Advertisement

ನಾನು ಮಂಡ್ಯ ಮಣ್ಣಿನ ಮಗಳು : ಗೌಡ್ತಿಯಲ್ಲ  ಎಂದವರಿಗೆ ತಿರುಗೇಟು

12:30 AM Mar 21, 2019 | |

ಮಂಡ್ಯ: “ನಾನು ನಿಮ್ಮೂರಿನ ಮಳವಳ್ಳಿ ಹುಚ್ಚೇಗೌಡರ ಸೊಸೆ, ಅಂಬರೀಷ್‌ ಧರ್ಮಪತ್ನಿ, ಅಭಿಷೇಕ್‌ ತಾಯಿ, ಈ ಮಣ್ಣಿನ ತಾಯಿ. ಮಂಡ್ಯ ಮಣ್ಣಿನ ಮಗಳಾಗಿ ಜಿಲ್ಲೆಗೆ ಬಂದಿದ್ದೇನೆ…’

Advertisement

-ಮಂಡ್ಯ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅನಂತರ ಸುಮಲತಾ ಅಂಬರೀಷ್‌ ಅವರು ಬಹಿರಂಗ ಸಮಾವೇಶದಲ್ಲಿ ಉದ್ಗರಿಸಿದ ನುಡಿಗಳಿವು. ಮಂಡ್ಯ ಗೌಡ್ತಿ ಅಲ್ಲ ಎಂದು ಹೇಳಿದವರಿಗೆ ತನ್ನ ಮಾತಿನಿಂದಲೇ ತಿರುಗೇಟು ನೀಡಿದ ಸುಮಲತಾ ಅವರು, ನೋವಿನ ಸ್ಥಿತಿಯಲ್ಲಿದ್ದಾಗ ಧೈರ್ಯ ತುಂಬಿದವರೂ ಮಂಡ್ಯದವರೇ ಎಂದು ಹೇಳಿದರು. 

ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿ ಮಂಗಳವಾರ ಸಂಜೆಯೇ ಮೈಸೂರಿಗೆ ಬಂದಿದ್ದ ಸುಮಲತಾ ಅವರು, ಬುಧವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಳಿಕ ಡಿಸಿ ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿದರು.

ಮಕ್ಕಳು ತಾಯಿ ಪರ ನಿಲ್ಲೋದು ತಪ್ಪಾ?
ದರ್ಶನ್‌ ಮತ್ತು ಯಶ್‌ ನನ್ನ ಮನೆಯ ಮಕ್ಕಳು. ಚುನಾವಣೆಗಾಗಿ ಸ್ಪರ್ಧಿಸಿರುವ ತಾಯಿಗೋಸ್ಕರ ಮಕ್ಕಳು ಬರೋದು ತಪ್ಪಾ ಎಂದು ಸುಮಲತಾ ಪ್ರಶ್ನಿಸಿದರು. ನೀವಾದರೆ ಮಗನಿಗಾಗಿ ಪ್ರಚಾರ ಮಾಡಬಹುದು, ನನ್ನ ಮಕ್ಕಳು ಬರಬಾರದಾ ಎಂದು ನೇರವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು. ಇದಷ್ಟೇ ಅಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ದರ್ಶನ್‌ ಮತ್ತು ಯಶ್‌ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದಕ್ಕೆ ನನಗೆ ತುಂಬಾ ನೋವಾಗುತ್ತಿದೆ. ಅವರ ಅಭಿಮಾನಿಗಳು ಎಲ್ಲೆಡೆ ಇದ್ದಾರೆ ಎಂಬುದನ್ನು ಮರೆಯಬೇಡಿ ಎಂದರು

Advertisement

ಜನ ನೋಡಿ ಟೆನ್ಶನ್‌ ಆಗಿಲ್ಲ
ಮೇಲುಕೋಟೆ: ಸುಮಲತಾ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಿಂದ ನನಗೆ ಯಾವುದೇ ಟೆನ್ಶನ್‌ ಆಗಿಲ್ಲ  ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ  ಅವರು, ನಾನು ಯಾವುದೇ ನಟರ ಪ್ರಚಾರದ ಬಗ್ಗೆ  ಮಾತನಾಡುವುದಿಲ್ಲ. ನಾಯಕ ನಟರು, ಖಳನಾಯಕರು ಯಾರ ಪರವಾಗಿಯಾದರೂ ಪ್ರಚಾರ ಮಾಡಲಿ ಎಂದು ಪರೋಕ್ಷವಾಗಿ ಯಶ್‌, ದರ್ಶನ್‌, ದೊಡ್ಡಣ್ಣ  ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಗುರುವಾರ ನಿಖೀಲ್‌ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದು, ಮಾ. 25ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಾರೆ ಎಂದು ತಿಳಿಸಿದರು.

ನಾವಿಲ್ಲಿಗೆ ಯಾವುದೇ ಪಕ್ಷವಾಗಿ ಬಂದಿಲ್ಲ. ಪ್ರೀತಿಯಿಂದ ಬಂದಿದ್ದೇವೆ. ನಮ್ಮ ಬಗ್ಗೆ ಯಾರು ಏನೇ ಮಾತನಾಡಲಿ. ನಮಗೆ ಯಾವುದೇ ಕೋಪ, ಬೇಜಾರು ಇಲ್ಲ. ಯಾರಿಗೂ ಏನೂ ಅನ್ನೋದಿಲ್ಲ. ಇಂದಿನಿಂದ ನಮ್ಮ ಪರೇಡ್‌ ಶುರುವಾಗಿದೆ. ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ.
ದರ್ಶನ್‌, ನಟ

ನಾವು ಅಧಿಕಾರದ ಲಾಭಕ್ಕಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಷ್‌ ಮನೆಯ ಮಕ್ಕಳಾಗಿ ಅವರ ಋಣ ತೀರಿಸಲು ಬಂದಿದ್ದೇವೆ. ನಾವೇನು ಅಂಟಾರ್ಟಿಕಾ ಅಥವಾ ಪಾಕಿಸ್ಥಾನದಿಂದೇನೂ ಬಂದಿಲ್ಲ. ನಾವು ಸಿನೆಮಾ ಕಲಾವಿದರು. ಮಂಡ್ಯದ ಕಬ್ಬಿನ ಹಾಲು ಕುಡಿದು ಬೆಳೆದಿದ್ದೇವೆ. 
ಯಶ್‌, ನಟ

ಇಂದು ಕೈ ಅಭ್ಯರ್ಥಿಗಳು ಫೈನಲ್‌
ಅಭ್ಯರ್ಥಿಗಳ ಆಯ್ಕೆಗೆ ಗುರುವಾರ ದಿಲ್ಲಿಯಲ್ಲಿ ರಾಹುಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕೇಂದ್ರ ಚುನಾವಣ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಗುರುವಾರ ದಿಲ್ಲಿಗೆ ತೆರಳಲಿದ್ದಾರೆ. ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ 20 ಸ್ಥಾನಗಳು ದೊರೆತಿದ್ದು, ಅವುಗಳಲ್ಲಿ 10 ಹಾಲಿ ಸಂಸದರ ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದರಿಂದ 9 ಹಾಲಿ ಸಂಸದರಿಗೆ ಟಿಕೆಟ್‌ ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಬಿಜೆಪಿ ಪಟ್ಟಿ ಅಂತಿಮ
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಬಹುತೇಕ ಹಾಲಿ ಸಂಸದರಿಗೆ ಮತ್ತೆ ಟಿಕೆಟ್‌ ಸಿಗುವ ನಿರೀಕ್ಷೆಯಿದ್ದು, ಅಂತಿಮ ಹಂತದಲ್ಲಿ ವರಿಷ್ಠರು ಕೆಲವು ಬದ ಲಾವಣೆ ಮಾಡಿದರೂ ಅಚ್ಚರಿ ಇಲ್ಲ. ದಿಲ್ಲಿಯಲ್ಲಿ  ನಡೆದ ಬಿಜೆಪಿ ಕೇಂದ್ರ ಚುನಾ ವಣ ಸಮಿತಿ ಸಭೆಯಲ್ಲಿ  ಮಂಗಳ ವಾರ ತಡರಾತ್ರಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. ಸದ್ಯದಲ್ಲೇ ಪಟ್ಟಿ ಬಿಡುಗಡೆ ಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next