ಸುಳ್ಯಪದವು: ಮಂಗಳೂರು ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಹಾಗೂ ಕಾಸರಗೋಡು ರಬ್ಬರ್ ಬೋರ್ಡ ಇದರ ವತಿಯಿಂದ ಸೋಮವಾರದಿಂದ ಒಂದು ವಾರಗಳ ಕಾಲ ರಬ್ಬರ್ ಟ್ಯಾಪಿಂಗ್ ಹಾಗೂ ನಿರ್ವಹಣೆಯ ಬಗ್ಗೆ ಉಚಿತ ತರಬೇತಿ ಕಾರ್ಯಾಗಾರವು ಸುಳ್ಯಪದವು ಮರದಮೂಲೆ ಮುರಳೀಧರ ಭಟ್ ಇವರ ರಬ್ಬರ್ ತೋಟದಲ್ಲಿ ಪ್ರಾರಂಭವಾಯಿತು.
ಸುಳ್ಯಪದವು ಗ್ರಾಮಾಭಿವೃದ್ಧಿ ಸಮಿತಿಯ ಸದಸ್ಯ ಮುರಳೀಧರ ಭಟ್ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಸುಳ್ಯದ ಸ್ತುತಿಲಿಂಗಂ ರಬ್ಬರ್ ಕೃಷಿ ಹಾಗೂ ನಿರ್ವಹಣೆ, ಟ್ಯಾಪಿಂಗ್ ಬಗ್ಗೆ ಮಾಹಿತಿ ನೀಡಿದರು.
ಸುಳ್ಯಪದವು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪಿ. ಗೋವಿಂದ ಭಟ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಜನತೆ ಸ್ವಾವಲಂಬಿ ಜೀವನ ನಿರ್ವಹಣೆಗೆ ಸ್ವ-ಉದ್ಯೋಗ ಅಗತ್ಯವಾಗಿ ಬೇಕು. ರಬ್ಬರ್ ಟ್ಯಾಪಿಂಗ್ ತರಬೇತಿಯನ್ನು ಪಡೆದುಕೊಂಡರೆ ಸ್ವತಃ ಮನೆಯ ರಬ್ಬರ್ ಟ್ಯಾಪಿಂಗ್ ನಡೆಸಿ ಜತೆಯಲ್ಲಿ ಬೇರೆ ರಬ್ಬರ್ ತೋಟದಲ್ಲಿ ಕೆಲಸ ಮಾಡಿ ಆದಾಯಗಳಿಸಬಹುದು ಎಂದರು.
ಹೀಗೆ ಪ್ರತಿಷ್ಠಾನ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಗೊಂಡಿದ್ದು ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಸ್ವಾಲಂಬಿಯಾಗಿ ಜೀವನ ನಡೆಸಲು ಪ್ರಯತ್ನಿಸುವ ಎಂದು ಅವರು ಹೇಳಿದರು. ಬಡಗನ್ನೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಭಟ್ ಚಂದುಕೂಡ್ಲು ಹರಿಪ್ರಸಾದ್, ಸತೀಶ್ ಕುಮಾರ್, ರವಿ ಪಿ., ಶಿವರಾಮ ಪಿ., ವೆಂಕಟೇಶ್ ಕೆ., ಗಿರೀಶ್, ರವೀಂದ್ರ, ಗುರುಪ್ರಸಾದ ಬಿ., ಮುದ್ದುಮೀನಾ, ಬಾಲಸುಬ್ರಹ್ಮಣ್ಯ, ಬಾಲಚಂದ್ರ, ಮುರಲೀಕೃಷ್ಣ, ನಾಗರಾಜ, ಅರುಣಕುಮಾರ್ ಕನ್ನಡ್ಕ ಮೊದಲಾದವರು ಭಾಗವಹಿಸಿದರು.