Advertisement
ಏಳು ವರ್ಷಗಳ ಹಿಂದೆ ಮಂಜೂರಾಗಿ ಅಡಿಪಾಯ ಹಂತದಲ್ಲಿ ಮೊಟಕುಗೊಂಡಿರುವ ಅಂಬೇಡ್ಕರ್ ಭವನ ಪರಿಶೀಲಿಸಿದ ಬಳಿಕ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ದ.ಕ. ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಯೋಗೀಶ್ ಮಾತನಾಡಿ, 3.10 ಕೋಟಿ ರೂ. ವೆಚ್ಚದ ಯೋಜನೆ ಇದು. ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ 1 ಕೋಟಿ ರೂ. ಅನುದಾನದಲ್ಲಿ ಭವನ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಅದಾದ ಬಳಿಕ 3.10 ಕೋಟಿ ರೂ.ಗೆ ಏರಿಸಲಾಗಿತ್ತು. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕ 1.50 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆರಂಭಿಕ ಹಂತದ ಕಾಮಗಾರಿಗೆ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 75 ಲಕ್ಷ ರೂ.ಗಳನ್ನು ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರಕ್ಕೆ ಪಾವತಿಸಲಾಗಿದೆ. 50 ಲಕ್ಷ ರೂ. ಬಿಡುಗಡೆಗೆ ಬಾಕಿ ಇದೆ. ಉಳಿದ 1.60 ಕೋಟಿ ರೂ. ಅನುದಾ ನವನ್ನು ಸ್ಥಳೀಯಾಡಳಿತ ಸಂಸ್ಥೆಗಳಿಂದ ನೀಡಲು ತೀರ್ಮಾನಿಸಲಾಗಿತ್ತು ಎಂದರು.
ಅಧಿಕಾರಿಯಿಂದ ಮಾಹಿತಿ ಪಡೆದ ಬಳಿಕ ಪ್ರತಿಕ್ರಿ ಯಿಸಿದ ಜಿ.ಪಂ. ಅಧ್ಯಕ್ಷರು, ಇಷ್ಟು ದೊಡ್ಡ ಅನುದಾನವನ್ನು ಸ್ಥಳೀಯ ಸಂಸ್ಥೆ ಎಲ್ಲಿಂದ ಒದಗಿಸು ವುದು? ಈ ರೀತಿ ತೀರ್ಮಾನ ಮಾಡಿರುವುದು ಸರಿ ಯಲ್ಲ. ಈ ಅನುದಾನಕ್ಕೆ ಕಾದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಬೇರೆ ವ್ಯವಸ್ಥೆ ಮಾಡಬೇಕು ಎಂದರು. 75 ಲಕ್ಷ ರೂ. ಬಳಕೆ ಬಗ್ಗೆ ಅನುಮಾನ!
ಅಂಬೇಡ್ಕರ್ ಭವನದ ತಳಪಾಯ, ಫಿಲ್ಲರ್ ನಿರ್ಮಾಣಕ್ಕೆ 75 ಲಕ್ಷ ರೂ. ಖರ್ಚಾಗಿರಲು ಸಾಧ್ಯವಿಲ್ಲ. ಇದನ್ನು ಸಾಮಾನ್ಯ ವ್ಯಕ್ತಿಯೂ ಹೇಳಬಲ್ಲ ಎಂದು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ ಪ್ರಶ್ನಿಸಿದರು. ಥರ್ಡ್ ಪಾರ್ಟಿ ಪರಿಶೀಲನೆಗೆ ಒತ್ತಾಯಿಸಿದರು. ಈ ಬಗ್ಗೆ ಸೂಚನೆ ನೀಡಿದ ಜಿ.ಪಂ. ಅಧ್ಯಕ್ಷರು, ಜಿ.ಪಂ. ಎಂಜಿನಿಯರಿಂಗ್ ಇಲಾಖೆ ಮೂಲಕ ಪರಿಶೀಲಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ಸಂಸ್ಥೆಯಿಂದ ಪರಿಶೀಲನೆ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆವಿಜಿ ಎಂಜಿನಿಯರಿಂಗ್ ಸಂಸ್ಥೆಯಿಂದ ಥರ್ಡ್ ಪಾರ್ಟಿ ಪರಿಶೀಲನೆ ನಡೆಸುವ ಅಭಿಪ್ರಾಯ ವ್ಯಕ್ತವಾಯಿತು.
Related Articles
ನಿರ್ಮಿತಿ ಕೇಂದ್ರದ ಎಂಜಿನಿಯರ್ ಗೈರು ಹಾಜರಾದ ಬಗ್ಗೆ ಜಿ.ಪಂ. ಅಧ್ಯಕ್ಷೆ ಅಸಮಾಧಾನ ವ್ಯಕ್ತಪಡಿಸಿದರು. ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ ಅವರೂ ಈ ಬಗ್ಗೆ ಸಹಾಯಕ ಎಂಜಿನಿಯರ್ ಅವರನ್ನು ಪ್ರಶ್ನಿಸಿದರು.
Advertisement
ತಾ.ಪಂ. ಇಒ ಮಧುಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಯೋಗೀಶ್, ಜಿ.ಪಂ. ಎಂಜಿನಿಯರ್ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಕ್ಷ್ಮೀ, ಸುಬೋಧ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ ಉಪಸ್ಥಿತರಿದ್ದರು.
ಅವ್ಯವಸ್ಥೆಗೆ ತರಾಟೆಅಂಬೇಡ್ಕರ್ ಭವನ ಕಾಮಗಾರಿ ಸ್ಥಳದಲ್ಲಿ ಕಬ್ಬಿಣದ ಸರಳುಗಳು ರಸ್ತೆಗೆ ಚಾಚಿ ಅಪಾಯಕಾರಿ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು, ಗುತ್ತಿಗೆ ಸಂಸ್ಥೆ ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಬೇರೆ ವಾಹನಗಳು ನಿರ್ಮಾಣದ ಸ್ಥಳಕ್ಕೆ ಪ್ರವೇಶಿಸುವುದರಿಂದ ನಮ್ಮ ಸ್ವತ್ತಿಗೆ ತೊಂದರೆ ಉಂಟಾಗಬಹುದು. ಒಂದು ದಿಕ್ಕಿನಲ್ಲಿ ಗೇಟು ಅಳವಡಿಸಿ ಪ್ರವೇಶ ನಿರ್ಬಂಧಿಸುವುದು ಸೂಕ್ತ ಎಂದು ಹರೀಶ್ ಕಂಜಿಪಿಲಿ ಸೂಚಿಸಿದರು.