋ, ಶಕುನ ಹೇಳ್ತಿ¨ªಾಳ್ಳೋ ಒಂದೂ ತಿಳಿಯಲಿಲ್ಲ. ಆದರೆ ಅವಳು ಹೇಳಿದ್ದು ಮಾತ್ರ ಸುಳ್ಳೇನಲ್ಲ. ವಾದದಲ್ಲಿ ಮಾಯಕ್ಕನನ್ನು ಯಾರೂ ಗೆದ್ದಿದ್ದೇ ಇಲ್ಲ, ಹಾಗಿರುವಾಗ ನಾನೆಲ್ಲಿಯ ಅಪವಾದವಾಗಬÇÉೆ ! ನಿಧಾನಕ್ಕೆ ಮಕ್ಕಳೊಂದಿಗೆ ಆ ಜಾಗದಿಂದ ಕಳಚಿಕೊಂಡೆ. 

ದಿನಕ್ಕೊಂದು ದಿಕ್ಕಿಗೆ ದಂಡೆತ್ತಿ ಹೋಗುತ್ತಿದ್ದ ಮಕ್ಕಳಿದ್ದರು ಆ ಕಾಲದಲ್ಲಿ ಅಂತ ಈಗಿನ ಮಕ್ಕಳ ದೌರ್ಭಾಗ್ಯವನ್ನೋ-ಒಂದೆಡೆ ಕುಳಿತು ಟೆಂಪಲ್‌ ರನ್ನರ್‌ ಆಡುವ ಮಕ್ಕಳ ದುರ್ಗುಣವನ್ನೋ ಜರೆಯುತ್ತ ದೂರುತ್ತ ಕುಳಿತರೆ ಏನೂ ಉಪಯೋಗವಿಲ್ಲ. ಅಟ್ಟದ ಕೋಣೆಯಲ್ಲಿ ಚಡಪಡಿಸುತ್ತ ಕುಳಿತ ನನಗೆ ಅÇÉೇ ಮೂಲೆಯಲ್ಲಿ ಅಜ್ಜ ಅರ್ಥಾತ್‌ ನನ್ನ ಅಪ್ಪ ಖರೀದಿಸಿ ತಂದ ಮಾವಿನ ಕಾಯಿಗಳಿನ್ನೂ ಹಣ್ಣಾಗದೆ ಹುಲ್ಲು ಹೊದ್ದು ಮಲಗಿದ್ದು ಕಂಡು ದಿಮಾಗ್‌ ಕಿ ಬತ್ತಿ ಜಲ್‌ಗ‌ಯೀ. 

ಮಕ್ಕಳನ್ನು ದೂರುತ್ತ, ಕೊರಗುತ್ತ ಕುಳಿತರೆ ಸುಖವಿಲ್ಲ ಎಂದು ಬಗೆದು ಮರದÇÉೇ ಕಳಿತು ಹಣ್ಣಾಗಿ ಉದುರಿದ ಸೊನೆ ಸೂಸುವ ಮಾವಿನ ಹಣ್ಣನ್ನು ಕೈಯÇÉೇ ಉಜ್ಜಿಕೊಂಡು ತಿನ್ನುವ ರುಚಿ ಮಕ್ಕಳಿಗೂ ಹತ್ತಿಸಬೇಕು ಎಂದು ಮಕ್ಕಳಿಬ್ಬರನ್ನೂ ಕಟ್ಟಿಕೊಂಡು ಗ¨ªೆ ದಾಟಿ ಹೊರಟೆ. ಗ¨ªೆ ಬಯಲಾಚೆ ಸಾಲಾಗಿ ದೈತ್ಯಾಕಾರದ ಹರಿಗಿಂಡಿ ಮಾವಿನ ಮರ, ಪೊತ್ತೀಶಾಡಿನ ಮರ, ಮಾಣಿಬಟ್ಟನೆಂಬ ಜಾತಿಯ ಮಾವಿನ ಮರ, ಸಾಸೆ¾ ಹಣ್ಣಿನ ಮರಗಳಿವೆ.

ಮನೆಯಿಂದ ತಂದುಕೊಂಡ ಅಡಿಕೆ ಮರದ ಹಾಳೆಯನ್ನು ಇಟ್ಟುಕೊಂಡು ಮಕ್ಕಳೊಂದಿಗೆ ನಾನೂ ಅÇÉೇ ಠಿಕಾಣಿ ಹೂಡಿದೆ. ಜಾನಿ ಜಾನಿಯಂತಹ  ಪದ್ಯ ಮಾತ್ರ ಗೊತ್ತಿರುವ ಮಕ್ಕಳಿಗೆ ಹಣ್ಣುದುರಿಸುವ ನಾಟಿ ಮಂತ್ರ ಎಲ್ಲಿ ಗೊತ್ತು, ಪಾಪ ! ಮಕ್ಕಳಿಗೆ ನಿಮಿಷಾರ್ಧದಲ್ಲಿ ಮಂತ್ರೋಪದೇಶ ಮಾಡುತ್ತಿದ್ದಂತೆಯೇ ದಶದಿಕ್ಕುಗಳನ್ನೂ ನಡುಗಿಸುವಂತೆ ಮಕ್ಕಳ ಮಂತ್ರಘೋಷ ಶುರುವಾಗಿಯೇ ಹೋಯ್ತು.

ಗಾಳಿ ಗಾಳಿ ತಂಗಾಳಿ                                                                             
ನಂಗೊಂದ್‌ ಹಣ್ಣು, ನಿಂಗೊಂದ್‌ ಹಣ್ಣು                                                          
ಸೂರ್ಯದೇವ್ರಿಗ್‌ ಅರವತ್ತ್ ಹಣ್ಣು                                                                 
ಡಾಬ್‌ ಡೂಬ್‌

ಈ ಮಹಾಮಂತ್ರ ಹೇಳುತ್ತಿರುವಾಗೇನಾದರೂ ಗಾಳಿ ಬೀಸಿದರೆ ಸಾಕು ಇಡೀ ಪೊತ್ತೆಗೆ ಪೊತ್ತೆಯೇ ಉದುರಿ ಬೀಳುತ್ತದೆ ಎಂಬ ಮುಗ್ಧ ನಂಬಿಕೆ ಮಕ್ಕಳಲ್ಲಿಯೂ ಮೂಡಿತು. ಉದುರಿದ ತಾಜಾ ಮಾವುಗಳೊಂದಿಷ್ಟನ್ನು ತಿಂದು, ಕೆಲವು ಹಣ್ಣುಗಳನ್ನು ಹಾಳೆಕಡಿಯಲ್ಲಿ  ತುಂಬಿಕೊಂಡು ಮನೆಗೆ ಬರುವುದರಲ್ಲಿ ಇಡೀ ಒಪ್ಪತ್ತೇ ಕಳೆದುಹೋಗಿತ್ತು. ಟೀವಿಯ ಸುದ್ದಿ ಎತ್ತದೆ ಅಂತೂ ಒಂದು ದಿನ ಕಳೆದ¨ªಾಯ್ತು.

ತೋಟದಲ್ಲಿ ಹುಲುಸಾಗಿ ಬೆಳೆದ ಕಾಡೆಚೋಚಿ ಬಳ್ಳಿ ನನ್ನ ಮುಂದಿನ ಗುರಿ. ಕಾಡೆ ಚೋಚಿಯ ಎಲೆಗಳನ್ನು ಕಿತ್ತು ಕಲ್ಲಿನ ಮೇಲಿಟ್ಟು ಜಜ್ಜಿ ಲೋಳೆಯಂತಹ ರಸ ತೆಗೆದು, ಲೋಟದಲ್ಲಿ ಎರಡು ತಾಸಿಟ್ಟರೆ ಸಾಕು ಜೆಲ್ಲಿಯಂತಹ ನುಣ್ಣನೆಯ ಹಲಪೆ ಆಡಲು ರೆಡಿ. ಅದೇ ಲೋಳೆಯನ್ನು ಆಡಿ ಆದ ಮೇಲೆ ತಲೆಗೆ ತಿಕ್ಕಿ ಮಿಂದರೆ ದೇಹಕ್ಕೆ ಒಳ್ಳೇ ತಂಪು. ಕಾಡೆಚೋಚಿಯ ಜೆಲ್ಲಿ ಮಾಡಿ, ಆಡಿ, ಮಿಂದು… ಕಾಡೆಚೋಚಿಯ ಗುಂಗÇÉೇ ಮತ್ತೆರಡು ದಿನ ಕಳೆದುಹೋಯ್ತು.

ನಾನೂ ಮಕ್ಕಳೊಳಗೊಬ್ಬಳಾಗಿಬಿಟ್ಟಿ¨ªೆ. ಅಮ್ಮ-ಮಕ್ಕಳು ಬಿಸಿಲು ಬೇಗೆ ಎನ್ನದೆ ಬೆಟ್ಟ ಬೇಣ ಅಲೆದೆವು, ಗೇರುಹಣ್ಣಿನ ಮರದ ಎಳೆ ಎಲೆಯನ್ನು ತಾಂಬೂಲ ಎಂದು ಬಾಯಲ್ಲಿಟ್ಟು ಜಗಿದು, ತೊಗರು ರಸವನ್ನು ಕುಡಿದೆವು. ಗುಡ್ಡೆ ಗೇರನ್ನು ತಂದು ಒಣಗಿಸಿಟ್ಟು ತಿಂದೆವು. ನಮ್ಮ ಅಲೆದಾಟದ ಆರ್ಭಟದಲ್ಲಿ ಮಕ್ಕಳು ಪೋಕಿಮಾನು, ಡೋರೆಮಾನರನ್ನೆಲ್ಲ ಮರೆತು ಆದಿಮಾನವರಂತೆ ಕಾಡಲೆಯುವುದನ್ನು ಕಲಿತರು. ಬೇಜಾರಿಗೊಂದು ಮದ್ದು ಕಂಡುಹಿಡಿದ ನನ್ನ ನಿಂಜಾ ಟೆಕ್‌ನಿಕ್ಕಿಗೆ ನನಗೇ ಖುಷಿಯಾಗಿಹೋಯ್ತು. 

ಮಕ್ಕಳಿಗೆ ಆಟದ ಮನೆ ಮಾಡಿಕೊಡುವ ಉದ್ದೇಶದಿಂದ ಒಂದು ದಿನ ನೆನೆಸಿಟ್ಟ ತೆಂಗಿನ ಹೆಡೆಗಳನ್ನು ತಂದು ನಾನು ನೇಯತೊಡಗಿದೆ. ತಮಗೂ ಹೇಳಿಕೊಡು, ತಾವೂ ನೇಯ್ಯುತ್ತೇವೆ ಎಂದು ದುಂಬಾಲು ಬಿದ್ದರು ಮಕ್ಕಳು. ಯಾವತ್ತೂ ಟೀವಿ, ವಿಡಿಯೋ ಗೇಮಿಗೆ ಗಲಾಟೆ ಮಾಡುತ್ತಿದ್ದ ಮಕ್ಕಳು ಅದರ ಹೊರತಾಗಿಯೂ ಆಸೆಪಡುವುದನ್ನು ಕಂಡು ಈ ತಾಯಿಹೃದಯಕ್ಕೆ ಏನಾಗಬೇಡ! ಯಾರು ನೇಯ್ದರೇನು, ಹೇಗೆ ನೇಯ್ದರೇನು, ನಮಗ್ಯಾರ ಶಿಫಾರಸ್ಸಿನ ಹಂಗಿದೆ, ಮಕ್ಕಳಿಗೂ ಹೇಳಿಕೊಟ್ಟೆ ಹೆಡೆ ನೇಯ್ಯುವುದನ್ನು. ಸೊಟ್ಟಪಟ್ಟಗೆ ನೆಂದ ಹೆಡೆ ಹೊದೆಸಿದ ನಮ್ಮ ಚೆಂದದ ಮನೆತೋಟದಲ್ಲಿ ತಯಾರಾಯ್ತು. ಮನೆಯೊಳಗೆ ತೆಂಗಿನ ಕರಟದ ಪಾತ್ರೆ, ಪಾತ್ರೆಗಳಲ್ಲಿ ಮಣ್ಣು ಕರಡಿ ಮಾಡಿದ ಹುಳಿ, ಎಲೆಯನ್ನು ಕೊಚ್ಚಿ ಮಾಡಿದ ಪಲ್ಯ, ಮರಳಿನ ಅನ್ನ… ನಮ್ಮ ಆಟದ ಮನೆಮಕ್ಕಳ ಖಾಯಂ ಮನೆಯಾಗಿ ಹೋಯ್ತು. 

ಬಿಡುವಿಲ್ಲದೆ ಆಟದಲ್ಲಿ ಕಳೆಯುತ್ತಿದ್ದ ಮಕ್ಕಳಿಗೆ ಕಾಲಿಗೆ ಮುಳ್ಳಿನ ಸುಂಗು ಚುಚ್ಚಿದ್ದು ಅಷ್ಟೇ ಅಲ್ಲ , ಹೊರಡುವ ದಿನ ಬಂದಿದ್ದು ಮರೆತೂ ಹೋಗಿತ್ತು. ಮಜದಲ್ಲಿದ್ದ ಮಕ್ಕಳನ್ನು ವಾಪಸು ಹೊರಡಲು ತಯಾರಿ ಮಾಡಬೇಕಲ್ಲ. ಮುಂದಿನ ಸಲ ಬಂದಾಗ ಹಲಸಿನ ಹಣ್ಣನ್ನು ಉದುರಿಸುವ ನಾಟಿಮಂತ್ರವನ್ನು, ಕೆಸರಲ್ಲಿ ಗಂಬೂಟು ಮಾಡಿಕೊಂಡು ಓಡಾಡುವುದನ್ನೂ, ಕರಟದಲ್ಲಿ ತಕ್ಕಡಿ ಮಾಡುವುದನ್ನು ಹೇಳಿಕೊಡುವುದಾಗಿ ಮಾತು ಕೊಟ್ಟಮೇಲೆಯೇ ಮಕ್ಕಳು ಹೊರಡಲು ತಯಾರಾಗಿದ್ದು.

ಈಗಿನ ಕಾಲವನ್ನೋ, ಮಕ್ಕಳನ್ನೋ ದೂರುವುದಕ್ಕಿಂತ ದಣಿವಾಗುವವರೆಗೂ ಮಕ್ಕಳೊಂದಿಗೆ ನಲಿದರೆ ಮಾತ್ರ ಮಕ್ಕಳಿಗೂ, ಮಕ್ಕಳ ಜೊತೆ ನಮಗೂ ರಜೆಯ ಮಜಾದ ರುಚಿ ಹತ್ತುವುದು ಎಂದು ಬಾಗಿಲಲ್ಲಿ ನಿಂತು ಪಾಠ ಮಾಡಿದ ಮಾಯಕ್ಕನಿಗೆ ಪ್ರೀತಿಯಿಂದ ವಿದಾಯ ಹೇಳಿ ಹೊರಟೆವು.

– ಛಾಯಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next