Advertisement

Sankeshwara: ಮಾಜಿ ಮಂತ್ರಿ ಮಲ್ಹಾರಗೌಡಾ ಪಾಟೀಲ ಧರ್ಮಪತ್ನಿ ಸುಮಿತ್ರಾದೇವಿ ವಿಧಿವಶ

02:17 PM Aug 05, 2023 | Team Udayavani |

ಸಂಕೇಶ್ವರ : ರಾಜ್ಯ ಸರಕಾರದ ಮಾಜಿ ಸಚಿವ ಮಲ್ಹಾರಗೌಡಾ ಪಾಟೀಲ ಅವರ ಧರ್ಮಪತ್ನಿ ಸುಮಿತ್ರಾದೇವಿ ಮಲ್ಹಾರಗೌಡಾ ಪಾಟೀಲ (78) ಅವರು ಆ.5ರ   ಶನಿವಾರ ಬೆಳಿಗ್ಗೆ ವಿಧಿವಶವಾಗಿದ್ದಾರೆ.

Advertisement

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು. ಆದರೆ ಶನಿವಾರ ಮುಂಜಾನೆ ಚಿಕಿತ್ಸೆ ಫಲಿಸದೆ ವಿಧಿವಶವಾಗಿದ್ದಾರೆ.

ಮಾಜಿ ಮಂತ್ರಿ ಮಲ್ಹಾರಗೌಡಾ ಪಾಟೀಲ ಅವರು ಕೂಡಾ ಕಳೆದ‌‌ ಎರಡ್ಮೂರು ವರ್ಷಗಳ ಹಿಂದಷ್ಟೇ ವಿಧಿವಶವಾಗಿದ್ದರು.

ಸುಮಿತ್ರಾದೇವಿ ಅವರ ಅಂತ್ಯಕ್ರಿಯೆ ಅವರ ತೋಟದಲ್ಲಿ ಶನಿವಾರ ಸಂಜೆ 6 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next