Advertisement
ಕ್ರೀಡಾಂಗಣದ ಕಥೆ2006-07ರಲ್ಲಿ ರಾಜ್ಯ ಸರಕಾರ ತಾಲೂಕು ಕ್ರೀಡಾಂಗಣ ನಿರ್ಮಾಣ ಕ್ಕೆಂದು 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ನಗರದಿಂದ 4 ಕಿ.ಮೀ. ದೂರದಲ್ಲಿರುವ ಶಾಂತಿನಗರದಲ್ಲಿ 5.85 ಎಕ್ರೆ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಯಿತು. 60 ಲಕ್ಷ ರೂ. ವೆಚ್ಚದಲ್ಲಿ ಭೂಮಿ ಸಮತಟ್ಟು, ಕ್ರೀಡಾ ಪಟುಗಳ ವಿಶ್ರಾಂತಿ ಗೆಂದು ಎರಡು ಕಟ್ಟಡ ಗಳನ್ನು ನಿರ್ಮಿಸ ಲಾಯಿತು. ಅನಂತರ ಅನುದಾನ ಬಾರದೆ ಕಾಮಗಾರಿ ಮುಂದು ವರಿಯಲಿಲ್ಲ. 2 ಆರ್‌ಸಿಸಿ ಕಟ್ಟಡಗಳ ಕಿಟಕಿ ಗಾಜು, ಶೌಚಾಲಯದ ಬಾಗಿಲು ಒಡೆದು ಹೋಗಿವೆ. ಸೂಕ್ತ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ ಎಂಬ ಆರೋಪಗಳಿವೆ.
ಮಲೆನಾಡಿನ ಸುಳ್ಯದಲ್ಲಿ ಕ್ರೀಡಾ ಪಟುಗಳಿಗೆ ಬರವಿಲ್ಲ. ಆದರೆ ತರಬೇತಿಗೆ ಕ್ರೀಡಾಂಗಣದ ಕೊರತೆ ಇದೆ. ತಾತ್ಕಾಲಿಕ ನೆಲೆಯಲ್ಲಿ ಸ.ಪ.ಪೂ. ಕಾಲೇಜಿನ 200 ಮೀಟರ್ ಮೈದಾನದಲ್ಲಿ ತಾಲೂಕಿಗೆ ಸಂಬಂಧಿಸಿದ ಕ್ರೀಡಾಕೂಟಗಳನ್ನು ನಡೆಸಲಾಗುತ್ತದೆ. ಕೊನೆಗೂ ದಶಕಗಳ ಹಿಂದೆ ಹೊಸ ತಾಲೂಕು ಕ್ರೀಡಾಂಗಣಕ್ಕೆ ಯುವಜನ ಇಲಾಖೆ ಮುಖಾಂತರ ಅನುದಾನ ಬಿಡುಗಡೆ ಗೊಳಿಸಲಾಯಿತು. ಅನುದಾನದಲ್ಲಿ ಮೈದಾನವನ್ನು 200 ಮೀ. ಮಾತ್ರ ವಿಸ್ತರಿಸಲು ಪ್ರಯತ್ನಿಸಲಾಯಿತಾದರೂ ಅದೂ ವ್ಯವಸ್ಥಿತವಾಗಿ ಪೂರ್ಣಗೊಂಡಿಲ್ಲ. ತಡೆಗೋಡೆ ನಿರ್ಮಿಸಬೇಕಿದೆ
ಏರು-ತಗ್ಗಿನ ಗುಡ್ಡದಂತಿರುವ ಈ ಸ್ಥಳವನ್ನು ಸಮತಟ್ಟುಗೊಳಿಸಿ, ಕ್ರೀಡಾಂಗಣದ ಸುತ್ತಲೂ ತಡೆಗೋಡೆ ನಿರ್ಮಿಸ ಬೇಕಿದೆ. ಗ್ಯಾಲರಿ, ರಸ್ತೆ, ಇತರ ಮೂಲ ಸೌಕರ್ಯ ಒದಗಿಸಲು ಕನಿಷ್ಠ 2ರಿಂದ 3 ಕೋಟಿ ರೂ. ಅಗತ್ಯವಿದೆ.
Related Articles
ತಾಲೂಕು ಕ್ರೀಡಾಂಗಣಕ್ಕೆ 1 ಕೋಟಿ ರೂ. ಅನುದಾನ ಮಂಜೂ ರಾಗಿದೆ. ಉಳಿದ ಅನುದಾನಕ್ಕಾಗಿ ಮೈದಾನದ ಮೂಲ ಅಗತ್ಯ ಹಾಗೂ ಸಂಪರ್ಕ ರಸ್ತೆ ಸಹಿತ ಅಗತ್ಯ ಇರುವ ಕಾಮಗಾರಿ ಬಗ್ಗೆ ಪಟ್ಟಿ ತಯಾರಿಸಿ ನೀಡುವಂತೆ ಶಾಸಕರು ಸೂಚಿಸಿದ್ದಾರೆ. ಆ ಪಟ್ಟಿ ತಯಾರಿ ಪ್ರಗತಿಯಲ್ಲಿದೆ.
– ದೇವರಾಜ್ ಮುತ್ಲಾಜೆ , ಸ.ಯುವ ಸಬಲೀಕರಣ ಕ್ರೀಡಾಧಿಕಾರಿ, ಸುಳ್ಯ
Advertisement