Advertisement

ಸಂಕಲಕರಿಯ: ಮಂಗಗಳನ್ನು ಓಡಿಸಲು ಹುಲಿಯ ಬ್ಯಾನರ್‌!

11:19 PM Jul 03, 2019 | sudhir |

ಬೆಳ್ಮಣ್‌: ಕಾಡು ಪ್ರಾಣಿಗಳ ಉಪಟಳ ತಡೆಯಲು ಅಥವಾ ಅವುಗಳನ್ನು ಓಡಿಸಲು ಕೃಷಿಕರು ಸದ್ದು ಮಾಡುವುದೋ ಅಥವಾ ಹೆದರಿಲೋ ಪ್ರಯತ್ನಿಸುವುದು ಸಹಜ. ಆದರೆ ಸಂಕಲಕರಿಯ ಕಾಡು ಮನೆಯ ಕೃಷಿಕ ಅವುಲೀನ್‌ ಸೆರಾವೋ ತನ್ನ ತೆಂಗಿನ ತೋಟದ ಎಳನೀರು ಕುಡಿಯಲು ಬರುವ ಮಂಗಗಳನ್ನು ಓಡಿಸಲು ಬೃಹತ್‌ ಗಾತ್ರದ ಹುಲಿಯ ಭಾವಚಿತ್ರವುಳ್ಳ ಬ್ಯಾನರ್‌ ಒಂದನ್ನು ಅಡಿಕೆ ಮರಗಳಿಗೆ ಕಟ್ಟಿ ನಿಶ್ಚಿಂತೆಯಿಂದ ಇದ್ದಾರೆ. ಆ ಬ್ಯಾನರ್‌ ಗಾಳಿಗೆ ಆಲ್ಲಾಡುವಾಗ ಹುಲಿ ಬಂದಂತೆ ಭಾಸವಾಗುತ್ತಿದ್ದು ಒಮ್ಮೆ ಯಾರೂ ಹೆದರಲೇಬೇಕು.

Advertisement

ಈ ಹಿಂದೆ ನಿರಂತರವಾಗಿ ದಿನವೊಂದಕ್ಕೆ 25-30 ಎಳನೀರುಗಳನ್ನು ಕುಡಿದು ತೊಂದರೆ ಉಂಟು ಮಾಡುತ್ತಿದ್ದ 4 ಮಂಗಗಳು ಈ ಹುಲಿಯ ಬ್ಯಾನರ್‌ ಅಳವಡಿಸಿದ ಬಳಿಕ ಹತ್ತಿರ ಸುಳಿದಿಲ್ಲ ಎನ್ನುತ್ತಾರೆ ಅವುಲೀನ್‌.

ಅವುಲೀನ್‌ ಮುಂದೆ ತೋಟದ ನಾಲ್ಕು ದಿಕ್ಕುಗಳಲ್ಲಿ ಯೂ ಹುಲಿಯ ಚಿತ್ರದ ಬ್ಯಾನರ್‌ ಆಳವಡಿಸುವ ಯೋಚನೆಯಲ್ಲಿದ್ದಾರೆ. ಕಾಡುಕೋಣ, ಹಂದಿ, ಮಂಗ, ನವಿಲು ಮತ್ತಿನ್ನಿತರ ಕಾಡುಪ್ರಾಣಿಗಳ ಉಪಟಳ ಹೆಚ್ಚಿದೆ ಎನ್ನುವ ಅವುಲೀನ್‌ ಇವನ್ನು ಕೊಲ್ಲುವಂತಿಲ್ಲ. ಬದಲಾಗಿ ಓಡಿಸಲು ಇಂತಹ ಉಪಾಯಗಳನ್ನೇ ಮಾಡಬೇಕಾಗಿದೆ ಎನ್ನುತ್ತಾರೆ. 400 ರೂ. ನ ಹುಲಿಯ ಚಿತ್ರದ ಬ್ಯಾನರ್‌ ಸದ್ಯ ಸಹಸ್ರಾರು ರೂ. ಗಳ ಎಳನೀರು ಉಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next