Advertisement
ಸುಳ್ಯ ನ.ಪಂ. ಸಾಮಾನ್ಯ ಸಭೆ ಗುರುವಾರ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಡಿಯುವ ನೀರಿನ ಕುರಿತಂತೆ ನಡೆದ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಮುಂದಿನ 10 ದಿನದಲ್ಲಿ ಮಳೆ ಬಾರದೇ ಇದ್ದಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದೀತು.
Related Articles
Advertisement
ಶೌಚಾಲಯದ ನೀರನ್ನು ಹೊರಗೆ ಬಿಡುವುದು ಸರಿಯಲ್ಲ ಎಂದು ಸದಸ್ಯರು ಪ್ರಸ್ತಾವಿಸಿದರು. ಬೇಡಿಕೆ ಇರುವಲ್ಲಿ ಬೋರ್‌ವೆಲ್ ಕೊರೆಸುವ ಬಗ್ಗೆ, ವಸತಿ ಯೋಜನೆಯ ಹಣ ಪಾವತಿ ಆಗದೇ ಇರುವ ಬಗ್ಗೆ, ರಸ್ತೆ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆ ನೀಡಲು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸದಸ್ಯ ಶರೀಫ್ ಕಂಠಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತಾ ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಸುಶೀಲಾ ಜಿನ್ನಪ್ಪ, ಶಿಲ್ಪಾ ಸುದೇವ್, ವಾಣಿಶ್ರೀ ಬೊಳಿಯಮಜಲು, ಪೂಜಿತಾ ಕೆ.ಯು., ಪ್ರವಿತಾ ಪ್ರಶಾಂತ್, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ನಾರಾಯಣ ಶಾಂತಿನಗರ, ಬಾಲಕೃಷ್ಣ ರೈ, ಬುದ್ಧ ನಾಯ್ಕ, ನಾಮನಿರ್ದೇಶನ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ ಮತ್ತಿತರರಿದ್ದರು.
ಪುಸ್ತಕದಲ್ಲಿ ನಮೂದಿಸಲು ಸೂಚನೆಸದಸ್ಯ ಬೂಡು ರಾಧಾಕೃಷ್ಣ ಮಾತನಾಡಿ, ಸುಳ್ಯದಲ್ಲಿ ಇಂದಿರಾ ಕ್ಯಾಂಟಿನ್ ಕಾರ್ಯಾಚರಿಸುತ್ತಿದೆ. ಇದರ ಜವಾಬ್ದಾರಿ ನೋಡಿಕೊಳ್ಳುವವರು ಯಾರು, ಅಲ್ಲಿ ಎಷ್ಟು ಊಟ, ತಿಂಡಿ ಹೋಗುತ್ತದೆ ಎಂದು ಪ್ರಶ್ನಿಸಿ, ಅಲ್ಲಿನವರ ವರ್ತನೆ ಸರಿಯಿಲ್ಲದೆ ಇರುವುದರಿಂದ ಜನರು ಬರುತ್ತಿಲ್ಲ. ಈ ಬಗ್ಗೆ ನ.ಪಂ. ಗಮನ ಹರಿಸಬೇಕು ಎಂದರು. ಉತ್ತರಿಸಿದ ಮುಖ್ಯಾಧಿಕಾರಿ ಸುಧಾಕರ್ ಅವರು ಈ ಬಗ್ಗೆ ವರದಿ ನೀಡುತ್ತೇವೆ. ಗುತ್ತಿಗೆ ಪಡೆದುಕೊಂಡ ಸಂಸ್ಥೆ ಕ್ಯಾಂಟಿನ್ ನಡೆಸುತ್ತದೆ. 50-60 ಮಂದಿ ನಿತ್ಯ ಬರುತ್ತಿದ್ದಾರೆ ಎಂದ ಅವರು ಅಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅಲ್ಲಿನ ದೂರು ಪುಸ್ತಕದಲ್ಲಿ ಉಲ್ಲೇಖೀಸಿದ್ದಲ್ಲಿ ಸಂಬಂಧಿಸಿದವರಿಗೆ ತಿಳಿಸುವ ಕೆಲಸ ಮಾಡಲಾಗುವುದು ಎಂದರು.