ಪ್ರತಿಷ್ಠಾ ಕಲಶಾಭಿಷೇಕದ ಅನಂತರ ಪಂಚಪರ್ವ, ಪ್ರಸನ್ನ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
Advertisement
ಗರಡಿ ವಠಾರದಲ್ಲಿ ಗುರುವಾರ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಧ್ಯಾಹ್ನ ಅನ್ನದಾನ, ಸಂಜೆ ಬ್ರಹ್ಮರಗುಂಡದಲ್ಲಿ ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಅಧಿವಾಸ ಕರ್ಮಾದಿಗಳು, ಬಿಂಬಶುದ್ಧಿ, ಅಧಿವಾಸ ಹೋಮ, ಬಿಂಬಾಧಿವಾಸ, ತಣ್ತೀ ಹೋಮ, ಕಲಶಾಧಿವಾಸ, ರಾತ್ರಿ ಅನ್ನದಾನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಕನ್ನಡ್ಕ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, ರಾತ್ರಿ ಸುಳ್ಯಪದವು ಕೋಟಿ ಚೆನ್ನಯ ಭಕ್ತ ವೃಂದದ ಪ್ರಾಯೋಜಕತ್ವದಲ್ಲಿ ದಯಾನಂದ ಕತ್ತಲ್ ಸಾರ್ ನಿರ್ದೇಶನದ ತುಳುನಾಡ ಸಂಸ್ಕೃತಿ ನಡೆಯಿತು.
ಶ್ರೀ ಬ್ರಹ್ಮಬೈದರ್ಕಳ ಗರಡಿಯ ಪುನಃಪ್ರತಿಷ್ಠಾ ಕಲಶಾಭಿಷೇಕದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ತೆಂಕಿಲ ಯಕ್ಷ ಚಿಣ್ಣರ ಬಳಗದಿಂದ ಏಕಾದಶಿ ದೇವಿ ಮಹಾತ್ಮೆ, ಮೈಂದ- ದಿವಿದ ಕಾಳಗ ಯಕ್ಷಗಾನ ಬಯಲಾಟ ನಡೆಯಿತು. ಯಕ್ಷಗಾನ ಕಲಾವಿದ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಚಂದ್ರಶೇಖರ್ ಸುಳ್ಯಪದವು ಇವರ ಸಂಯೋಜನೆಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಇರ್ದೆ, ಚೆಂಡೆ ರಾಜೇಂದ್ರಪ್ರಸಾದ್ ಪುಂಡಿಕಾç, ಮದ್ದಳೆ ಸುಧೀರ್ ಪಾಣಾಜೆ, ಮುಮ್ಮೇಳದಲ್ಲಿ ಬಾಲ ಕಲಾವಿದರಾಗಿ ದೇವೇಂದ್ರ ಮತ್ತು ಸತ್ಯಭಾಮೆ- ಆದಿತ್ಯನಾರಾಯಣ, ಅಗ್ನಿ -ಭವಿಷ್ ಬಿ., ವಾಯು- ಶ್ಯಮಂತ್, ನಾಡೀಜಂಘ- ಯಾತಿನ್, ಬಿಡಲಾಸುರ- ಬಬಿನ್ ರೈ, ವಿಷ್ಣು ಮತ್ತು ಕೃಷ್ಣ- ಪ್ರದೀಪ್‌ಕೃಷ್ಣ ಐ., ಗರುಡ- ಪರೀಕ್ಷಿತ್, ಮೇಘಮುಖೀ ಮತ್ತು ಸಿಂಹಮುಖ- ಖುಷಿ ರೈ, ಮುರಾಸುರ – ಮಿಥುನ್ ವಿ.ಕೆ., ದೇವಿ- ಶ್ರೇಯಾ, ರಕ್ಕಸದೂತ- ಬಬಿನ್ ರೈ, ಮೈಂದ – ಯತಿನ್, ದ್ವಿವಿದ ಮತ್ತು ರುಕ್ಮಿಣಿ- ಭವಿಷ್ ಬಿ., ಬಲರಾಮ- ಅಮೋಘಶಂಕರ ನಿರ್ವಹಿಸಿದರು.