ಹಾಸನ: ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆಗಳು ಮನರಂಜನೆಯಾಗಿ ಮಾರ್ಪಟ್ಟಿರುವುದು ಬೇಸರ ಮೂಡಿಸಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಕೆ.ಆರ್.ಎಸ್ ಬಿರುಕು ಬಿಟ್ಟಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯಲ್ಲಿ ಸಣ್ಣತನ, ಬೇರೆ ತರದ ಉದ್ದೇಶ ಇಲ್ಲ.
ಇದನ್ನೂ ಓದಿ: ಕೈ ನಾಯಕತ್ವದಲ್ಲಿ ಭಾರೀ ಬದಲಾವಣೆ? ಮಲ್ಲಿಕಾರ್ಜುನ ಖರ್ಗೆಗೆ ಪ್ರಮುಖ ಸ್ಥಾನ?
ಗ್ರಾಮ್ಯ ಭಾಷೆಯನ್ನು ಸುಮಲತಾ ಅಪಾರ್ಥ ಮಾಡಿಕೊಂಡಿದ್ದಾರೆ. ಒಬ್ಬ ಪುರುಷ ಸಂಸದನಿಗೆ ಇದೇ ರೀತಿ ಹೇಳಿದ್ದರೆ ಆಗಲೂ ಈ ರೀತಿ ಅಪಾರ್ಥ ಕಲ್ಪಿಸುತ್ತಿದ್ದರಾ ಎಂದು ಪ್ರಶ್ನಿಸಿದರು.
ಮಾಡುವ ಕೆಲಸ ನೂರಾರು ಇದೆ. ಅದರ ಕಡೆ ಗಮನ ನೀಡಬೇಕು. ಈ ವಿವಾದಕ್ಕೆ ಪೂರ್ಣ ವಿರಾಮ ಹಾಕಿ ಎಂದು ಸಲಹೆ ನೀಡಿದರು.