Advertisement

ಸುಳ್ಯ: ಗಾಳಿ-ಮಳೆ; ವ್ಯಾಪಕ ಹಾನಿ

08:55 AM Jul 21, 2017 | Team Udayavani |

ಸುಳ್ಯ : ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ಭಾರೀ ಗಾಳಿ ಮಳೆಯಾಗಿದ್ದು, ಮರ ಹಾಗೂ ಕೊಂಬೆಗಳು ಬಿದ್ದ ಪರಿಣಾಮ ಹಲವು ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್‌ ಅಸ್ತವ್ಯಸ್ತಗೊಂಡಿದೆ. ಕೃಷಿಗೂ ಹಾನಿಯಾಗಿವೆ.

Advertisement

ಸುಳ್ಯ ಹಾಗೂ ಪಂಜ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 12 ಮನೆಗಳ ಸಹಿತ 1 ಮಸೀದಿ ಮತ್ತು ಪಂಚಾಯತ್‌ ವಸತಿಗೃಹ ಕಟ್ಟಡಗಳು ಜಖಂಗೊಂಡಿವೆ.

ಪುತ್ತೂರು-ಸುಳ್ಯ 33 ಕೆ.ವಿ. ವಿದ್ಯುತ್‌ ಮಾರ್ಗದ ಬೊಳುಬೈಲು ಮತ್ತು ಜಾಲೂÕರು ಸಮೀಪ ಮರ ಉರುಳಿ ಮುಖ್ಯವಿದ್ಯುತ್‌ ವಿತರಣಾ ಮಾರ್ಗಕ್ಕೆ ಹಾನಿಯಾಗಿದೆ. ತಾಲೂಕಿನಾದ್ಯಂತ 80 ವಿದ್ಯುತ್‌ ಕಂಬಗಳ ಸಹಿತ ತಂತಿ ಮತ್ತು ಉಪಕರಣಗಳು ಹಾನಿಗೊಂಡು ಮೆಸ್ಕಾಂಗೆ 15 ಲಕ್ಷ ರೂಪಾಯಿನಷ್ಟು ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಇಳಿಕೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ  ಬುಧವಾರ ಮುಳುಗಡೆಯಾಗಿದ್ದ ಕುಮಾರಧಾರಾ ಹಳೆಯ ಸೇತುವೆ, ಪುತ್ತೂರು- ಸುಬ್ರಹ್ಮಣ್ಯ ರಸ್ತೆಯ ಸೇತುವೆ, ಸ್ನಾನಘಟ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆ ಪ್ರವಾಹ ಇಳಿಕೆಯಾಗಿದೆ. ಪಯಸ್ವಿನಿ ನದಿ ನೀರಿನ ಮಟ್ಟವೂ ಇಳಿಕೆಯಾಗಿದೆ. ಗುರುವಾರ ಮಧ್ಯಾಹ್ನ ಬಳಿಕ ಮಳೆ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next