Advertisement

Sullia ಅಕ್ರಮ ಮರಳು ಸಾಗಾಟ: ಆರೋಪಿ ವಶಕ್ಕೆ

01:09 AM Jan 03, 2024 | Team Udayavani |

ಸುಳ್ಯ: ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

ಸುಳ್ಯ ಕಸಬಾ ಗ್ರಾಮದ ಮಹಮ್ಮದ್‌ ಬಶೀರ್‌ (36) ಆರೋಪಿ. ಜ.1ರಂದು ರಾತ್ರಿ ಜಾಲ್ಸೂರು ಗ್ರಾಮದ ಅಡ್ಕಾರ್‌ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದ್ವಾರದ ಬಳಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಸುಳ್ಯ ಪೊಲೀಸ್‌ ಠಾಣಾ ತನಿಖೆ ಎಸ್‌ಐ ಸರಸ್ವತಿ ಬಿ.ಟಿ. ಹಾಗೂ ಸಿಬಂದಿ ಪತ್ತೆ ಹಚ್ಚಿ ಆರೋಪಿಯನ್ನು ಲಾರಿ ಹಾಗೂ 5 ಸಾವಿರ ರೂ. ಮೌಲ್ಯದ ಮರಳಿನೊಂದಿಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next