Advertisement
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ಮತ್ತು ಸಮ್ಮೇಳನ ಸಂಘಟನ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮಲ್ಲಿಕಾರ್ಜುನ ದೇವಾಲಯ ತೊಡಿಕಾನ, 23ನೇ ಸಾಹಿತ್ಯ ಸಮ್ಮೇಳನ ಸಂಘಟನ ಸಮಿತಿಯ ಆಶ್ರಯದಲ್ಲಿ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಾ| ಕೀಲಾರು ಗೋಪಾಲಕೃಷ್ಣ ವೇದಿಕೆ-ಉಳುವಾರು ಪಟೇಲ್ ಮಾಯಿಲಪ್ಪ ಗೌಡ ಸಭಾಂಗಣದಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಲಲಿತಾಜ ಮಲ್ಲಾರ ವಹಿಸಲಿದ್ದಾರೆ.
Related Articles
Advertisement
ಸಮಾರೋಪ ಸಮಾರಂಭಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ರವಿಕಾಂತೇ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿಲಿದ್ದಾರೆ. ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ತಾ.ಪಂ. ಸದಸ್ಯೆ ಪುಷ್ಪಾ ಮೇದಪ್ಪ ಗೌಡ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ 10 ಸಾಧಕರನ್ನು ಸಮ್ಮಾನಿಸಲಾಗುವುದು. ಸಮಾಜಸೇವೆಗೆ ಸುಶೀಲಮ್ಮ ಮರುವಳ, ಸಹಕಾರಿ ಆಡಳಿತ ಸೇವೆಗೆ ವಿಶ್ವನಾಥ ನಾಯರ್, ಪೋಲಿಸ್ ಸೇವೆಯಲ್ಲಿ ಎ.ಜಿ. ವೆಂಕಟ್ರಮಣ, ಪಂಚಾಯತ್ ಆಡಳಿತ ಸೇವೆಗೆ ಯು.ಡಿ. ಶೇಕರ್, ಉರಗ ಸ್ನೇಹಿ ಶಿವಾನಂದ ಕುಕ್ಕುಂಬಳ, ಉದ್ಯಮ ಮತ್ತು ಸಮಾಜಸೇವೆಗೆ ಯು.ಬಿ. ಚಕ್ರಪಾಣಿ, ಸ್ವ ಉದ್ಯೋಗ ಕ್ಷೇತ್ರದಲ್ಲಿ ಎಂ.ಕೆ. ರಾಮಚಂದ್ರ, ಕಲೆ, ಸಾಂಸ್ಕೃತಿಕ ಸೇವೆಗೆ ಮಂಜುನಾಥ ಬಂಗ್ಲೆಗುಡ್ಡೆ, ದುಡಿ ಮತ್ತು ಕೊಳಲು ವಾದನದ ಕ್ಷೇತ್ರದಲ್ಲಿ ಪಿ. ಜಯರಾಮ ಅವರನ್ನು ಸಮ್ಮಾನಿಸಲಾಗುವುದು ಎಂದು ಹೇಳಿದರು. ಬಳಿಕ ಕುಂದಾಪರದ ಪ್ರಸಿದ್ಧ ರೂಪಕಲಾ ನಾಟಕ ತಂಡದವರಿಂದ ಕರಾವಳಿ ಮುತ್ತು ಸತೀಶ್ ಪೈ ನಿರ್ದೇಶನದ ಕನ್ನಡ ಹಾಸ್ಯಮಯ ನಾಟಕ ‘ಮೂರು ಮುತ್ತು’ ಪ್ರದರ್ಶನವಿದೆ. ಬಳಿಕ ಸರಕಾರಿ ಪ್ರಾಥಮಿಕ ಶಾಲೆ ತೊಡಿಕಾನ, ನೆಹರೂ ಸ್ಮಾರಕ ಪ.ಪೂ. ಕಾಲೇಜು ಅರಂತೋಡು ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನರಂಜನ ಕಾರ್ಯ ಕ್ರಮ ನಡೆಯಲಿದೆ. ದೀಪಕ್ ರೈ ಪಾಣಾಜೆರವರ ಸಾರಥ್ಯದಲ್ಲಿ ಮಸ್ಕಿರಿ ಕುಡ್ಲ ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ ಎಂದು ಹೇಳಿದರು. ಸಂಚಾಲಕ ಕೆ.ಆರ್. ಗಂಗಾಧರ್, ಸೋಮಶೇಖರ್ ಕೊಯಿಂಗಾಜೆ, ಕೇಶವ ಕೊಳಲುಮೂಲೆ, ಆನಂದ ಕಲ್ಲುಗದ್ದೆ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.