Advertisement
ಮಂಗಳವಾರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಸುಮಲತಾ ಹೇಳಿದ್ದಿಷ್ಟು:
Related Articles
Advertisement
* ನಿಮ್ಮ ಮಗನ ಪರ ತಾತ, ತಾಯಿ, ಚಿಕ್ಕಪ್ಪ ಸೇರಿ ರಾಷ್ಟ್ರ, ರಾಜ್ಯ ನಾಯಕರೆಲ್ಲ ಬರಬಹುದು. ನಾವು ಅವರ ಬಗ್ಗೆ ಎಲ್ಲಾದರೂ ಒಂದೇ ಒಂದು ಮಾತನಾಡಿದ್ದೇವಾ? ಅದು ನಮ್ಮ ಸಭ್ಯತೆ ಅಲ್ಲ. ನನಗೆ ಸಭ್ಯತೆ, ಸಂಸ್ಕಾರ ನನ್ನ ಬೆಳವಣಿಗೆಯಿಂದಲೇ ಬಂದಿದೆ. ನನ್ನ ಸ್ವಭಾವವೇ ಅದು.
ಸಾಬೀತಾದ್ರೆ ರಾಜ್ಯ ಬಿಟ್ಟು ತೊಲಗುವೆ: ಯಶ್* ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದು ಹೇಳಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದರೆ ಮಂಡ್ಯ ಮಾತ್ರವಲ್ಲ, ಈ ರಾಜ್ಯವನ್ನೇ ಬಿಟ್ಟು ಹೋಗುತ್ತೇನೆ. * ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಎಂದೂ, ಎಲ್ಲಿಯೂ ಆ ಮಾತನ್ನು ಹೇಳಿಲ್ಲ. ನಾನು ಹೇಳಿದ್ದನ್ನು ಸಾಕ್ಷಿ ಸಹಿತ ತೋರಿಸಿದರೆ ಕರ್ನಾಟಕವನ್ನೇ ಬಿಟ್ಟು ತೊಲಗುತ್ತೇನೆ. * ಮುಖ್ಯಮಂತ್ರಿ ಅವರು ತಮ್ಮ ಸ್ಥಾನ, ಘನತೆಗೆ, ಕುಟುಂಬಕ್ಕೆ ಶೋಭೆ ತರುವಂತಹ ಮಾತುಗಳನ್ನಾಡಬೇಕು. ಸುಳ್ಳು ಹೇಳಬಾರದು. ನಾವು ಸ್ವಾರ್ಥ ಇಟ್ಟುಕೊಂಡು ಅಥವಾ ಬೇರಾವುದೋ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಶ್ ಕುಟುಂಬದ ಮೇಲಿನ ಅಭಿಮಾನ ಇಲ್ಲಿಗೆ ಎಳೆದು ತಂದಿದೆ. ಅಂಬರೀಶಣ್ಣ ಬದುಕಿದ್ದಾಗಲೂ ಮನೆ ಮಕ್ಕಳಂತೆ ಇದ್ದೇವೆ. ಸತ್ತಾಗಲೂ ಆ ಕುಟುಂಬದ ಜತೆ ಇದ್ದೇವೆ. * ಮಂಡ್ಯದ ಜನರು ಮನಸ್ಸಾಕ್ಷಿಯನ್ನು ಕೇಳಿಕೊಂಡು ಮತ ಹಾಕಬೇಕು. ಸುಮಲತಮ್ಮನಿಗೆ ಒಂದೇ ಒಂದು ಅವಕಾಶ ಕೊಡಿ. ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಡಬೇಡಿ. ಅಂಬರೀಶ್ ಕುಟುಂಬ ನಿಮ್ಮ ಸ್ವತ್ತು. ಅದನ್ನು ಕಾಪಾಡಿ. ರೈತನ ಮಗನಾಗಿ ಒಂದು ಲೋಟ ಹಾಲು ಕರೆಯಲಿ: ದರ್ಶನ್
*ನಮಗೆ ರಾಜಕಾರಣ ಗೊತ್ತಿಲ್ಲ. ಆದರೆ, ಕಷ್ಟದಲ್ಲಿರುವವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದು ಗೊತ್ತಿದೆ. ನನಗೆ ವರ್ಷಕ್ಕೆ 2 ಕೋಟಿ ರೂ. ಹಣ ಬೇಕು. ಎಲ್‌ಕೆಜಿಯಿಂದ ಹಿಡಿದು ಮೆಡಿಕಲ್ ಸೀಟಿಗೆ ಹಣ ಕೇಳಿಕೊಂಡು ಬರುತ್ತಾರೆ. ಅವರೆಲ್ಲರಿಗೂ ನಾನು ನನ್ನ ದುಡಿಮೆಯ ಹಣ ನೀಡುತ್ತಿದ್ದೇನೆ. ಅದೇ ರೀತಿ ಅನುದಾನದ ಹಣವನ್ನು ನಮಗೆ ಕೊಟ್ಟು ನೋಡಲಿ ನಾವೇನು ಮಾಡ್ತೇವೆ ಅನ್ನೋದನ್ನು ತೋರಿಸ್ತೇವೆ. * ನಮ್ಮನ್ನು ರೈತರ ಮಕ್ಕಳಾ, ರೈತರ ಕಷ್ಟ ಗೊತ್ತಿದೆಯಾ ಎಂದು ಪ್ರಶ್ನಿಸುವ ಅವರು (ಕುಮಾರಸ್ವಾಮಿ) ರೈತನ ಮಗನಾಗಿ ಒಂದೇ ಒಂದು ಲೋಟ ಹಾಲು ಕರೆಯಲಿ. ಅದೂ ಬೇಡ. ಹಸು ಕರು ಹಾಕಿದ ಹತ್ತು ದಿನ ಏನು ಮೇವು ಕೊಡಬೇಕು ಎನ್ನುವುದನ್ನಾದರೂ ಹೇಳಲಿ. * ನನಗೂ ಎರಡು ಮುಖವಿದೆ. ಒಳ್ಳೆಯತನದಿಂದ ಇರುವವರ ಜತೆ ಹೇಗಿರುತ್ತೇನೋ, ಕೆಟ್ಟವರ ಜತೆ ನಿಂತಾಗಲೂ ಅಷ್ಟೇ ಕೆಟ್ಟವನಾಗಿರುತ್ತೇನೆ. ಆದರೆ, ಈ ಚುನಾವಣೆಯಲ್ಲಿ ನನ್ನ ಮಧ್ಯದ ಮುಖವನ್ನು ತೋರಿಸಬೇಕಾಯಿತು. ಅಂಬರೀಶಣ್ಣನ ಜತೆ ಸುಖದಲ್ಲೂ ಇದ್ದೆವು. ಸತ್ತ ನಂತರವೂ ಅವರ ಮನೆ ಮಕ್ಕಳಂತೆ ಇದ್ದೇವೆ. ನಾವೇನು ಕಳ್ಳತನ, ದರೋಡೆ, ಅತ್ಯಾಚಾರ ಮಾಡಿ ಬಂದಿದ್ದೇವಾ, ನಮ್ಮನ್ನ ಅಪರಾಧಿಗಳಂತೆ ನೋಡುವುದೇಕೆ? *ನೀವು (ಕುಮಾರಸ್ವಾಮಿ) ನಿಮ್ಮ ಮಗನ ಸಿನಿಮಾಗೆ 50 ಕೋಟಿ ಹಣ ಖರ್ಚು ಮಾಡುವ ಬದಲು ಮಂಡ್ಯ ಅಭಿವೃದ್ಧಿ ಮಾಡಿ ತೋರಿಸಿದ್ದರೆ ಇವತ್ತು ನೀವು ಬಂದು ಪ್ರಚಾರ ಮಾಡಬೇಕಿತ್ತಾ? ನಿಮ್ಮ ಕೊಡುಗೆಯನ್ನು ನೋಡೇ ಜನರು ಮತ ಹಾಕುತ್ತಿದ್ದರು.