Advertisement

ಜೆಡಿಎಸ್‌ ಭದ್ರಕೋಟೆ ಭೇದಿಸಿದ ಸುಮಲತಾ

05:08 AM May 24, 2019 | Team Udayavani |

ಮಂಡ್ಯ: ರಾಜಕೀಯ ಜಿದ್ದಾ ಜಿದ್ದಿಗೆ ಹೆಸರಾಗಿರುವ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಭದ್ರಕೋಟೆಯನ್ನು ಭೇದಿಸಿ ಪ್ರಚಂಡ ಜಯ ದಾಖಲಿಸುವಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಯಶಸ್ವಿಯಾಗಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕೂಟ ದ ಅಭ್ಯರ್ಥಿ ಕೆ.ನಿಖಿಲ್‌ ಪರಾಭವಗೊಳ್ಳುವುದರೊಂದಿಗೆ ಸಿಎಂ ಕುಮಾರಸ್ವಾಮಿ ಮಾತ್ರ ವಲ್ಲದೆ ಜೆಡಿಎಸ್‌ ಶಾಸಕರೆಲ್ಲರೂ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.

Advertisement

ಮೊದಲ‌ 2 ಸುತ್ತುಗಳಲ್ಲಿ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಮುನ್ನಡೆ ಸಾಧಿಸಿದಾಗ ಅವರು ಜೆಡಿಎಸ್‌ ಗೆಲುವಿನ ಕನಸು ಮೂಡಿಸಿತ್ತು. ಆದರೆ, ಅದು ಹೆಚ್ಚು ಕಾಲ ಉಳಿ ಯಲೇ ಇಲ್ಲ. ಸುಮಲತಾ ವಿರುದ್ಧದ ಗೆಲುವಿನ ಅಂತರ ಕೇವಲ 2 ಸುತ್ತುಗಳಿಗಷ್ಟೇ ಸೀಮಿತವಾಯಿತು. ಆನಂತ ರದಲ್ಲಿ ಸುಮಲತಾ ಪ್ರತಿ ಸುತ್ತುಗಳಲ್ಲಿಯೂ ಮುನ್ನಡೆ ಸಾಧಿಸಲಾರಂಭಿಸಿದರು.

ಸುಮಲತಾ ಎಬ್ಬಿಸಿದ ಸ್ವಾಭಿಮಾನದ ಅಲೆಯೊಳಗೆ ಜೆಡಿಎಸ್‌ ಮೂಡಿಸಿದ್ದ ಅಭಿವೃದ್ಧಿ ಅಲೆ ಸಂಪೂರ್ಣವಾಗಿ ಕೊಚ್ಚಿಹೋಯಿತು. ಜೆಡಿಎಸ್‌ ಭದ್ರಕೋಟೆಯೊಳಗೆ ಸ್ವಾಭಿಮಾನದ ಕಹಳೆ ಮೊಳಗಿಸುವುದರೊಂದಿಗೆ ಏಕಾಂಗಿಯಾಗಿ ಚುನಾವಣಾ ಹೋರಾಟ ನಡೆಸಿ ಗೆಲುವಿನ ಗುರಿ ಮುಟ್ಟುವುದ ರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಸುಮಲತಾ ನಿರ್ಮಿಸಿದ್ದಾರೆ.

ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಜನರ ಆಕ್ರೋಶ ಲೋಕಸಭಾ ಚುನಾವಣಾ ಫ‌ಲಿತಾಂ ಶದಲ್ಲಿ ಪ್ರತಿಬಿಂಬಿತವಾಗಿರುವಂತೆ ಕಂಡುಬಂದಿತು. ಚುನಾವಣಾ ಅಖಾಡದಲ್ಲಿ ಪ್ರಬುದ್ಧ ರಾಜಕಾರಣಿಯಂತೆ ಕಂಡುಬಂದ ಸುಮಲತಾ ಅಂಬರೀಶ್‌ ಕೈ ಹಿಡಿದ ಕ್ಷೇತ್ರದ ಮತದಾರರು ಸಿಎಂ ಪುತ್ರ ಎಂಬುದನ್ನೂ ಪರಿಗಣಿಸದೆ ಕೆ.ನಿಖಿಲ್‌ರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಅಂಬರೀಶ್‌ ಸಾವಿನ ಅನುಕಂಪದ ಅಲೆ ಸುಮಲತಾರನ್ನು ಗೆಲುವಿನ ದಡ ಸೇರುವಂತೆ ಮಾಡಿದೆ.

ಲೋಕಸಭಾ ಇತಿಹಾಸದಲ್ಲೇ ಸುಮಲತಾ ಐತಿಹಾಸಿಕ ಗೆಲುವು ಸಾಧಿಸಿದ್ದು ಲೋಕಸಭೆ ಪ್ರವೇಶಿಸಿದ ಮೊದಲ ಪಕ್ಷೇತರ ಮಹಿಳಾ ಸಂಸದೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇದರೊಂದಿಗೆ 2019ರ ಮಂಡ್ಯ ಲೋಕಸಭಾ ಚುನಾವಣೆ ಹೊಸ ಇತಿಹಾಸವನ್ನು ಹುಟ್ಟುಹಾಕಿದೆ.

Advertisement

ಸುಮಲತಾ ಮಂಡ್ಯ ಗೌಡ್ತಿಯಲ್ಲ, ಆಕೆ ನಾಯ್ದು ಮನೆತನಕ್ಕೆ ಸೇರಿದವರು ಎಂಬೆಲ್ಲಾ ಜಾತಿ ಅಸ್ತ್ರಗಳೂ ಕೂಡ ಜೆಡಿಎಸ್‌ಗೆ ವರವಾಗಲಿಲ್ಲ. ಸುಮಲತಾ ವಿರುದ್ಧ ಬಳಸಿದ ಬಾಣಗಳೆಲ್ಲವೂ ಜೆಡಿಎಸ್‌ಗೆ ತಿರುಗು ಬಾಣವಾದವು. ಜೆಡಿಎಸ್‌ ನಾಯಕರು ಸುಮಲತಾ ಅವರನ್ನೇ ನೇರ ಗುರಿಯಾಗಿಸಿಕೊಂಡು ಆಡಿದ ಮಾತು ಗಳು ನಿಖಿಲ್‌ ಗೆಲುವಿಗೆ ಮುಳುವಾದವು. ಸಿಎಂ ಆದಿಯಾಗಿ ಜೆಡಿಎಸ್‌ ನಾಯಕರ ಸ್ವಯಂಕೃತ ಅಪರಾಧ ದಿಂದಾಗಿ ಜೆಡಿಎಸ್‌ ಸೋಲಿನ ಹಾದಿ ಹಿಡಿಯಿತು.

ಜೆಡಿಎಸ್‌ಗೆ ಅತ್ಯಂತ ಪ್ರತಿಷ್ಠೆಯ ಕಣ: ಜೆಡಿಎಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರ ಅತ್ಯಂತ ಪ್ರತಿಷ್ಠೆಯ ಕಣವಾಗಿತ್ತು. ಜೆಡಿಎಸ್‌ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯ ಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಲೋಕಸಭಾ ಕ್ಷೇತ್ರದ ಮೂವರು ಸಚಿವರು, ಎಂಟು ಶಾಸಕರು ಹಾಗೂ ಮೂವರು ವಿಧಾನಪರಿಷತ್‌ ಸದಸ್ಯರು ಸೇರಿ ಚುನಾವಣಾ ಕಾರ್ಯಾಚರಣೆ ನಡೆಸಿದರೂ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳಲು ಸಾಧ್ಯವಾಗಲೇ ಇಲ್ಲ. ಜೆಡಿಎಸ್‌ ಭದ್ರಕೋಟೆಯೊಳಗೆ ಪಕ್ಷದ ಬೇರುಗಳು ಸಡಿಲಗೊಂಡಿರುವುದಕ್ಕೆ ಮಂಡ್ಯ ಫ‌ಲಿತಾಂಶ ಸಾಕ್ಷಿಯಾಗಿದೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಮಯದಲ್ಲಿ ಸ್ಥಳೀಯ ನಾಯಕತ್ವಕ್ಕೆ ಮನ್ನಣೆ ನೀಡದೆ ಹೊರಗಿನ ನಾಯಕತ್ವಕ್ಕೆ ಮಣೆ ಹಾಕಿದ ಜೆಡಿಎಸ್‌ ವರಿಷ್ಠರು, ನಾಯಕರ ನಿಲುವನ್ನು ಮಂಡ್ಯ ಜನರು ಒಪ್ಪಿಕೊಳ್ಳಲಿಲ್ಲ. ಆರಂಭದಿಂದಲೂ ನಿಖಿಲ್‌ ಅಭ್ಯರ್ಥಿ ಮಾಡಿದ್ದರ ಬಗ್ಗೆ ವ್ಯಂಗ್ಯ, ಕುಹಕ, ಅಪಹಾಸ್ಯ ಮಾಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾದವು.

ಆದರೂ, ಜೆಡಿಎಸ್‌ ಜನಾಭಿ ಪ್ರಾಯವನ್ನು ಪರಿಗಣಿಸದೆ ಬಲವಂತದಿಂದ ಕೆ.ನಿಖಿಲ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಅಖಾಡಕ್ಕಿಳಿಸಿತು. ಇದರ ಪರಿಣಾಮ ಜೆಡಿಎಸ್‌ ಅಭ್ಯರ್ಥಿ ಕೆ.ನಿಖಿಲ್‌ರನ್ನು ಕಡೆಗಣಿಸಿದ ಜಿಲ್ಲೆಯ ಮತದಾರರು, ಹೊಸ ಶಕ್ತಿಯಾಗಿ ರಣಾಂಗಣ ಪ್ರವೇಶಿಸಿದ ಸುಮಲತಾ ಅವರನ್ನು ಜನರು ಒಪ್ಪಿಕೊಂಡು ಅಪ್ಪಿಕೊಂಡರು. ದೇವೇಗೌಡರ ಕುಟುಂಬಕ್ಕೆ ಎರಡನೇ ಕಣ್ಣಾಗಿರುವ ಮಂಡ್ಯ ಕ್ಷೇತ್ರದ ಫ‌ಲಿತಾಂಶ ಜೆಡಿಎಸ್‌ ವರಿಷ್ಠರಿಗೆ ದೊಡ್ಡ ಆಘಾತವನ್ನು ನೀಡಿದೆ. ಪುತ್ರನಿಗೆ ರಾಜಕೀಯ ಭವಿಷ್ಯ ಪಟ್ಟಾಭಿಷೇಕ ಮಾಡುವ ಮುಖ್ಯಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಹುದಿನದ ಕನಸು ನುಚ್ಚುನೂರಾಗಿದೆ.

ಮತಗಟ್ಟೆ ಬಳಿ ಲಘು ಲಾಠಿ ಪ್ರಹಾರ: ಮಾಧ್ಯಮಗಳಲ್ಲಿ ಬರುತ್ತಿದ್ದ ಫಲಿತಾಂಶವನ್ನು ನೋಡಿ ವಿಜಯೋತ್ಸವ ಆಚರಿಸುತ್ತಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಗರದಲ್ಲಿ ನಡೆಯಿತು. ಜಿಲ್ಲಾಡಳಿತವು ಜಿಲ್ಲಾದ್ಯಂತ ನಿಷೇಧಾಜ್ಞೆ ಹೊರಡಿ ಸಿದ್ದರೂ ಸುಮಲತಾ ಮುನ್ನಡೆ ಸಾಧಿಸಿದ ವಿಷಯ ತಿಳಿದ ಬೆಂಬಲಿಗರು ಮತ ಎಣಿಕೆ ನಡೆಯುತ್ತಿದ್ದ ಸರ್ಕಾರಿ ಮಹಾವಿದ್ಯಾಲಯದ ಬೆಂಗ ಳೂರು- ಮೈಸೂರು ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವಕ್ಕೆ ಮುಂದಾ ದರು. ಇದನ್ನು ಗಮ ನಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಸೋಲಿಗೆ ಶರಣಾದ ಅಪ್ಪ-ಮಗ: ಮಂಡ್ಯ ಲೋಕಸಭಾ ಕ್ಷೇತ್ರದೊಳಗೆ ಜೆಡಿಎಸ್‌ ವಿರೋಧಿ ಶಕ್ತಿಗಳೆಲ್ಲವೂ ಒಗ್ಗೂಡಿ ರಚಿಸಿದ ಚಕ್ರವ್ಯೂಹವನ್ನು ಬೇಧಿಸಲಾಗದೆ ಅಪ್ಪ (ಎಚ್‌.ಡಿ. ಕುಮಾರಸ್ವಾಮಿ) ಹಾಗೂ ಮಗ (ಕೆ.ನಿಖಿಲ್‌) ರಣಾಂಗಣದಲ್ಲೇ ಸೋಲಿಗೆ ಶರಣಾದರು. ಸೋಲಿಗೆ ವಿರೋಧಿಗಳು ರೂಪಿಸಿರುವ ರಾಜಕೀಯ ಚಕ್ರವ್ಯೂಹವನ್ನು ಬೇಧಿ ಸಲು ಪುತ್ರನ ಬೆಂಬಲಕ್ಕೆ ನಿಂತು ಗೆಲುವಿನ ಸಾರಥಿಯಾಗುವೆನೆಂದು ಎಚಿxಕೆ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದರು. ಆದರೆ, ಚಕ್ರವ್ಯೂಹ ಕುಮಾರ ಸ್ವಾಮಿ ಪಾಲಿಗೆ ಬೇಧಿಸಲಾಗದ ಉಕ್ಕಿನಕೋಟೆಯಾಯಿತು. ಹಣ, ಅಧಿಕಾರದ ದಾಹದೊಂದಿಗೆ ವಿಜಯವನ್ನು ಅರಸಿ ಹೊರಟಿದ್ದು ಗೆಲುವಿಗೆ ಮುಳುವಾಯಿತು.

ಮಂಡ್ಯದಲ್ಲಿ ಸ್ವಾಭಿಮಾನಕ್ಕೆ ಗೆಲುವು: ಮಂಡ್ಯದಲ್ಲಿ ಸ್ವಾಭಿಮಾನಕ್ಕೆ ಅಂತಿಮವಾಗಿ ಗೆಲುವು ಸಿಕ್ಕಿದೆ. ಜೆಡಿ ಎಸ್‌ ಮೇಲಿನ ಅಭಿಮಾನ ನೆಲಕಚ್ಚಿದೆ. ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಗೆ 8500 ಕೋಟಿ ರೂ. ಅಭಿವೃದ್ಧಿಯ ಆಶಾಗೋಪುರ ತೋರಿಸಿ ಪುತ್ರನನ್ನು ಗೆಲ್ಲಿ ಸುವ ರಾಜಕೀಯ ತಂತ್ರಗಾರಿಕೆ ನಡೆಸಿದರೂ ಜನರು ಅದಕ್ಕೆ ಮರುಳಾಗದೆ ಚಾಣಾಕ್ಷತನದಿಂದ ಮತ ಚಲಾಯಿಸಿ ಸುಮಲತಾಗೆ ಸ್ವಾಭಿಮಾನದ ಭಿಕ್ಷೆ ನೀಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರ ದೊಳಗೆ ಸ್ಥಳೀಯ ನಾಯಕತ್ವದ ಗೆದ್ದ ಸಂದರ್ಭದಲ್ಲಿ ಸ್ವಾಭಿಮಾನವನ್ನು ಪ್ರಮುಖ ಅಸ್ತ್ರವಾಗಿ ಪ್ರಯೋಗಿಸಿದ ಸುಮ ಅದನ್ನು ಗೆಲುವಿನ ಅಸ್ತ್ರವನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಹಿರಂಗವಾಗಿ ಸುಮಾಗೆ ಬೆಂಬಲ: ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಸಿಡಿದು ನಿಂತ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೆ ಬಹಿರಂಗವಾಗಿ ಸುಮಲತಾ ಬೆಂಬಲಕ್ಕೆ ನಿಂತಿತು. ರೈತ ಸಂಘ ಕೂಡ ಸಾಥ್‌ ನೀಡಿತು. ಜೆಡಿಎಸ್‌ ವಿರೋಧಿ ಕಾಂಗ್ರೆಸ್‌ನವರೆಲ್ಲರೂ ಬೆಂಬಲಕ್ಕೆ ನಿಂತು ಸುಮಲತಾ ಅವರಿಗೆ ವಿಜಯಕಂಕಣ ತೊಡಿಸಿದರು. ಜೆಡಿಎಸ್‌ ಜಿಲ್ಲಾ ನಾಯಕರು ಪಕ್ಷದ ವಿರುದ್ಧ ನಿಂತಿದ್ದ ಶಕ್ತಿಗಳೆದುರು ಸೆಣ ಸಾಡಲು ಅಸಮರ್ಥರಾದರು. ಪಕ್ಷದ ಅಭ್ಯರ್ಥಿಯ ವಿರುದ್ಧ ಎದುರಾದ ಜನ ವಿರೋಧಿ ಭಾವನೆಯನ್ನು ಎದುರಿಸಲಾಗದೆ ಅಸಹಾಯಕರಾದರು. ನಿಖಿಲ್‌ ಅವರನ್ನು ಗೆಲುವಿನ ದಡ ಸೇರಿಸಲಾಗದೆ ಅಂತಿಮವಾಗಿ ಕೈಚೆಲ್ಲಿದರು.

ಮಂಡ್ಯ (ಪಕ್ಷೇತರ)
-ವಿಜೇತರು ಸುಮಲತಾ ಅಂಬರೀಶ್‌
-ಪಡೆದ ಮತ 5,78,956
-ಎದುರಾಳಿ ನಿಖಿಲ್‌ ಕುಮಾರಸ್ವಾಮಿ (ಜೆಡಿಎಸ್‌)
-ಪಡೆದ ಮತ 4,63,956
-ಗೆಲುವಿನ ಅಂತರ 1,15,000

ಗೆಲುವಿಗೆ 3 ಕಾರಣ
-ಕಾಂಗ್ರೆಸ್‌ ನಾಯಕರಾದ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಅಂಡ್‌ ಟೀಂನ ಪರೋಕ್ಷ ಬೆಂಬಲ
-ಬಿಜೆಪಿಯವರ ಬಾಹ್ಯ ಬೆಂಬಲ, ಹಾಗೂ ಅನುಕಂಪದ ಅಲೆ
-ಬಹಿರಂಗ ಸಭೆಯ ಕೊನೆಯ ದಿನ ಮಂಡ್ಯ ಲೋಕಸಭಾ ಕ್ಷೇತ್ರದ ಜನರಲ್ಲಿ ಸೆರಗೊಡ್ಡಿ ಮತ ಬೇಡಿದ್ದು

ಸೋಲಿಗೆ 3 ಕಾರಣ
-ನಟರಾದ ದರ್ಶನ್‌, ಯಶ್‌ರನ್ನು ಕಳ್ಳ ಎತ್ತುಗಳು ಎಂದಿದ್ದು. ಸುಮಾಗೆ ಕೈನ ಕೆಲವು ಮುಖಂಡರ ಸಾಥ್‌
-ಸುಮಲತಾರನ್ನು ಸಂಸದ ಎಲ್‌.ಆರ್‌. ಶಿವರಾಮೇಗೌಡ ಮಾಯಾಂಗನೆ ಎಂದಿದ್ದು
-ಜನತೆ ಜೆಡಿಎಸ್‌ ಪಕ್ಷವನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ

Advertisement

Udayavani is now on Telegram. Click here to join our channel and stay updated with the latest news.

Next