Advertisement
ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಐತೆ ಅವರ ಮನೆ ಸಮೀಪದ ಬೃಹತ್ ಮರ ಮನೆ ಮೇಲೆ ಬಿದ್ದಿದ್ದು, ಮನೆಯ ಮೇಲ್ಛಾವಣಿ, ಗೋಡೆ ಸಂಪೂರ್ಣ ಧರಾಶಾಯಿಯಾಗಿದೆ. ಮನೆಯಲ್ಲಿ ಮಲಗಿದ್ದ ಐತೆ, ರವಿ, ಮಾಲತಿ, ಮಕ್ಕಳಾದ ಆದರ್ಶ ಮತ್ತು ಯಕ್ಷಿತಾ ಹಾಗೂ ಪಕ್ಕದ ಮನೆಯ ಚೋಮು ಅವರಿಗೆ ಗಾಯವಾಗಿದೆ. ಮಾಹಿತಿ ತಿಳಿದ ಕೂಡಲೇ ಧಾವಿಸಿ ಬಂದ ಸ್ಥಳೀಯರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದರು. ಯಕ್ಷಿತಾ ಹಾಗೂ ಅದೇ ಮನೆಯ ಪಕ್ಕದ ಮನೆಯ ಚಂರ್ಬ ಅವರಿಗೆ ಸಣ್ಣಪುಟ್ಟಗಾಯವಾಗಿದೆ.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಪಂಜ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಗ್ರಾಮ ಆಡಳಿತಾಧಿಕಾರಿ ಭಾರತಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.