Advertisement
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸುಲ್ತಾನ್ ಬತ್ತೇರಿ ಕೋಟೆಯನ್ನು ಅಭಿವೃದ್ಧಿಗೊಳಿಸಲು ಪುರಾತತ್ವ ಇಲಾಖೆಯೂ ಇದೀಗ ಮೊದಲನೇ ಹಂತದ ಯೋಜನೆ ಯನ್ನು ಕೈಗೊಂಡಿದೆ. ಇದರಂತೆ ಕೋಟೆಯ ಬಿಳಿ ಬಣ್ಣದ ಪೈಂಟಿಂಗ್ ನಿಂದ ಕಂಗೊಳಿಸುತ್ತಿದೆ. ಕೋಟೆಯ ಹೊರ ಭಾಗ ಮತ್ತು ಒಳಭಾಗಕ್ಕೆ ಸುತ್ತಲೂ ಪೈಂಟಿಂಗ್ ಮಾಡ ಲಾಗಿದ್ದು, ಸುತ್ತಲೂ ಕಲ್ಲಿನ ಹಾಸು ಅಳವಡಿಸಿ ಪ್ರವಾಸಿಗ ರನ್ನು ಮತ್ತಷ್ಟು ಆಕರ್ಷಿಸುವಂತೆ ಮಾಡಲಾಗಿದೆ.
Related Articles
ಮಂಗಳೂರು ಕಡೆಯಿಂದ ಸುಲ್ತಾನ್‌ಬತ್ತೇರಿಗೆ ಬರಲು ಮಣ್ಣಗುಡ್ಡೆ ಬಸ್ ತಂಗುದಾಣದಲ್ಲಿ ತಿರುಗಿ ಉರ್ವ ಮಾರುಕಟ್ಟೆ ಮುಖೇನ ಪ್ರವೇಶ ಪಡೆಯಬೇಕು. ಉರ್ವ ಮಾರುಕಟ್ಟೆಯಿಂದ ಸುಲ್ತಾನ್ ಬತ್ತೇರಿಗೆ ತೆರಳುವ ರಸ್ತೆ ಗುಂಡಿಬಿದ್ದಿದೆ.
Advertisement
ಈ ರಸ್ತೆಯ ಮೂಲಕ ದಿನಂಪ್ರತಿ ಹತ್ತಾರು ವಾಹನಗಳು ಬರುತ್ತಿದ್ದು, ರಸ್ತೆಯ ಅರೆ ಬರೆ ಕಾಮಗಾರಿ ನಡೆದಿದೆ. ಚರಂಡಿ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟದಿಂದ ಮೇಲೆ ಇದೆ. ಒಂದು ಮಳೆ ಬಂದರೆ ರಸ್ತೆ ತುಂಬೆಲ್ಲ ಕೃತಕ ನೆರೆಆವರಿಸುತ್ತದೆ. ಈ ಭಾಗದಲ್ಲಿ ಸದ್ಯ ಕಾಮಗಾರಿಯೂ ನಡೆಯುತ್ತಿದೆ.
ಉದಯವಾಣಿ “ಸುದಿನ ವರದಿ ಮಾಡಿತ್ತುಪುರಾತತ್ವ ಇಲಾಖೆಯಡಿ ಬರುವ ಸುಲ್ತಾನ್ ಬತ್ತೇರಿ ನಿರ್ಲಕ್ಷಕ್ಕೆ ಒಳಗಾಗಿದ್ದು, “ಸಂರಕ್ಷಿತ ಸ್ಮಾರಕ ತಾಣ ಸುಲ್ತಾನ್ ಬತ್ತೇರಿಗೆ ಬೇಕಿದೆ ರಕ್ಷಣೆ’ ಎಂಬ ಶೀರ್ಷಿಕೆಯಡಿ “ಸುದಿನ’ ವಿಶೇಷ ವರದಿ ಪ್ರಕಟಿಸಲಾಗಿತ್ತು. ಆ ವೇಳೆ ಕೋಟೆಯ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಸದ್ಯ ಸುಲ್ತಾನ್ ಬತ್ತೇರಿ ಸುತ್ತಮುತ್ತ ಸ್ವತ್ಛಗೊಳಿಸಿ, ಕೋಟೆಯನ್ನು ಪ್ರವಾಸಿಗರ ಆಕರ್ಷಣೆಗೊಳಪಡಿಸಲಾಗಿದೆ. ಕೋಟೆ ಸುರಕ್ಷೆಗೆ ಆದ್ಯತೆ
ಸುಲ್ತಾನ್‌ಬತ್ತೇರಿಗೆ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಕೋಟೆಗೆ ಪೈಂಟಿಂಗ್ ಮಾಡಲಾಗಿದ್ದು, ಕೋಟೆಯ ಸುರಕ್ಷೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಕೋಟೆಯ ಸುತ್ತಮುತ್ತಲು ಬೆಳೆದ ಹುಲ್ಲನ್ನು ಕಟಾವು ಮಾಡಲಾಗಿದ್ದು ಸುತ್ತಲೂ ಕಲ್ಲಿನ ಹಾಸು ಅಳವಡಿಸಲಾಗಿದೆ. ಮುಂದಿನ ದಿನ ಗಳಲ್ಲಿಯೂ ಕೋಟೆಯ ಅಭಿವೃದ್ಧಿಯ ಕಡೆಗೆ ಗಮನ ಹರಿಸಲಾಗುವುದು.
– ಗೋಕುಲ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಸಂರಕ್ಷಣಾ ಸಹಾಯಕ ಅಧಿಕಾರಿ