ವಾಗಿ ಹುಬ್ಬಳ್ಳಿಗೆ ಆರಂಭಿಸಲಾದ ನೂತನ ಮಾರ್ಗಸೂಚಿ ವೇಗದೂತ ಸಾರಿಗೆಯ ಸಂಚಾರಕ್ಕೆ ಶುಕ್ರವಾರ ಶಾಸಕ ಎಸ್. ಅಂಗಾರ ಅವರು ಚಾಲನೆ ನೀಡಿದರು.
Advertisement
ಈ ಸಂದರ್ಭ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ನಗರ ಪಂಚಾಯತ್ ಸದಸ್ಯರಾದ ಎನ್.ಎ. ರಾಮಚಂದ್ರ, ಗಿರೀಶ್ ಕಲ್ಲಗದ್ದೆ, ಗೋಪಾಲ್ ನಡುಬೈಲು, ಎಪಿಎಂಸಿ ಸದಸ್ಯ ಜಯಪ್ರಕಾಶ್ ಕುಂಚಡ್ಕ, ಸಾಮಾಜಿಕ ಧುರೀಣ ಉಮೇಶ್ ವಾಗ್ಲೆ, ಸಾರಿಗೆ ಸಂಸ್ಥೆಯ ಸಂಚಾರಿ ನಿರೀಕ್ಷಕರಾದ ಪದ್ಮನಾ ಥನ್, ಡಿಪೋ ಮ್ಯಾನೇಜರ್ ವಸಂತ ನಾಯ್ಕ, ಸಂಚಾರಿ ನಿಯಂತ್ರಕರಾದ ಕೆ. ಕರುಣಾಕರ ಗೌಡ, ಗಂಗಾಧರ ಮತ್ತು ಸಂಸ್ಥೆಯ ಸಿಬಂದಿ ಉಪಸ್ಥಿತರಿದ್ದರು.
ನೂತನ ಬಸ್ ಪ್ರತೀ ದಿನ ಸಂಜೆ 7 ಗಂಟೆಗೆ ಸುಳ್ಯ ಘಟಕದಿಂದ ಹೊರಟು ಮರುದಿನ ಬೆಳಗ್ಗೆ ಹುಬ್ಬಳ್ಳಿ ತಲುಪಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8 ಗಂಟೆಗೆ ಸುಳ್ಯವನ್ನು ತಲುಪಲಿದೆ. ಮುಂಗಡ ಟಿಕೇಟು ಲಭ್ಯ
ಈ ನೂತನ ಬಸ್‌ಗೆ ಸುಳ್ಯ, ಪುತ್ತೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಮುಂಗಡ ಟಿಕೇಟು ಕಾದಿರಿಸುವ ವ್ಯವಸ್ಥೆ
ಮಾಡಲಾಗಿದೆ. ಶೀಘ್ರದಲ್ಲೇ ಸುಳ್ಯದಿಂದ ಪಾಣತ್ತೂರು ಮಾರ್ಗವಾಗಿ ಕಾಂಞಗಾಡ್ ಮಾರ್ಗಸೂಚಿ ಕಾರ್ಯರಂಭಿಸಲಿದೆ ಎಂದು ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.