Advertisement
ಶಿಕ್ಷಣ ಅಂಕ ಮತ್ತು ಬದುಕಿಗೆ ಮಾತ್ರವಾಗದೆ ಜ್ಞಾನದ ವಿಕಸನ ಮತ್ತು ಆತ್ಮ ಸ್ಥೈರ್ಯದ ಉದ್ದೀಪನಕ್ಕೆ ಕಾರಣವಾಗಬೇಕು. ಎಲಿಮಲೆ ಶಾಲೆಗೆ ಬೇಕಾಗುವ ಕಂಪ್ಯೂಟರ್, ಶೌಚಾಲಯಗಳನ್ನು ಎಂಆರ್ ಪಿಎಲ್ ಮೂಲಕ ಕೊಡಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ, ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಮುಂಡೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಟಿ. ವೀಣಾ, ದೇವಚಳ್ಳ ಗ್ರಾ.ಪಂ. ಸದಸ್ಯರಾದ ಶೈಲೇಶ್ ಅಂಬೆಕಲ್ಲು, ಕೃಷ್ಣಯ್ಯ ಮೂಲೆತೋಟ ಉಪಸ್ಥಿತರಿದ್ದರು. ಮುಖ್ಯ ಗುರು ಚಂದ್ರಶೇಖರ ಪೇರಾಲು ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಮುರಳೀಧರ ಪುನ್ಕುಟ್ಟಿ ವರದಿ ವಾಚಿಸಿದರು. ಶಿಕ್ಷಕ ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ನೂತನ ಪ್ರಯೋಗಾಲಯ ಕೊಠಡಿಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತು ನೂತನ ಗ್ರಂಥಾಲಯ ಕೊಠಡಿಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿ, ಈ ಎಲ್ಲ ಅನುಕೂಲತೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.