Advertisement

Sullia ಐವರ್ನಾಡು ಸರಕಾರಿ ಶಾಲೆಯಿಂದ ನಗದು ಕಳವು

10:25 PM Dec 09, 2023 | Team Udayavani |

ಸುಳ್ಯ: ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಳನುಗ್ಗಿ ನಗದು ಕಳವು ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

Advertisement

ಮುಖ್ಯ ಶಿಕ್ಷಕರು ಶುಕ್ರವಾರ ಬೆಳಗ್ಗೆ ಶಾಲೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಮುಖ್ಯ ಶಿಕ್ಷಕರ ಕೊಠಡಿಯ ಗೋದ್ರೆಜ್‌ನಲ್ಲಿ ಇರಿಸಿದ್ದ ಮಕ್ಕಳ ಸಂಚಯಿತ ನಿಧಿಗೆ ಸಂಗ್ರಹವಾಗಿದ್ದ 9,380 ರೂ. ಹಾಗೂ ಶಾಲೆಯಿಂದ ಸ್ಟೇಷನರಿ ಸೊತ್ತನ್ನು ಮಕ್ಕಳಿಗೆ ಮಾರಾಟ ಮಾಡಿ ಬಂದ ಒಟ್ಟು 21,414 ರೂ ಹಣವನ್ನು ಕಳವುಗೈಯಲಾಗಿದೆ.

ಬಾಗಿಲಿನ ಬೀಗವನ್ನು ಮುರಿದು, ಡ್ರಾವರ್‌ನಲ್ಲಿದ್ದ ಕೀ ಸಹಾಯದಿಂದ ಗೋದ್ರೇಜ್‌ ತೆರೆದು ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಒಟ್ಟು 30,794 ರೂ. ಕಳ್ಳರ ಪಾಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಬೆಳ್ಳಾರೆ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಮುಖ್ಯಗುರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next