Advertisement
ಕಳೆದ ಕೆಲ ದಿನಗಳಲ್ಲಿ ಬಿಸಿಲ ಬೇಗೆಗೆ ಬಸವಳಿದಿರುವ ತಾಲೂಕಿನಲ್ಲಿ ಬಹುತೇಕ ನೀರಿನ ಮೂಲಗಳು ಬತ್ತಿವೆ. ಹರಿವು ಇಳಿಕೆ ಕಂಡಿರುವ ಕಾರಣ ಮರಳು ಚೀಲ ಬಳಸಿ ಕಟ್ಟ ನಿರ್ಮಿಸಿ ನೀರು ಸಂಗ್ರಹಿಸಲಾಗಿದೆ.
ನಾಲ್ಕು ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದೆ. ನದಿ ಭಾಗದಲ್ಲಿ 50 ಕೆ.ಜಿ. ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಲಾಗುತ್ತದೆ. ಇಂತಹ ಮೂರು ಸಾವಿರಕ್ಕೂ ಮಿಕ್ಕಿದ ಚೀಲ ಬಳಸಲಾಗಿದೆ. ನೀರು ಸಂಗ್ರಹಕ್ಕೆ ಮೊದಲು ಪಂಪ್ ಹೌಸ್ ಬಳಿ ಬಾವಿ ಹೂಳೆತ್ತಿ ಸ್ವಚ್ಛಗೊಳಿಸಲಾಗಿದೆ. ಕೊಡಗಿನ ಪ್ರಾಕೃತಿಕ ಅವಘಡದ ಪರಿಣಾಮ ಹೂಳಿನ ಪ್ರಮಾಣ ದುಪ್ಪಟ್ಟಾಗಿತ್ತು. ನಗರದ ನೀರಿನ ಬೇಡಿಕೆ
ಕಲ್ಲುಮುಟ್ಲು ಪಂಪ್‌ಹೌಸ್‌ಗೆ ಬೇಸಗೆಯಲ್ಲಿ ತಾತ್ಕಾಲಿಕ ಕಟ್ಟದ ನೀರೇ ಆಧಾರ. 365 ದಿನ 24 ಗಂಟೆ ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. 50 ಎಚ್‌ಪಿಯ 1 ಮತ್ತು 45 ಎಚ್‌ಪಿಯ 2 ಪಂಪ್ ಗಳಿದ್ದು, ನೀರನ್ನು ಸಂಗ್ರಹಿಸಿ ಪಂಪ್ ಹೌಸ್ ಬಾವಿಗೆ, ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ.
Related Articles
Advertisement
ಶುಚಿತ್ವಕ್ಕೆ ಫಲಕ ಅಳವಡಿಸಲಿಮರಳಿನ ಕಟ್ಟದ ನೀರಿನ ಸ್ವಚ್ಛತೆಗೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಎರಡು ವರ್ಷದ ಹಿಂದೆ ಸಂಗ್ರಹಗೊಂಡಿರುವ ನೀರಿನಲ್ಲಿ ಈಜಾಟಕ್ಕೆಂದು ಇಳಿದ ಘಟನೆಗಳು ನಡೆದಿತ್ತು. ಮೀನು ಬೇಟೆಗೆ ವಿಷ ಪದಾರ್ಥ ಬಳಕೆ ಮಾಡಿದ ಉದಾಹರಣೆಗಳಿವೆ. ಇದರಿಂದ ಮಲೀನ ನೀರನ್ನು ಕುಡಿಯಲು ಬಳಸಬೇಕಾದ ಸ್ಥಿತಿ ಉಂಟಾಗಿತ್ತು. ಹೀಗಾಗಿ ಮರಳಿನ ಕಟ್ಟದ ಮೇಲ್ಭಾಗದಲ್ಲಿ ಈಜಾಟ, ಮೀನು ಬೇಟೆ ನಿಷೇಧ, ನದಿಗೆ ತ್ಯಾಜ್ಯ ಎಸೆಯದಂತೆ ನ.ಪಂ. ವತಿಯಿಂದ ನದಿ ತಟದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕಿದೆ. ನೀರಿನ ಕೊರತೆ ಸಾಧ್ಯತೆ?
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಅದೀಗ 25 ಸಾವಿರ ದಾಟಿರಬಹುದು. ದಿನವೊಂದಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್.ಡಿ. ವ್ಯಕ್ತಿಯೊಬ್ಬರಿಗೆ ನೀಡುತ್ತಿರುವ ನೀರು 90 ಲೀಟರ್. ಅಂದರೆ, 45 ಲೀ. ನೀರು ಕೊರತೆಯಿದೆ. ಈ ಬಾರಿ ನದಿ ಮೂಲಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪಯಸ್ವಿನಿ ನದಿಯಲ್ಲಿ ಪ್ರಾಕೃತಿಕ ವಿಕೋಪ ಉಂಟಾದ ಬಳಿಕ ಬಹುತೇಕ ಆಳಗಳು ಕಣ್ಮರೆ ಆಗಿವೆ. ಮರಳು ಮಿಶ್ರಿತ ಕಪ್ಪು ಮಣ್ಣು ತುಂಬಿದೆ. ಅಲ್ಲಲ್ಲಿ ಮರಳು ಮಿಶ್ರಿತ ಮಣ್ಣಿನ ಹೂಳಿನ ದಿಬ್ಬಗಳಿವೆ. ಕೆಳಭಾಗದ ಹರಿವು ಮೇಲ್ಭಾಗಕ್ಕೆ ಬಂದ ಕಾರಣ, ನದಿ ನೀರಿನ ಹರಿವು ಕೂಡ ಇಳಿಮುಖ ಕಂಡಿದೆ. ಹೀಗಾಗಿ ಎಪ್ರಿಲ್‌ನಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ನೀರಿನ ಬರ ಬರುವ ಸಾಧ್ಯತೆ ಕೂಡ ಹೆಚ್ಚಿದೆ. ವೆಂಟೆಡ್ ಡ್ಯಾಂ ಮರೀಚಿಕೆ
ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರಕಾರಕ್ಕೆ ಸಲ್ಲಿಸಿದ 65.5 ಕೋ. ರೂ. ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಪಂಪ್‌ಹೌಸ್ ಸನಿಹದ ನಾಗಪಟ್ಟಣದಲ್ಲಿ ವೆಂಟೆಡ್ ಡ್ಯಾಂ, ಜಾಕ್‌ವೆಲ್ ಪಂಪ್ ಹೌಸ್, ವಾಟರ್ ಟ್ರೀಟ್ ಪ್ಲಾಂಟ್ ರಚನೆ ಸಹಿತ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರಸ್ತಾವಿಸಲಾಗಿತ್ತು. ಎಂಟು ವರ್ಷ ಕಳೆದರೂ ಅದು ಅನುಷ್ಠಾನಗೊಂಡಿಲ್ಲ. ಎತ್ತರ ಹೆಚ್ಚಿಸಲಾಗುವುದು
ತಾತ್ಕಾಲಿಕ ಮರಳು ಕಟ್ಟ ನಿರ್ಮಿಸಲಾಗಿದೆ. ಇದರ ಎತ್ತರವನ್ನು ಇನ್ನೂ ಹೆಚ್ಚಿಸಲಾಗುವುದು. ನೀರು ಶುದ್ಧೀಕರಣಗೊಂಡ ಬಳಿಕ ಅದನ್ನು ಪೂರೈಸಲಾಗುತ್ತಿದೆ.
– ಮತ್ತಡಿ ಮನೋ
ಮುಖ್ಯಾಧಿಕಾರಿ, ನ.ಪಂ. ಸುಳ್ಯ ಕಿರಣ್ ಪ್ರಸಾದ್ ಕುಂಡಡ್ಕ