Advertisement

ಸುಳ್ಯ ಕಾಂಗ್ರೆಸ್‌ ಸಮಾವೇಶ: ಜಿಲ್ಲೆಯ ಎಂಟೂ ಸ್ಥಾನ ಗಳಿಸುವ ಗುರಿ

03:20 AM Jul 16, 2017 | |

ಸುಳ್ಯ: ತಿಂಗಳೊಳಗಾಗಿ ಬೂತ್‌ ಸಮಿತಿ ರಚನೆ, ಪ್ರತೀ ತಿಂಗಳಿಗೊಂದು ಬ್ಲಾಕ್‌ಸಭೆ, ಸರಕಾರದ ಸಾಧನೆಗಳನ್ನು ಪ್ರತೀ ಮನೆಗಳಿಗೆ ತಿಳಿಸುವ ಈ ಮೂರು ಅಜೆಂಡಾ ಗಳನ್ನಿಟ್ಟುಕೊಂಡರೆ ಸುಳ್ಯ ವಿಧಾನಸಭಾ ಕ್ಷೇತ್ರ ಸಹಿತ ಜಿಲ್ಲೆಯ 8 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಬಹುದು ಎಂದು ಮೈಸೂರುವಿಭಾಗದ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ. ಸುಳ್ಯ ಲಯನ್ಸ್‌ ಸೇವಾ ಸದನದಲ್ಲಿ ಶನಿವಾರ ನಡೆದ ಸುಳ್ಯ ತಾಲೂಕು ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ಕೆಪಿಸಿಸಿ ಮುಖಂಡ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಅಧಿಕಾರಕ್ಕೇರುವ ಕನಸಿಗೆ ತಡೆಯೊಡ್ಡಬೇಕು ಎಂದರು. ಸಚಿವ ರಮಾನಾಥ ರೈ ಮಾತ ನಾಡಿ, ರಾಜ್ಯ ಸರಕಾರ ಪ್ರಣಾಳಿಕೆಯ ಶೇ. 95ರಷ್ಟು ಭರವಸೆಯನ್ನು ಈಡೇರಿಸಿದೆ. ಕಾನೂನು ತೊಡಕುಗಳನ್ನು ಮೀರಿ ಅಭಿವೃದ್ಧಿ ಕೈಗೊಳ್ಳುವ ಇಚ್ಛಾಶಕ್ತಿ ಪ್ರಕಿಟಿಸಿದ್ದಾರೆ. ಹಿಂದೆ ಸಾಲಮನ್ನಾ ಮಾಡಿದ ಬಿಜೆಪಿಗರು ಸಹಕಾರಿ ಸಂಸ್ಥೆಗಳಿಗೆ ಹಣವನ್ನೇ ನೀಡಿರಲಿಲ್ಲ. ಆದರೆ ಸಿದ್ದರಾಮಯ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿ ಅತ್ಯಲ್ಪ
ಅವಧಿಯಲ್ಲಿ ಹಣ ಬಿಡುಗಡೆಗೊಳಿಸಿದೆ ಎಂದರು.

ನಿಷೇಧಾಜ್ಞೆ  ತೆರವು
ಬಳಿಕ ಪಾದಯಾತ್ರೆ

ಮತೀಯವಾದಿಗಳು ಅಲ್ಪಸಂಖ್ಯಾಕರಿ ರಲಿ ಬಹುಸಂಖ್ಯಾಕ‌ರಿರಲಿ ಅವರನ್ನು ಕಾಂಗ್ರೆಸ್‌ ಪಕ್ಷವು ವಿರೋಧಿಸುತ್ತದೆ. ಎರಡು ಸಂಘಟನೆಗಳ ಮೇಲಾಟದಿಂದಾಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಯಾ ಗಿದೆ. ಆದರೆ ಇದರಲ್ಲಿ ಪಕ್ಷದ ಹಿಂದೂ, ಮುಸ್ಲಿಂ ಕಾರ್ಯಕರ್ತರು ಭಾಗಿಯಾಗಿಲ್ಲ. ಜಿಲ್ಲೆಯಲ್ಲಿ ಆಗುತ್ತಿರುವುದು ಭಾವನಾ ತ್ಮಕ ಕೋಮುಸಂಘರ್ಷವಲ್ಲ. ಬದ ಲಾಗಿ ಸಂಘಟನೆಗಳ ನಿಯೋಜಿತ ಕೃತ್ಯ ವಾಗಿದೆ. ನಿಷೇಧಾಜ್ಞೆ ತೆರವುಗೊಂಡ ಬಳಿಕ ಮಂಗಳೂರಿನಿಂದ ಬಂಟ್ವಾಳಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ರೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next