Advertisement

ಬಿಎಸ್‌ವೈ ಭೇಟಿಯಾದ ಸುಮಲತಾ; ಜನರನ್ನು ಕೇಳಿ ನಿರ್ಧರಿಸುತ್ತೇನೆ

09:19 AM May 27, 2019 | Team Udayavani |

ಬೆಂಗಳೂರು : ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರು ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸಿದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Advertisement

ಡಾಲರ್ಸ್‌ ಕಾಲೋನಿಯಲ್ಲಿರುವ ನಿವಾಸಕ್ಕೆ ಆಗಮಿಸಿದ ಸುಮಲತಾ ಅವರು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನನಗೆ ಡಿರುವ ಬಿಜೆಪಿಗೆ ಧನ್ಯವಾದ ಸಲ್ಲಿಸಬೇಕು.ಸುನಾಮಿ ರೀತಿ ಬಿಜೆಪಿ ಗೆಲುವು ಸಾಧಿಸಿದೆ,ನನ್ನ ಕಡೆಯಿಂದ ಅಭಿನಂದನೆ.ನನ್ನ ಗೆಲುವು ಇತಿಹಾಸಮಂಡ್ಯದ ಜನ ಸೃಷ್ಟಿಸಿದ್ದಾರೆ, ಎಲ್ಲಾ ಪಕ್ಷಗಳು ನನ್ನ ಪರ ನಿಂತಿದ್ದವು. ನನ್ನ ಗೆಲುವಿಗೆ ಯಾರು ಕಾರಣಕರ್ತರು ಅವರೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಬಿಜೆಪಿ ಸೇರ್ಪಡೆಯಾಗುತ್ತೀರಾ ?
ಪಕ್ಷೇತರ ವಾಗಿ ಗೆದ್ದಾಗ ಪಕ್ಷವೊಂದನ್ನು ಸೇರ್ಪಡೆಯಾಗುವ ಅವಕಾಶ ಸಂವಿಧಾನದಲ್ಲಿ ಇಲ್ಲ, ಬೆಂಬಲ ನೀಡಬಹುದು ಎನ್ನುವುದು ನನಗಿರುವ ಮಾಹಿತಿ. ನನಗೆ ಜನಾಭಿಪ್ರಾಯ ಮುಖ್ಯ, ಮಂಡ್ಯದ ಪ್ರತೀ ತಾಲೂಕಿಗೆ ಹೋಗುತ್ತೇನೆ. ಮಂಡ್ಯದ ಜಿಲ್ಲೆಯ ಅಭಿವೃದ್ಧಿಗೆ ಏನು ಹೆಜ್ಜೆ ತೆಗೆದುಕೊಳ್ಳಬೇಕೋ ಜನರಿಂದ ಅಭಿಪ್ರಾಯ ಪಡೆಯುತ್ತೇನೆ ಎಂದರು.

ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಮಂಡ್ಯ ಜಿಲ್ಲೆಯ ರೈತರೇ ನನ್ನ ಮೊದಲ ಆಧ್ಯತೆ. ಅದೇ ನನ್ನ ಮೊದಲ ಕರ್ತವ್ಯ ಎಂದರು.

Advertisement

ಮಹಿಳೆಯರ ದೊಡ್ಡ ಪ್ರಮಾಣದ ಬೆಂಬಲ

ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ , ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಗರಾಗಿ ನಿಂತಪರಿಣಾಮ ಸುಮಲತಾ ಅವರಿಗೆ ಗೆಲುವಾಗಿದೆ. ಬಿಜೆಪಿ ಅವರಿಗೆ ಬೆಂಬಲ ನೀಡಿತ್ತು.ಪ್ರಧಾನಿ ಮೋದಿ ಅವರು ಮೈಸೂರಿನ ಸಮಾವೇಶದಲ್ಲಿ ಸುಮಲತಾ ಅವರ ಹೆಸರನ್ನು ಪ್ರಸ್ತಾವಿಸಿದ್ದರು. ಇದೆಲ್ಲದರ ಕಾರಣ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್‌.ಎಂ.ಕೃಷ್ಣ ಅವರು ಕೂಡ ಸುಮಲತಾ ಗೆಲುವಿಗೆ ಕಾರಣರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next