Advertisement

ಸುಳ್ಯ ಬಂದ್‌: ಹಾಲು ಪೂರೈಕೆಗೆ ತಡೆ; ಪರದಾಟ

11:13 PM Mar 28, 2020 | Sriram |

ಸುಳ್ಯ: ಸಂಪೂರ್ಣ ಬಂದ್‌ನಿಂದಾಗಿ ಶನಿವಾರ ತಾಲೂಕಿನಲ್ಲಿ ಜನಜೀವನ ಸ್ತಬ್ಧವಾಗಿತ್ತು. ಜನ, ವಾಹನ ಓಡಾಟಕ್ಕೆ ಕಡಿವಾಣ ಬಿದ್ದು, ಲಾಕ್‌ಡೌನ್‌ ಆದೇಶ ಪಾಲನೆ ಆಯಿತು. ಜಾಲೂÕರು, ಸುಳ್ಯ, ಕಲ್ಲುಗುಂಡಿ ಕಡೆ ನಿಯಮ ಮೀರಿ ರಸ್ತೆಗೆ ಇಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

Advertisement

ಹಾಲು ಪೂರೈಕೆಗೆ ಅಡ್ಡಿ
ಹಾಲು ಪೂರೈಕೆಗೆ ಸರಕಾರ ಅವಕಾಶ ನೀಡಿದ್ದರೂ ಶನಿವಾರ ಅಡ್ಡಿ ಉಂಟಾಯಿತು. ಹಲವೆಡೆ ಹಾಲು ಪೂರೈಕೆ ವಾಹನಗಳಿಗೆ ಪೊಲೀಸರು ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಸಂಜೆ ವೇಳೆ ಹಾಲಿನ ಡಿಪೋಗಳಲ್ಲಿ ಹಾಲು ಖರೀದಿ ಸ್ಥಗಿತ ಮಾಡಲಾಯಿತು. ದಿನಕ್ಕೆ 200ಕ್ಕೂ ಅಧಿಕ ಲೀಟರ್‌ ಹಾಲು ಪೂರೈಕೆ ಮಾಡುವ ಹೈನುಗಾರರಿದ್ದು, ತೊಂದರೆಗೀಡಾದರು.

ಅಲೆಮಾರಿ ಕುಟುಂಬಗಳಿಗೆ ನೆರವು
ಸುಳ್ಯ ಕಸಬಾ ಗ್ರಾಮದ ಕಂದಡ್ಕದಲ್ಲಿ ಡೇರೆ ಹಾಕಿರುವ ಅಲೆಮಾರಿ ಜನರಿಗೆ ದುಗ್ಗಲಡ್ಕದ ಸಂಘ ಸಂಸ್ಥೆಗಳ ಸದಸ್ಯರು ಹಣ ಸಂಗ್ರಹಿಸಿ ಅಕ್ಕಿ, ಧಾನ್ಯಗಳನ್ನು ನೀಡಿದರು. ಯತೀಶ್‌ ರೈ ದುಗ್ಗಲಡ್ಕ, ನ.ಪಂ. ಸದಸ್ಯ ಬಾಲಕೃಷ್ಣ ರೈ ದುಗಲಡ್ಕ, ದಿನೇಶ್‌ ಮಣಿಯಾಣಿ, ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ, ಮಾಜಿ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಹೇಮಂತ್‌ ಕಂದಡ್ಕ ಉಪಸ್ಥಿತರಿದ್ದರು.

ಗಡಿ ಗ್ರಾಮದ ಗೋಳು
ಕರ್ನಾಟಕ -ಕೇರಳ ಗಡಿ ಪ್ರದೇಶಗಳಲ್ಲಿ ಕರ್ನಾಟಕ ಸರಕಾರವು ಬ್ಯಾರಿಕೇಡ್‌, ಮಣ್ಣು ಹಾಕಿ ಬಂದ್‌ ಮಾಡಿರುವುದು ಕೇರಳ ದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಪಾಣ ತ್ತೂರಿನ ಕಲ್ಲಪ್ಪಳ್ಳಿ, ಬಂದಡ್ಕದ ಕನ್ನಡಿತೋಡು, ಅಡೂರಿನ ಕನ್ಯಾನ, ಪಂಜಿಕಲ್ಲಿನ ಮುರೂರು ಭಾಗದಲ್ಲಿ ಹೀಗೆ ಬಂದ್‌ ಮಾಡಲಾಗಿತ್ತು.

ಸಮಯ ನಿಗದಿ
ಕೊಡಗಿನಲ್ಲಿ ಸಾರ್ವಜನಿಕರು ಅವಶ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6ರಿಂದ ಅಪರಾಹ್ನ 12ರ ವರೆಗೆ ಸಮಯವನ್ನು ಈ ಹಿಂದೆ ನಿಗದಿಗೊಳಿಸಲಾಗಿತ್ತು. ಸುಳ್ಯ ತಾಲೂಕಿನ ಹಲವು ಗ್ರಾಮಗಳು ಕೊಡಗು ಗಡಿಭಾಗದಲ್ಲಿದ್ದು, ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸ ಬೇಕಾದ ಕಾರಣ ಶನಿವಾರ ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅಗತ್ಯ ವಸ್ತುಗಳನ್ನು ಖರೀದಿಸಲು ಈ ಕೆಳಕಂಡಂತೆ ಸಮಯ ನಿಗದಿಪಡಿಸಲಾಗಿದೆ.

Advertisement

ಬೆಳಗ್ಗೆ 6ರಿಂದ 8ರ ವರೆಗೆ ಹಾಲು, ದಿನಪತ್ರಿಕೆ ಮಾತ್ರ ಖರೀದಿ.ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಆಹಾರ, ದಿನಸಿ, ತರಕಾರಿ, ಹಣ್ಣುಹಂಪಲುಗಳ ಖರೀದಿ.ಎಲ್ಲ ರೀತಿಯ ಮೀನು ಮತ್ತು ಮಾಂಸ ಮಾರಾಟ ನಿಷೇಧ.ಅಗತ್ಯ ವಸ್ತುಗಳ ಖರೀದಿಗೆ ಪ್ರತೀ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮಾತ್ರ ಆಗಮಿಸಬೇಕು.

ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 1 ಮೀ. ಅಂತರ ಕಾಯ್ದುಕೊಳ್ಳಬೇಕು.
ಆಸ್ಪತ್ರೆ, ಕ್ಲಿನಿಕ್‌, ಫಾರ್ಮಸಿ, ಆಪ್ಟಿಕಲ್‌ ಸ್ಟೋರ್‌, ಡಯಾಗ್ನೊàಸ್ಟಿಕ್‌ ಸೆಂಟರ್‌ ಒಳಗೊಂಡಂತೆ ಇತರ ಆರೋಗ್ಯ, ವೈದ್ಯಕೀಯ ಸಂಬಂಧಿ ಅಂಗಡಿ, ಗೋಡೌನ್‌, ಕಾರ್ಖಾನೆಗಳಿಗೆ ಮಾತ್ರ ದಿನದ 24 ಗಂಟೆಗಳು ಕಾರ್ಯಾಚರಿಸಲು ವಿನಾಯಿತಿ.

ದಿನಪತ್ರಿಕೆ ವಿತರಣೆಗೆ ಅಡ್ಡಿ ಇಲ್ಲ
ದಿನಪತ್ರಿಕೆ ವಿತರಣೆಗೆ ಅವಕಾಶ ಇದ್ದು, ಪೊಲೀಸರು ಅಡ್ಡಿ ಮಾಡುವುದಿಲ್ಲ. ಮನೆ ಮನೆಗೆ ಪತ್ರಿಕೆ ವಿತರಣೆ ಮಾಡಬಹುದಾಗಿದೆ. ಈ ತನಕ ಯಾವುದೇ ದೂರು ಬಂದಿಲ್ಲ. ಅಡ್ಡಿ ಉಂಟಾದಲ್ಲಿ ಸಂಪರ್ಕಿಸುವಂತೆ ಸುಳ್ಯ ಠಾಣೆ ಎಸ್‌.ಐ. ಹರೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next