ಅರಂತೋಡು: ಸುಳ್ಯ ತಾ| ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ವಠಾರದಲ್ಲಿ ಡಿ. 9ರಂದು ನಡೆಸಲು ನಿರ್ಧರಿಸಲಾಗಿದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಅಕ್ಷಯ್ಯ ಮಂದಿರದಲ್ಲಿ ಸುಳ್ಯ ತಾ| ಕ.ಸಾ.ಪ. ಅಧ್ಯಕ್ಷ ಹರ ಪ್ರಸಾದ್ ತುದಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿವಿಧ ಸಮಿತಿಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಖರ್ಚು-ವೆಚ್ಚಗಳ ಬಗ್ಗೆ ಹಣ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಕೆ.ಆರ್. ಗಂಗಾಧರ್ ಹಾಗೂ ಇತರ ಸಮಿತಿಯವರು ಸಲಹೆ ನೀಡಿದರು.
ಸುಳ್ಯ ತಾ| ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಸುಳ್ಯ ತಾ| ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಪೇರಾಲ್, ತೊಡಿಕಾನ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾ.ಪಂ. ಅಧ್ಯಕ್ಷೆ ನೀಲಾವತಿ ಕೊಡಂಕೇರಿ, ವಿವಿಧ ಸಮಿತಿಗಳ ಮುಖ್ಯಸ್ಥ ಹಾಗೂ ಸದಸ್ಯರಾದ ಕಿಶೋರ್‌ಕುಮಾರ್ ಉಳುವಾರು, ಪುರುಶೋತ್ತಮ ಕಿರ್ಲಾಯ, ಅಶ್ರಫ್ ಗುಂಡಿ, ಗಣಪತಿ ಭಟ್ ಗೂನಡ ಎ.ಕೆ. ಜತ್ತಪ್ಪ, ಚಂದ್ರಶೇಖರ ಆಚಾರ್ಯ, ಮಾಲತಿ ಬೋಜಪ್ಪ, ಸವಿತಾ ಬಾಳೆಕಜೆ, ದೀಪಕ್ ಕುತ್ತಮೊಟ್ಟೆ, ಡಾ| ಹರ್ಷವರ್ಧನ, ಶೇಷಗಿರಿ ಉಳುವಾರು, ಆನಂದ ಕಲ್ಲಗದ್ದೆ, ಜನಾರ್ದನ ಜೋಡಿಪಣೆ, ಕೇಶವಪ್ರಸಾದ ಗುಂಡಿಗದ್ದೆ, ವಿನೋದ್ ಉಳುವಾರು, ಕೆ.ಕೆ. ನಾರಾಯಣ, ರಮಾನಂದ ಬಾಳೆಕಜೆ, ಭವಾನಿಶಂಕರ ಅಡ್ತಲೆ, ಜನಾರ್ದನ ಬಾಳೆಕಜೆ, ತಿಮ್ಮಯ್ಯ ಮೆತ್ತಡ್ಕ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ತೇಜಸ್ವಿ ಕಡೆಪಾಲ ಮುಂತಾದವರು ಉಪಸ್ಥಿತರಿದ್ದರು.