Advertisement

‘ಮಂಡ್ಯ ಜನರ ಒತ್ತಾಸೆಗೆ ‘ನೋ’ ಅನ್ನಲಾರೆ: ಸುಮಲತಾ ಸ್ವತಂತ್ರ ಸ್ಪರ್ಧೆ

07:09 AM Mar 18, 2019 | Karthik A |

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಸುಮಲತಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಇಂದು ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಮಲತಾ ಅವರು ತೆರೆ ಎಳೆದರು. ಸ್ಯಾಂಡಲ್‌ ವುಡ್‌ ನ ಸಂಪೂರ್ಣ ಬೆಂಬಲ ಮತ್ತು ಮಂಡ್ಯದ ಮತದಾರರ ಹಾಗೂ ಅಂಬರೀಷ್‌ ಅವರ ಅಭಿಮಾನಿಗಳ ಒತ್ತಾಸೆಗೆ ಕಟ್ಟುಬಿದ್ದು ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಸುಮಲತಾ ಅವರು ಇದೇ ಸಂದರ್ಭದಲ್ಲಿ ನುಡಿದರು. ಮಾರ್ಚ್‌ 20ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ತಾನು ನಾಮಪತ್ರವನ್ನು ಸಲ್ಲಿಸಲಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು. ಸುಮಲತಾ ಅವರಿಗೆ ನಟರಾದ ದೊಡ್ಡಣ್ಣ, ನಟರಾದ ದರ್ಶನ್‌ ತೂಗುದೀಪ, ಯಶ್‌, ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ಜೈ ಜಗದೀಶ್‌ ದಂಪತಿ ಸಹಿತ ಹಲವರು ಸಾಥ್‌ ನೀಡಿದ್ದರು.

Advertisement

ಪ್ರಜಾಪ್ರಭುತ್ವ  ವ್ಯವಸ್ಥೆಗೆ ಮಾದರಿಯಾಗುವ ರೀತಿಯಲ್ಲಿ ನನ್ನ ಸ್ಪರ್ಧೆ ಇರಬೇಕು ಎಂಬುದು ನನ್ನ ಬಯಕೆಯಾಗಿದೆ, ಹಾಗಾಗಿ ಯಾರೂ ಕೂಡಾ ವೈಯಕ್ತಿಕ ಆರೋಪಗಳು, ಕೀಳುಮಟ್ಟದ ಪ್ರಚಾರ ತಂತ್ರಗಳನ್ನು ಎದುರಾಳಿಗಳ ವಿರುದ್ಧ ಬಳದಂತೆ ಸುಮಲತಾ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ನಾವೆಲ್ಲಾ ಯುವ ಜನಾಂಗಕ್ಕೆ ಮಾದರಿಯಾಗುವ ರೀತಿಯಲ್ಲಿ ಈ ಚುನಾವಣೆಯನ್ನು ಎದುರಿಸೋಣ ಎಂಬುದು ಮಂಡ್ಯದ ಗೌಡ್ತಿಯ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಸುಮಲತಾ ಹೇಳಿದ್ದು…
– ಅಂಬರೀಷ್‌ ಬಿಟ್ಟುಹೋದ ಕನಸುಗಳನ್ನು ನೀವು ಈಡೇರಿಸಬೇಕು ಎನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ.
-ಅಂಬರೀಷ್‌ ತೀರಿಹೋದ ಸಂದರ್ಭದಲ್ಲಿ ನಾನು ಕತ್ತಲೆಯಲ್ಲಿದ್ದ ಮನಸ್ಥಿತಿಯಲ್ಲಿದ್ದೆ.
– ಈ ಜೀವನದಲ್ಲೇನಿದೆ ಎಂಬ ಭಾವನೆ ಶುರುವಾಗಿತ್ತು.
– ಅಂಬರೀಷ್‌ ಅವರು ಯಾವತ್ತೂ ನಾನು, ನನ್ನ ಕುಟುಂಬ ಎನ್ನಲಿಲ್ಲ. ಅವರ ಸುತ್ತ ಯಾವಾಗಲೂ ಸ್ನೇಹಿತರ ಬಳಗವಿರುತ್ತಿತ್ತು.
– ನೆಮ್ಮದಿಯ ಜೀವನ ಸಾಗಿಸಲು ನಮಗೆ ಯಾವ ಕೊರತೆಯೂ ಇಲ್ಲ.
– ಚುನಾವಣೆ ಎದುರಿಸಲು ಸಾಕಷ್ಟು ಧೈರ್ಯ ಬೇಕು
-ಜನರ ಒತ್ತಾಸೆಗೆ ನಾನು ಬೆಂಬಲ ನೀಡಲಿಲ್ಲ ಎಂದಾದರೆ ನಾನು ಅಂಬರೀಷ್‌ ಅವರ ಪತ್ನಿಯಾಗಿದ್ದು ಏನು ಪ್ರಯೋಜನ.

Advertisement

Udayavani is now on Telegram. Click here to join our channel and stay updated with the latest news.

Next